ಕಲ್ಯಾಣ ಕರ್ನಾಟಕ ಪ್ರತಿಷ್ಠಾ ಟ್ರಸ್ಟ್‌ನಿಂದ
ನಟರಾಜ ಮತ್ತು ಸುನಿತಾ ಮುರಶಿಳ್ಳಿ ಅವರಿಗೆ
ಬಸವ – ನೀಲಗಂಗಾ ಪ್ರಶಸ್ತಿ ಪ್ರಧಾನ
e-ಸುದ್ದಿ ಬೀದರ
ಧಾರವಾಡದ ಮುರುಶಿಳ್ಳಿ ಕುಟುಂಬ ಸಾಹಿತ್ಯಿಕವಾಗಿ ಮತ್ತು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕುಟುಂಬ. ನಟರಾಜ ಮತ್ತು ಸುನಿತಾ ದಂಪತಿಗಳಿಗೆ ಈ ಬಾರಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಬಸವ ನೀಲಗಂಗಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೀದರ್‌ನ ಶ್ರೀ ಬಸವಕುಮಾರ ಪಾಟೀಲ ಜೀ ಅವರಿಗೆ ಮತ್ತು ಅವರ ಕಲ್ಯಾಣ ಕರ್ನಾಟಕ ಪ್ರತಿಷ್ಠಾ ಟ್ರಸ್ಟ್‌ನ ಎಲ್ಲಾ ಸದಸ್ಯರು ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿ ಶರಣ ದಂಪತಿಗಳಿಗೆ ಬಸವ ನೀಲಗಂಗಾ ಪ್ರಶಸ್ತಿಯನ್ನು ಪ್ರಶಸ್ತಿಪತ್ರದೊಂದಿಗೆ ನೀಡಿ ಗೌರವಿಸಿದರು.
ಅಕ್ಕ ಅನ್ನಪೂರ್ಣ ಮತ್ತು ಪುಣೆಯ ಸತೀಶ್ ಪಾಟೀಲ್ ರವರ ಹಾರೈಸಿದರು.
ದಂಪತಿಗಳು ಇಬ್ಬರೂ ಮಾತನಾಡಿ ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ವಿನಯದಿಂದ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.