ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಶಾಸಕ ಹುಲಗೇರಿ

ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಶಾಸಕ ಹುಲಗೇರಿ

ವರದಿ ವಿರೇಶ ಅಂಗಡಿ ಗೌಡೂರು

e- ಸುದ್ದಿ ಲಿಂಗಸುಗೂರು

ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೊಬಳಿಯ ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಬಾವಿ ಗ್ರಾಮದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಲಿಂಗಸುಗೂರು ಶಾಸಕರಾದ ಡಿ.ಎಸ್.ಹುಲಗೇರಿಯವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಬಂದಿದ್ದು ಸ್ಥಳಿಯವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ ಎಂದು ಹೇಳಿದರು.

ಗೌಡೂರು ಗುರುಗುಂಟಾ ಮುಖ್ಯ ರಸ್ತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಶೌಚಾಲಯ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.

ಬಂಡೇಬಾವಿ ಗ್ರಾಮಸ್ಥರು ವಿದ್ಯುತ್ ಸಮಸ್ಯೆ ತುಂಬಾ ಇದ್ದು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ,ಸಾರಿಗೆ ಇಲಾಖೆಯಿಂದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು, ರಸ್ತೆ ದುರಸ್ಥಿ , ಶಾಲೆಗೆ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ವತಿಯಿಂದ ವಿವಿಧ ಪಿಂಚಣಿ ಯೋಜನೆಯ 98 ಫಲಾನುಭವಿಗಳಿಗೆ ಮಾಶಾಸನ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಹಶೀಲ್ದಾರ ಬಲರಾಮ ಕಟ್ಟಿಮನಿ,THO ಡಾ ಅಮರೇಶ, ಆಹಾರ ನಿರಿಕ್ಷಕರಾದ ಅಬ್ದುಲ್ ರವೂಫ್,ಸಿ.ಡಿ.ಪಿ.ಒ ಶರಣಮ್ಮ ಕಾರನೂರು, ಪಶು ಇಲಾಖೆಯ ಡಾ. ರಾಚಪ್ಪ, ಜೆಸ್ಕಾಂ ಎ.ಇ.ಇ ವೆಂಕಟೇಶ,
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಪಿ.ಡಿ.ಒ ಮಹಮ್ಮದ್ ಇಸಾಕ್, ಉಪತಹಸೀಲ್ದಾರ್ ರಂಗಪ್ಪ ನಾಯಕ,ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಮಹೆಬೂಬ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಹಲವು ರಾಜಕೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು , ಗ್ರಾಮದ ಸಾರ್ವಜನಿಕರು,ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಚಿದಾನಂದ ಶಿಕ್ಷಕರು ನಡೆಸಿಕೊಟ್ಟರು.

Don`t copy text!