e-ಸುದ್ದಿ, ಸಿಂಧನೂರು
12ನೇ ಶತಮಾನದ ವಚನಗಾರ್ತಿ ಶಿವ ಶರಣೆ ಅಕ್ಕಮಹಾದೇವಿ ಹೆಸರಿನಲ್ಲಿ ಸಿಂಧನೂರು ನಗರದ ಗಂಗಾವತಿ ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಹತ್ತಿರ ಇರುವ ವೃತ್ತಕ್ಕೆ ಅಕ್ಕಾಮಹಾದೇವಿ ವೃತ್ತ ಎಂದು ನಾಮಕರಣ ಮಾಡಿದರು.
ಸಿಂಧನೂರು ತಾಲೂಕು ಬಣಜಿಗ ಸಮಾಜದ ವತಿಯಿಂದ ರವಿವಾರ ಉದ್ಘಾಟಿಸಲಾಯಿತು
ಈ ವೇಳೆ ಸಮಾಜದ ಮುಖಂಡರು ಅಕ್ಕಮಹಾದೇವಿಯವರ ವಚನಗಳ ಮೂಲಕ ಅವರು ಬೆಳೆದು ಬಂದಂತೆ ಹಾದಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಸಂಸಾರವೆಂಬ ಹಗೆಯಯ್ಯ, ತಂದೆ, ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ ನಿಮ್ಮ ಮರೆವೊಕ್ಕೆ ಕಾಯಯ್ಯ ಎನ್ನ ಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಯ್ಯ