ರಾಜಕಾರಣಿ ಹಾಗೂ ಅಧಿಕಾರಿಗಳ ಹುಸಿ ಭರವಸೆ, ಬುದ್ದಿನ್ನಿ ಪ್ರೌಡ ಶಾಲೆ ನೆನೆಗುದಿಗೆ


e-ಸುದ್ದಿ ಮಸ್ಕಿ
ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಮಕ್ಕಳಿದ್ದರೆ, ಶಿಕ್ಷಕರು ಇರುವುದಿಲ್ಲ, ವಿದ್ಯಾರ್ಥಿಗಳಿದ್ದರೆ ಮಕ್ಕಳಿರುವುದಿಲ್ಲ. ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಡ ಶಾಲೆಗೆ ಕಟ್ಟಡ ವಿದೆ. ಮಕ್ಕಳಿದ್ದಾರೆ. ಆದರೆ ಸರ್ಕಾರದಿಂದ ಅನುಮತಿ ಇಲ್ಲ.
ಬುದ್ದಿನ್ನಿ ಎಸ್ ಗ್ರಾಮದ ಮಕ್ಕಳು ಪ್ರೌಢ ಶಾಲೆಗಾಗಿ ಮಸ್ಕಿ, ಸಂತೆಕೆಲ್ಲೂರು ಮುಂತಾದ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಬುದ್ದಿನ್ನಿಯಲ್ಲಿ ಪ್ರೌಢಶಾಲೆ ಆರಂಭಿಸುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹುಸಿ ಭರವಸೆ ನೀಡಿ ಕಾಲ ತಳ್ಳುತ್ತಿದ್ದಾರೆ.

 

ಸರ್ಕಾರ ಪ್ರಾಥಮಿಕ ಶಾಲೆಯನ್ನು ಪ್ರೌಡಶಾಲೆಯನ್ನಾಗಿ ಉನ್ನತಿಕರಿಸಿದೆ. 9 ಮತ್ತು 10ನೇ ತರಗತಿ ಅನುಮತಿಗಾಗಿ ಎರಡು ವರ್ಷಗಳಿಂದ ಗ್ರಾಮಸ್ಥರು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಪ್ರೌಢಶಾಲೆ ಮಾತ್ರ ಗಗನ ಕುಸುಮವಾಗಿದೆ. ಬುದ್ದಿನ್ನಿ ಗ್ರಾಮದಲ್ಲಿ 9 ಮತು ್ತ10ನೇ ತರಗತಿಗಳು ಆರಂಭವಾದರೆ ಕಾಟಗಲ್, ಹರ್ವಾಪೂರು ಸೇರಿದಂತೆ ಸುಮಾರು 8 ಗ್ರಾಮಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನೂಕೂಲವಾಗಿದೆ.
ಪ್ರೌಢಶಾಲೆಗಾಗಿ2017-18ನೇ ಸಾಲೀನಲ್ಲಿ ಹೈಕ.ಅನುದಾನದಲ್ಲಿ 1.40ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಅಲ್ಲದೇ ಸುಮಾರು 15 ಲಕ್ಷ ವೆಚ್ಚದಲ್ಲಿ ಕಂಪೌಂಡ ಗೋಡೆ ನಿರ್ಮಿಸಲಾಗಿದೆ.
ಬುದ್ದಿನ್ನಿಯಲ್ಲಿ ಪ್ರೌಢಶಾಲೆ ಆರಂಬಿಸುವಂತೆ ಗ್ರಾಮಸ್ಥರು ನಿರಂತರ ಪ್ರತಿಭಟನೆ ಮಾಡಿ ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕಿದಾಗ ಅಧಿಕಾರಿಗಳು ಗ್ರಾಮಸ್ಥರನ್ನು ಮನ ಒಲಿಸಿ ಲಿಖಿತವಾಗಿ ಮಂಜೂರು ಮಾಡುವದಾಗಿ ಬರೆದುಕೊಟ್ಟಿದ್ದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭರವಸೆ ನೀಡಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ ಎಂದು ನಾಗರೆಡ್ಡಪ್ಪ ಬುದ್ದಿನ್ನಿ ಸಮದಾನ ವ್ಯಕ್ತಪಡಿಸಿದರು.
ಉಪ ಚುನಾವಣೆ ಬಹಿಷ್ಕಾರ ಚಿಂತನೆ ಃ ಮಸ್ಕಿ ಕ್ಷೇತ್ರದ ಉಪ ಚುನಾವಣೆಯನ್ನು ಬಹಿಷ್ಕರಿಸುವ ದಕ್ಕಾಗಿ ಗ್ರಾಮಸ್ಥರು ಸಭೆ ನಡೆಸಿದ್ದಾರೆ.
——————-
ಕೋಟ್
ಪ್ರೌಡ ಶಾಲೆ ಮಂಜೂರು ಮಾಡಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಬಿಇಓ ಕಚೇರಿ ಮುಂದೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇವರಗೆ ನಮ್ಮ ಮನವಿಯನ್ನು ಪರಿಗಣಿಸಿಲ್ಲ.
-ನಾಗರಡ್ಡಿ ದೇವರಮನಿ ಎಸ್‍ಡಿಎಂಸಿ ಅಧ್ಯಕ್ಷ ಬುದ್ದಿನ್ನಿ.

Don`t copy text!