ಸಾವು ಬದುಕು

ಸಾವು ಬದುಕು

ನಾನು ಜೀವನದಲ್ಲಿ ಬಹು ಹೀನಾಯವಾಗಿ ಸೋತೆನೆಂದೆನಿಸಿತು
ಮಹಾಭಾರತದ ಕುರುಕ್ಷೇತ್ರದ ಅತಿರಥ ಮಹಾರಥರಿಗೂ ಹೀನಾಯವಾಗಿ
ಮಹಾಯೋಧ ಸರ್ವ ಶಕ್ತಿ ಸಂಪನ್ನ ರಾವಣನಿಗೂ ಹೀನಾಯವಾಗಿ
ಷಟ್ಖಂಡಾಧಿಪತಿ ಭರತನಿಗಿಂತಲೂ ಭಯಾನಕವಾಗಿ
ಅದಕ್ಕೆ
ಸಾಯಬೇಕೆಂದುಕೊಂಡೆ
ಹಿಮಾಲಯವನ್ನೇರಿ ನೆಗೆದು
ಹಿಂದೂ ಮಹಾ ಸಾಗರದ ನಡುವೆ ಮುಳುಗಿ
ಅಂತರಿಕ್ಷವ ತಲುಪಿ ಆಮ್ಲಜನಕ ಕಿತ್ತೆಸೆದು
ಇಷ್ಟೆಲ್ಲ ದುಬಾರಿಯಾಗಿ ಆಗದಿದ್ದರೂ
ಒಟ್ಟಾರೆ ಸಾಯಬೇಕೆಂದುಕೊಂಡೆ
ಅಷ್ಟರಲ್ಲಿ ಅವಳು ಕಂಡಳು
ಮತ್ತೆ ಬದುಕಿಿದೆ

ಇಂದ್ರ

Don`t copy text!