ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣ
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿ ಎಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ,
ಸನ್ನಿಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ,
ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ,ಪ್ರಸಾದ ಬಸವಣ್ಣನಿಂದ ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರಿ ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ, ಕಲಿದೇವರದೇವಾ.
– ಮಡಿವಾಳ ಮಾಚಿದೇವ
ಭಾರತದ ಚರಿತ್ರೆಯಲ್ಲಿ ೧೨ ನೆಯ ಶತಮಾನವು ಬಹಳ ಮಹತ್ವದ್ದು . ಬಸವನ್ನನೆಂಬ ಮಹಾಮಾನವ ಬುದ್ಧನ ನಂತರ ಬಹುದೊಡ್ಡ ಕ್ರಾಂತಿ ಎಸಗಿದನು. ಜಾತಿ. ವೈದಿಕರ ಶೋಷಣೆ, ಪೂಜೆ .ಯಜ್ಞ, ಹವನ ಹೋಮ , ಕಂದಾಚಾರ , ಪ್ರಾಣಿಬಲಿ
ಸ್ತ್ರೀ ಹತ್ತೇ ಹೀಗೆ ಮ್ರುಥಪ್ರಾಯವಾದ ಉಸಿರುಗಟ್ಟಿದ ಕೆಟ್ಟ ವಾತಾವರಣ ಇತ್ತು.
ಎಳೆತನದಲ್ಲಿಯೇ ಜನಿವಾರ ಕಿತ್ತೆಸೆದು, ಹೊಸ ಧರ್ಮದ ಕನಸು ಕಂಡ ಬಸವಣ್ಣ ,ದೇಶದ ಎಲ್ಲ ಜನರಿಗೂ ಅದರ್ಶಪ್ರಾಯನಾದ ,ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಬಸವಣ್ಣನ ಕೊಡುಗೆ ಅಪಾರವಾಗಿದೆ.
೧) ವಚನ ಕ್ರಾಂತಿ
ಅಕ್ಷರ ಕ್ರಾಂತಿ ಬಸವಣ್ಣನ ಮೊದಲ ಆಧ್ಯತೆ ಆಯಿತು .ಪುರೋಹಿತರ , ಸಂಸ್ಕೃತ ಪಂಡಿತರ ಬೇಡ ಭಾವಕ್ಕೆ -ಶಿಕ್ಷಣ ವಂಚಿತರಾದ ಮಹಿಳೆಯರು ದಲಿತರು ಕೂಲಿ ಕಾರ್ಮಿಕರು ಬಸವ ನೇತ್ರತ್ವದಲ್ಲಿ ಅಕ್ಷರಾಭ್ಯಾಸ ಮಾಡಿದರು. ಆಫ್ಘಾನಿಸ್ತಾನದ ಶರಣ ಮರಳುಸಿದ್ದದೆವರು, ಓಡಿಸ್ಸಾದ ಮಹಾರಾಣಿ ಬೋನ್ತದೇವಿ, ಕಾಶ್ಮೀರದ ಅರಸು ಮಹಾದೇವ ಭೂಪಾಲ ,ಮಹಾರ್ಸ್ತ್ರದ ಉರುಲಿಂಗಪೆದ್ದಿ, ತೆಲುಗು ಮಸಣೇಶ, ಅಂಡಾಳರು, ನಯನಾರರು , ಗುರ್ಜರರು ಮುಂತಾದ ಅನೇಕ ಭಾಸಿಕರು ಓದಲು ಕನ್ನಡ ಕಲಿತು ವಚನ ರಚಿಸಿದರು . ಹೊಸ ವಿಚಾರ ಹೊಸ ಸಿದ್ದಾಂತ ,ಸಮಾಜವಾದ ಸಮಾನತೆ ,ವಿಶ್ವ ಪ್ರೇಮ ಹೀಗೆ ಎಲ್ಲರ ಮನದಲ್ಲಿ ವೈಚಾರಿಕ ಕ್ರಾಂತಿಯ ಹೊಳವು ಮೂಡಿತು .vacahanaas are the Gems& jewels came from mystic experiances of sharanas of 12th century.
೨) ಕಾಯಕ ಮತ್ತು ದಾಸೋಹ
ಜಗತ್ತಿಗೆ ಮೊಟ್ಟಮೊದಲು ದುಡಿದು ತಿನ್ನುವ ಮತ್ತು ಉಧ್ಯೊಗ ಮಾಡುವುದನ್ನು ಕಲಿಸುವ ಧರ್ಮವೊಂದಿದ್ದರೆ ಅದು ಶರಣ ಧರ್ಮ . ಬಸವಣ್ಣ ಕಾಯಕಕ್ಕೆ ಆಧ್ಯ ಪ್ರಾಶಸ್ತ್ಯ ನೀಡಿದನು.
ಕಾಯಕದಿಂದ ಬಂದ ಕಾರೆಯ ಸೋಪ್ಪಾದರು ಲಿಂಗಕ್ಕೆ ಅರ್ಪಿತ .ಪ್ರತಿಯೊಬ್ಬ ದುಡಿಯಲೇ ಬೇಕು ಇದರಿಂದ ಕಲ್ಯಾಣದ ಸಂಪತ್ತು ಇಮ್ಮದಿ ಆಯಿತು. ಬಡತನ ದೂರವಾಯಿತು ,ಹಸಿವು ಇಲ್ಲವಾಯಿತು .ಇನ್ನು ದುಡಿದು ಬಂದ ಹಣದಲ್ಲಿ ಸಮಾಜಕ್ಕೆ ನೀಡಿ ದಾಸೋಹ ಮಾಡುವದನ್ನು ಕಳಿಸಿ ಕೊಟ್ಟ ಬಸವಣ್ಣ. Karl marx has taught us dignity of labour but basavanna has taught both dignity and divinity of labour.
೩ ) ಧಾರ್ಮಿಕ ಕ್ರಾಂತಿ
ಧರ್ಮ ಬಡವರ ಸೊತ್ತಲ್ಲ, ಅಸ್ಪ್ರಶ್ಯರ ಮಾತಲ್ಲ , ದಲಿತರ ವಸ್ತು ಅಲ್ಲ ,ಮಹಿಳೆಯರಿಂದ ಗಾವುದ ದೂರು ,ಮನುಷ್ಯ ಮೃಗಗಳಂತೆ ಬದುಕುತ್ತಿದ್ದ ಕಾಲವದು .ಕೇವಲ ಬ್ರಾಹ್ಮಣರಿಗೆ ಶಿಕ್ಷಣ ಧರ್ಮ, ಸಂಸ್ಕಾರ ,ಉತ್ಸವದಲ್ಲಿ ದಲಿತರು ಕೇವಲ ಸೇವೆಗೆ ಮೀಸಲು ,ಅವರಿಗೆ ಗುಡಿಯಲ್ಲಿ ಪ್ರವೇಶವಿಲ್ಲ ,ಇಂತಹ ಸಂದಿಗ್ದ ಸಮಯದಲ್ಲಿ ಬಸವಣ್ಣ ದಲಿತರ ಹಾದಿ ದೀಪವಾಗಿ ಬಂದನು .ಇಷ್ಟಲಿಂಗವ ಕೈಯಲ್ಲಿ ಕೊಟ್ಟು ಹೆಣ್ಣು ಗಂಡು ಉಚ್ಹ ನೀಚ ಎಂಬ ಎಲ್ಲ ಭಾವವನ್ನು ಅಳಿದು ಸಮಾನತೆ ಕಂಡ ಶ್ರೇಷ್ಟ ದಾರ್ಶನಿಕ. iistalinga is like bulldozer which equals ups and downs of the society-Sir Arthur Miles.(The land of lingam)
೪) ನೈತಿಕ ಕ್ರಾಂತಿ
ನಡೆ ನುಡಿಯು ಬಸವಣ್ಣ ಜೀವಾಳ -ನಡೆಯಲ್ಲಿ ಎಚ್ಚ್ಹೆತ್ತು ,ನುಡಿಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗವು ಘಟಸರ್ಪ ನೋಡಾ .ಆತ್ಮಾವಲೋಕನ ಶರಣರ ಇನ್ನೊಂದು ದೊಡ್ಡ ಮಾರ್ಗ ,ಹೆಜ್ಜೆ ಹೆಜ್ಜೆಗೂ ತಮ್ಮನ್ನು ವಿಮರ್ಶಿಸಿ ಮುಂದೆ ನಡೆಯುವ ದಿಟ್ಟ ಗುಣದವರಾಗಿದ್ದರು,
ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು- ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ? ಬಸವಣ್ಣನವರಿಗೆ ಇಡಿ ಸಮಾಜವೇ ಇಷ್ಟಲಿಂಗ,ಸಮಾಜವೇ ಕೂಡಲಸಂಗಮದೇವ ,ಅದುವೇ ಜಂಗಮ -ಪರವಧುವನು ಮಹದೆವಿಎಮ್ಬೆ ಅಂತ ಶರಣರು ಮಹಿಳೆಯರನ್ನು ಗೌರವಿಸಿದರು ಪೂಜಿಸಿದರು. ನುಡಿದರೆ ಮುತ್ತಿನ ಹಾರದಂತಿರಬೇಕು .ಸ್ಪತಕಿದ ಸಲಾಕೆಯಂತಿರಬೇಕು ,ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು ಅನ್ನಬೇಕು, ಇದು ಅಪ್ಪ ಬಸವಣ್ಣನ ವಿಚಾರವು.
೫ ) ಸ್ತ್ರೀ ಸಮಾನತೆ
ಇಡಿ ಜಗತ್ತಿನಲ್ಲಿ ಸ್ತ್ರೀಗೆ ಪೂಜ್ಯ ಸ್ಥಾನ ಕೊಟ್ಟವರೆಂದರೆ ಶರಣರು, ಗಾರ್ಗಿ ಮೈತ್ರೆಯೇ -ಹೊರತು ಪಡಿಸಿದರೆ ಮತ್ತೆಲಿಯು ಮಹಿಳೆಯರ ಸ್ವಾತಂತ್ರದ ಮಾತಿಲ್ಲ .ಮಹಿಳೆ ಪಂಚಮಳು ,ಅವಳಿಗೆ ಯುವುದೇ ಸ್ವಾತಂತ್ರವಿಲ್ಲ .ಅವಳು ಗಂಡನ , ಮಗನ ಅಪ್ಪನ ಆಶ್ರಯದಲ್ಲಿ ಬದುಕಬೇಕಾಗಿತ್ತು, ಅವಳು ಮಲದ ಬಾಂಡ ,ಬೋಗದ ವಸ್ತು,ಎಂದು ನಂಬಿದ್ದ ಸಮಾಜದಲ್ಲಿ ಮಹಿಳೆ ಗೆ ಹೆಚ್ಚಿನ ಸ್ಥಾನ ಮನ ನೀಡಿ ಗೌರವಿಸದ ಕೀರ್ತಿ ಶರಣರಿಗೆ ಸಲ್ಲಬೇಕು.
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿ ಅಲ್ಲ ,ಹೆಣ್ಣು ಸ್ವತಹ ಕಪಿಲಸಿದ್ದ ಮಲ್ಲಿಕಾರ್ಜುನ ಎಂದು ಸಿದ್ದರಾಮರು ಹೇಳಿದ್ದಾರೆ .ಇಂದಿನ ಯುಗದಲ್ಲಿಯೂ ಹೆಣ್ಣಿನ ಮೇಲೆ ಅತ್ತ್ಯಾಚಾರ ,ಕೊಲೆ ದೌರ್ಜನ್ಯವಿರುವಾಗ -ಅಂದಿನ ದಿನಗಳಲಿ ಮಹಿಳೆ ಒಬ್ಬಂಟಿಯಾಗಿ ಓಡಾಡುತ್ತಿದ್ದಳು .
ಅರಿವೇ ಗುರು- ಆಚಾರವೆ ಲಿಂಗ -ಅನುಭಾವವೇ ಜಂಗಮ -ಇದು ಶರಣರ ಆಶಯ .ಅಸ್ತಾವರಣವೇ ಅಂಗವಾಗಿ ,ಪಂಚಾಚಾರವೆ ಪ್ರಾಣವಾಗಿ. ಷತಸ್ಥಲವೇ ಆತ್ಮವಾಗಿ ಬದುಕಿದ ಶರಣರಿಗೆ ಬಸವಣ್ಣನೆ ನಾಯಕ .
ಅಂತೆಯೇ ಕಾಯಕವ ಕಲಿಸುದಕೆ ನಾಯಕನು ಬಸವಣ್ಣ ಅಂತ ಜನಪದಿಗರು ಹೇಳಿದ್ದಾರೆ , ಕಲ್ಯಾಣ್ ಕ್ರಾಂತಿ ಭಾರತದ ಜಗದ ಹೊಸ ಅಧ್ಯಾಯ .
Whatever the Legend may say abt basava it is pretty clear that He is the First freethinker of india,he can be called King Martin Luther-(The land of lingam) by sir Arthur miles-an England Philosopher Writer,Researcher .
–ಡಾ.ಶಶಿಕಾಂತ .ರು .ಪಟ್ಟಣ -ಬಸವ ಭವನ -ಪೂನಾ .
dr.shashikant.pattan@gmail.com