ಡಾಲರ ಮುಂದೆ ಸರ್ವಕಾಲಿಕ ಕುಸಿತ ಕಂಡ ರೂಪಾಯಿ
e-ಸುದ್ದಿ ನ್ಯೂಸ್ ಡೆಸ್ಕ್ ಮುಂಬಯಿ
ಡಾಲರ್ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 51 ಪೈಸೆ ಇಳಿಕೆ ಕಂಡಿದ್ದು, ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 77.42 ವಿನಿಮಯವಾಗಿದೆ.
ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿತ್ತು. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು, ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ಕಳೆದ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಇಳಿಕೆ ಕಂಡು 76.90ಗೆ ಕೊನೆಯಾಗಿತ್ತು. ವಿದೇಶ ಬಂಡವಾಳದ ಹೊರ ಹರಿವು, ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.
ರಷ್ಯಾ ಉಕ್ರೇನ್ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿದೆ. ಸೋಮವಾರ ಮತ್ತಷ್ಟು ದರ ಏರಿಕೆಯಾಗಿದ್ದು ಒಂದು ಬ್ಯಾರೆಲ್ ತೈಲದ ದರ 112.25 ಡಾಲರ್‌ಗೆ(8,690 ರೂ.) ಏರಿಕೆಯಾಗಿದೆ. ಚೀನಾದಲ್ಲಿ ಕೊರೊನಾ ಲಾಕ್‌ಡೌನ್, ತೈಲ ಬೆಲೆ ಏರಿಕೆ, ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದ್ದು ಬಿಎಸ್‌ಇ ಸೆನ್ಸೆಕ್ಸ್ ಇಂದು 364.91 ಅಂಶ ಕುಸಿದಿದ್ದು 54,470 ರಲ್ಲಿ ಕೊನೆಯಾಗಿದೆ.