ಭಾವ ಕಿರಣ” ಕವನ ಸಂಕಲನ ಲೋಕಾರ್ಪಣೆ
e-ಸುದ್ದಿ ಕಲಬುರ್ಗಿ
ಕನ್ನಡ ಭವನದಲ್ಲಿ ಆಯೋಜಿಸಿದ್ದ ಉದಯೋನ್ಮುಖ ಲೇಖಕಿ- ಕವಯತ್ರಿ ಶ್ರೀಮತಿ ಕವಿತಾ ಮಳಗಿ ರವರು ರಚಿಸಿರುವ “ಭಾವ ಕಿರಣ” ಕವನ ಸಂಕಲನವನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಹಾಗೂ ಸಾಹಿತಿಗಳಾದ ಡಾ ಸತೀಶಕುಮಾರ ಹೊಸಮನಿಯವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ವಿ ಟಿವಿಯ ಸಂಪಾದಕರಾದ ಶ್ರೀ ಶಂಕರ ಕೊಡ್ಲಾ, ಹಿರಿಯ ಸಾಹಿತಿ ಹಾಗೂ ಮಹಾಂತ ಜ್ಯೋತಿ ಪ್ರತಿಷ್ಠಾನ ಅಧ್ಯಕ್ಷರಾದ ಡಾ ಶಿವರಾಜ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್ ಪಾಟೀಲ ತೇಗಲತಿಪ್ಪಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ,ಪ್ರೊ ಯಶವಂತರಾಯ ಅಷ್ಠಗಿ, ಕಸಾಪ ಸಾರ್ವಜನಿಕ ಸಂಪರ್ಕ ಪ್ರತಿನಿಧಿ ರಾಜೇಂದ್ರ ಮಾಡಬೂಳ, ವಿಜಯಲಕ್ಷ್ಮಿ ಜವಳಗಿ, ಶ್ವೇತಾಂಬರಿ ಜವಳಗಿ, ಕಲಬುರಗಿಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಅಜಯಕುಮಾರ, ಪದ್ಮವತಿ, ಜಾನೆ, ವಿಶ್ವನಾಥ ತೊಟ್ನಳ್ಳಿ, ಹಾಗೂ ಭಾವಕಿರಣ ಕವನ ಸಂಕಲನದ ಕರ್ತೃ ಶ್ರೀಮತಿ ಕವಿತಾ ಮಳಗಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.