ವರವ ಕರುಣಿಸುವ ಶ್ರೀಮಾತೆ ಹಸಮಕಲ್ ಕೆರೆ ದುರ್ಗಾದೇವಿ
e-ಸುದ್ದಿ ಮಸ್ಕಿ
ಗ್ರಾಮೀಣ ಭಾಗದ ಊರುಗಳಲ್ಲಿ ಗ್ರಾಮದೇವತೆಗಳಾಗಿ ಬಸವಣ್ಣ, ಈಶ್ವರ, ಹನುಮಂತ ಮತ್ತು ದುರ್ಗಾಮಾತೆ ಒಂದಲ್ಲ ಒಂದು ದೇವರು ಇದ್ದೇ ಇರುತ್ತೇವೆ. ಆ ಹಿನ್ನಲೆಯಲ್ಲಿ ಮಸ್ಕಿ ತಾಲೂಕಿನ ಬೀದರದಿಂದ ಚಾಮರಾಜನಗರ ರಾಷ್ಟಿçÃಯ ಹೆದ್ದಾರಿ ಮೇಲೆ ಹಾದು ಹೋಗಿರುವ ಹಸಮಕಲ್ ದುರ್ಗಾದೇವಿ ದೇವಸ್ಥಾನ ಅನೇಕ ಭಕ್ತರ ಪಾಲಿಗೆ ಕಾಮಧೇನು ಕಲ್ಪವೃಕ್ಷವಾಗಿ ಬೇಡಿದವರಿಗೆ ವರ ಕೊಡುವ ಶ್ರದ್ಧಾಕೇಂದ್ರವಾಗಿದೆ.
ಈ ದೇವಸ್ಥಾನಕ್ಕೆ ಶತಕದ ಇತಿಹಾಸವಿದೆ. ಗ್ರಾಮದ ಹೊರವಲಯದ ಕೆರೆದಂಡೆ ಮೇಲೆ ದುರ್ಗಾದೇವಿ ಪ್ರತಿಷ್ಠಾಪಿತಳಾಗಿ ಈಗ ದೊಡ್ಡ ಗುಡಿಯೊಂದಿಗೆ ಕಂಗೊಳಿಸುತ್ತಿದೆ. ಸ್ಥಳಿಯರ ನಂಬಿಕೆಯAತೆ ನೂರು ವರ್ಷದ ಹಿಂದೆ ದುರುಗಪ್ಪ ತಮ್ಮಣ್ಣ ಪೂಜಾರಿ ಪ್ರತಿದಿನ ಗುಡ್ಡದಲ್ಲಿ ಕುರಿಗಳನ್ನು ಮೇಯಿಸುವಾಗ ತಮ್ಮಣ್ಣ ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಬರುತ್ತಿದ್ದ. ಕೆರೆಯ ಒಂದು ಭಾಗದಲ್ಲಿ ಮಾತ್ರ ಸ್ವಲ್ಪ ನೀರು ಇರುತ್ತಿದ್ದವು. ಸತತ ಬರಗಾಲ ಬೇರೆ, ಕೆರೆಯಲ್ಲಿ ನೀರು ಇಲ್ಲದೆ ಒಣ ಮಣ್ಣಿನಿಂದ ಕೆರೆ ಕೆರಹಿಡಿದಿತ್ತು. ತಮ್ಮಣ್ಣ ಕೆರೆಕಡೆ ಬಂದಾಗಲೆಲ್ಲ ಅಲ್ಲಿದ್ದ ಕಲ್ಲನ್ನು ಪೂಜೆ ಮಾಡಿ ನಮಸ್ಕರಿಸಿ ದೇವಿಯ ಅವತಾರ ತಾಳುತ್ತಿದ್ದ. ಆಗ ಊರ ಜನರು ತಮ್ಮಣ್ಣನಿಗೆ ಸವಾಲು ಹಾಕಿ ಈ ಕೆರೆಯ ದಂಡಿಯಲ್ಲಿ ದೇವಿಯನ್ನು ಪೂಜೆ ಮಾಡುವದರಿಂದ ನಿನಗೆ ಏನೂ ಲಾಭವಿಲ್ಲ. ಕೆರೆಗೆ ನೀರೆ ಇಲ್ಲ. ಆದರೆ ಕೆರೆದುರ್ಗಾದೇವಿ ಎಂದು ಯಾಕೆ ಕರೆಯುತ್ತಿ ಎಂದು ಊರಿನ ಜನರು ಪ್ರಶ್ನೆಮಾಡತೊಡಗಿದರು.
ತಮ್ಮಣ್ಣ ಪೂಜಾರಿ ತನ್ನ ಹೆಗಲ ಮೇಲಿದ್ದ ಕಂಬಳಿಯನ್ನು ತೆಗೆದುಕೊಂಡು ದೇವಿಯನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಆಕಾಶದ ಕಡೆಗೆ ಬೀಸತೊಡಗಿದ. ತಕ್ಷಣವೇ ಮೊಡಗಳು ಚದುರಿಕೊಂಡು ಬಂದು ಧೋ ಎಂದು ಮಳೆ ಅಬ್ಬರಿಸಿ ಸುರಿಯತೊಡಗಿತು. ಕೆರೆಯು ಒಂದೇ ದಿನದಲ್ಲಿ ತುಂಬಿ ಭರ್ತಿಯಾಯಿತು ಎಂದು ಊರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ತಮ್ಮಣ್ಣನ ದೈವಶಕ್ತಿ, ದುರ್ಗಾದೇವಿಯ ಇರುವಿಕೆ ಅರಿತ ಗ್ರಾಮಸ್ಥರು ಸಣ್ಣ ದೇವಸ್ಥಾನವನ್ನು ಕೆರೆಯ ದಂಡೆಯ ಮೇಲೆ ಕಟ್ಟಿಸಿಕೊಟ್ಟರು. ಅಂದಿನಿAದ ಇಂದಿನವರೆಗೂ ದುರ್ಗಾದೇವಿಯನ್ನು ತಮ್ಮಣ್ಣನ ಮನೆತನದವರೇ ಪೂಜೆ ನೆರವೇರಿಸಕೊಂಡು ಹೋಗುತ್ತಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ಹುಣ್ಣಿಮೆ ಮತ್ತು ಅಮವಾಸ್ಯೆಯಂದು ದೇವಿಯ ದರ್ಶನಕ್ಕಾಗಿ ಬಕ್ತರು ಆಗಮಿಸುತ್ತಿದ್ದಾರೆ. ಭಕ್ತರು ತಮ್ಮ ಇಷ್ಠಾರ್ಥಗಳನ್ನು ಪ್ರಾರ್ಥಿಸಿಕೊಂಡು ಈಡೇರಿಸಿಕೊಂಡುವರು ಇದ್ದಾರೆ. ಹಾಗಯೇ ಕುಟುಂಬದ ಅನೇಕ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪೂಜಾರಿಯಿಂದ ಅಮ್ಮನವರ ಹೇಳಿಕೆಗಳು ನಡೆಯುತ್ತವೆ. ಅಮ್ಮನವರ ವಾಣಿಯಂತೆ ಭಕ್ತರು ನಡೆದುಕೊಂಡು ಮನಃಶಾಂತಿ ಹೊಂದುತ್ತಿದ್ದಾರೆ.
ಬಹುತೇಕ ಭಕ್ತರು ಕಂಕಣ್ಣ ಭಾಗ್ಯ, ಸಂತಾನ ಭಾಗ್ಯ, ರೋಗ ಪೀಡಿತರು ಪರಿಹಾರಕ್ಕಾಗಿ ದೇವಿಗೆ ಹರಕೆ ಹೊತ್ತುಕೊಂಡು ತೀರಿಸುವ ಪರಿಪಾಠವಿದೆ. ಈ ಹಿಂದೆ ಈ ಭಾಗದಲ್ಲಿ ಪ್ಲೇಗ್ ಮಹಾಮಾರಿ ಜನರನ್ನು ಕಾಡಿತ್ತು. ಆಗ ಪ್ರತಿಯೊಂದು ಊರು, ಹಳ್ಳಿಗಳಲ್ಲಿ ಜನ ಹೆಣಗಳ ರಾಶಿಗಳೇ ಬೀಳುತ್ತಿದ್ದವು. ಜನರು ಭಯಭೀತರಾಗಿದ್ದರು. ಆಗ ಗ್ರಾಮದ ಜನರು ಬಂದು ಕೆರೆದುರ್ಗಾಮಾತೆಯಲ್ಲಿ ಪ್ರಾರ್ಥಿಸಿಕೊಂಡು ಈ ಕಾಯಿಲೆ ತೊಲುಗುವಂತೆ ಮಾಡು ಎಂದು ಬೇಡಿಕೊಂಡಾಗ ಪೂಜಾರಿಯು ಹೇಳಿಕೆ ನೀಡಿ ಅಮ್ಮನ ಮತ್ತು ಖಾನ್‌ಸಾಬ ತಾತನವರ ಹೆಸರು ಹೇಳಿಕೊಂಡು ಆದಾರ ಮತ್ತು ನಿಂಬೆಹಣ್ಣು ಬೆರಸಿ ಸೇವಿಸಿರಿ. ಮತ್ತು ಆದಾರವನ್ನು ಮೈತುಂಬ ಹಚ್ಚಿಕೊಳ್ಳಿ ಕಾಯಿಲೆ ವಾಸಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಬಹುತೇಕ ಜನರು ದುರ್ಗಾದೇವಿಯ ಹೆಸರು ಹೇಳಿಕೊಂಡು ಆದಾರ ಮತ್ತು ನಿಂಬೆ ರಸ ಕುಡಿಯುವ ಮೂಲಕ ಪ್ಲೇಗ್‌ನಂತ ಸಂಕ್ರಾಮಿಕ ರೋಗದಿಂದ ಮುಕ್ತಿ ಪಡೆದುಕೊಂಡಿದ್ದಾರೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಎಂದು ಪೂಜಾರಿ ಮನೆತನದ ಶಿವಪ್ಪ ಸ್ಮರಿಸಕೊಳ್ಳುತ್ತಾರೆ.
ಹಸಮಕಲ್ ಗ್ರಾಮದಲ್ಲಿ ಕೆರೆದುರ್ಗಾದೇವಿ ಮತ್ತು ಖಾನ್‌ಸಾಬ ತಾತನನ್ನು ಇಲ್ಲಿನ ಜನ ಬಲವಾಗಿ ನಂಬಿದ್ದಾರೆ. ಪೂಜಾರಿ ತಮ್ಮಣ್ಣ ನಿಧನರಾದ ನಂತರ ಅವರ ಮಗನಾದ ತಮ್ಮಣ್ಣನವರು ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡರು.
ಚಿಕ್ಕದಿದ್ದ ಗುಡಿ ಬೃಹದಾಕರವಾಗಿ ಬೆಳೆಯಿತು ಃ ಚಿಕ್ಕದಿದ್ದ ಗುಡಿ ಭಕ್ತರ ಅಪಾರ ದೈವಭಕ್ತಿಯಿಂದಾಗಿ ದೊಡ್ಡ ಕಟ್ಟಡವಾಗಿ ಬೆಳದಿದೆ. ಭಕ್ತರ ಸಂಖ್ಯೆಯು ಗಣನೀಯವಾಗಿ ಬೆಳದಿದೆ. ಭಕ್ತರ ಸಂಖ್ಯೆ ಹೆಚ್ಚಾಗಿ ಅವರ ಅಪೇಕ್ಷೆಯ ಮೇರೆಗೆ ೧೯೯೧ ರಿಂದ ನವರಾತ್ರಿಯಲ್ಲಿ ದೇವಿ ಪುರಾಣ ಪ್ರಾರಂಭಿಸಲಾಗಿದೆ. ಆರಂಭದಲ್ಲಿ ದೇವಿ ಪುರಾಣವನ್ನು ಒಂದೇ ದಿನದಲ್ಲಿ ಪರಾಯಣಾ ಮಾಡಿ ಮುಗಿಸುತ್ತಿದ್ದರು. ಈಗ ೯ ದಿನದವರೆಗೆ ದೇವಿ ಪುರಾಣ, ಪ್ರವಚನ ನಡೆಯುತ್ತದೆ. ನವರಾತ್ರಿಯ ಒಂಬತ್ತು ದಿನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ ಹಾಗೆಯೇ ಅಮವಾಸ್ಯೆಯಂದು ಪ್ರಸಾದದ ವ್ಯವಸ್ಥೆ ನಡೆಯುತ್ತದೆ. ಮತ್ತು ಜಾತ್ರೆ ಕೂಡ ಅದ್ದೂರಿಯಾಗಿ ನಡೆಯುತ್ತದೆ.
೨೦೨೧ ರಲ್ಲಿ ತಮ್ಮಣ್ಣ ಪ್ರಜಾರಿ ಅಪಘಾತದಲ್ಲಿ ಅಸುನೀಗಿದರು. ೨೦೨೨ ರ ಯುಗಾದಿಯಂದು ಮಹಾದೇವಪ್ಪ ಪೂಜಾರಿಯನ್ನು ಪೂಜಾರಿ ಕುಟುಂಬ ಪಟ್ಟಕ್ಕೆ ಕೂರಿಸಲಾಗಿದೆ. ಈಗ ಮಹಾದೇವಪ್ಪ ಪೂಜಾರಿಯ ನೇತೃತ್ವದಲ್ಲಿ ದೇವಸ್ಥಾನದ ಚಟುವಟಿಕೆಗಳು ನಡೆಯುತ್ತವೆ.
——————————————————
ಕೆರೆದುರ್ಗಾದೇವಿ ಹಸಮಕಲ್ ಗ್ರಾಮದ ಪುರಾತನ ದೇಗುಲ. ನೂರಾರು ವರ್ಷಗಳಿಂದ ಇಲ್ಲಿನ ಜನರು ಭಯ ಬಕ್ತಿಯಿಂದ ನಡೆದುಕೊಳ್ಳುತ್ತಾರೆ. ಸುಮಾರು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿದ್ದ ದೇವಾಲಯ ಇಂದು ಭಕ್ತರ ನೆರವಿನಿಂದ ದೊಡ್ಡ ದೇವಾಲಯವಾಗಿದೆ., ರಥೋತ್ಸವ ಸೇರಿದಂತೆ ದೇವಿ ಪುರಾಣ ಪುರಾಣ ನಡೆಯುವುದು ಊರಿಗೆ ಊರೇಹಬ್ಬ ಆಚರಿಸುತ್ತೇವೆ.
-ಬಸವರಾಜ ಸ್ವಾಮಿ ಹಸಮಕಲ್ ಗ್ರಾಮಸ್ಥ
————————————————–
ಕೆರೆದುರ್ಗಾದೇವಿ ಮತ್ತು ಖಾನ್ ಸಾಬರ ದರ್ಗಾ ಹಸಮಕಲ್ ಗ್ರಾಮದ ಎರಡು ಶ್ರದ್ಧಾಕೇಂದ್ರಗಳು. ಹಿಂದು ಮೂಸ್ಲಿಂರ ಭಾವೈಕ್ಯತೆ ಬಿಂಬಿಸುವ ತಾಣಗಳು. ಕೆರೆದುರ್ಗಾದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನವಾದರೆ ಬಡವರು ಮದುವೆ ಮಾಡಲು ಅನುಕೂಲವಾಗುತ್ತದೆ.
-ಅಮರೇಶ ದುಗನೂರು ಹಸಮಕಲ್, ಗ್ರಾಮಸ್ಥ