ನಿನ್ನ ಕಿರುಬೆರಳು
ನಿನ್ನ ಮುಗುಳು ನಗೆ
ಕಂಡಾಗಲೆಲ್ಲಾ ನನ್ನಳೊಗೊಂದು
ಪ್ರಸನ್ನತೆ…..!
ನಿನ್ನ ಶಾಂತಿಚಿತ್ತ
ಮೂಡಿಸುವುದು ನನ್ನಲ್ಲಿ
ನಿರಾಳ ಭಾವ…..!
ನಿನ್ನ ನಿಶ್ಚಿಲ
ಭಾವದೊಳಗೆ
ಹುಡುಕಿ ಸೋಲುತ್ತೆನೆ ನನ್ನ….!
ದುಃಖ ನಿರಾಸೆಯ
ಮಡುವಿನಲ್ಲಿದ್ದಾಗ
ಅದೆಷ್ಟು ಪ್ರೀತಿಯಿಂದ
ಕೈಹಿಡಿದು ನಡೆಸುವೆ….?
ಸೊತವಳು ಗೆಲ್ಲುತ್ತೇನೆ
ಬಿದ್ದವಳು ಮೇಲೆಳುತ್ತೆನೆ
ನಿನ್ನ ಕಿರುಬೆರಳ ಹಿಡಿದು….!!
ಹುಸಿಯಾಗಲಾರದು
ನನ್ನ ನೀರಿಕ್ಷೆ ಬೆನ್ನ ಹಿಂದೆ
ನೀನಿರಲು....!!
ಕಣ್ಣ ಮುಂದೆ ನೀ ಬರಲು….!!
–ಡಾ. ನಿರ್ಮಲ ಬಟ್ಟಲ