ಬಿಜೆಪಿ ಯುವಕರಿಂದ ವಿಯೋತ್ಸೋವ

e-ಸುದ್ದಿ ಮಸ್ಕಿ
ಶಿರಾ ಮತ್ತು ರಾಜರಾಜೇಶ್ವರಿ ನಗರದ ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿರುವದರಿಂದ ಪಟ್ಟಣದ ಬಿಜೆಪಿ ಯುವಕರು ಮಂಗಳವಾರ ವಿಜಯೋತ್ಸವನ್ನು ಆಚರಿಸಿದರು.
ಮದ್ಯಹ್ನ ಬಿಜೆಪಿ ಕಚೇರಿಯಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಕಚೇರಿಯಿಂದ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಎಸ್.ಸಿ.ಮೊರ್ಚಾ ಅಧ್ಯಕ್ಷ ಮೌನೇಶ ಮುರಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಂಪಣ್ಣ ಹೂವಿನಬಾವಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ಚೇತನ ಪಾಟೀಲ, ಸಂಗಮೇಶ ಹತ್ತಿಗುಡ್ಡ, ಸಿದ್ದಲಿಂಗಯ್ಯ ಸೊಪ್ಪಿಮಠ, ನಾಗರಾಜ ಯಂಬಲದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Don`t copy text!