ಫೀರ್ ಪಾಷಾ ಬಂಗಲೆಯೆ ಅನುಭವ ಮಂಟಪ
ಹನ್ನೆರಡನೆಯ ಶತಮಾನದ ವಚನಕಾರರ ಶ್ರೇಷ್ಠ ಕ್ರಾಂತಿ ವಚನ ಕ್ರಾಂತಿ . ಬಸವ ಪೂರ್ವ ಯುಗದ ಎಲ್ಲಾ ಧರ್ಮದ ಸಂಪ್ರದಾಯಗಳ ಜನಾಂಗವು ಬಸವಣ್ಣನವರ ನೇತೃತ್ವದ ವಚನ ಚಳುವಳಿಯಲ್ಲಿ ಪಾಲ್ಗೊಂಡರು.
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಮ ಸಮಾಜ ನಿರ್ಮಾಣದ ಗುರಿ ಬಸವಣ್ಣನವರದಾಗಿತ್ತು . ಅಪಟರಾಳ ಕೃಷ್ಣ ಶಾಸ್ತ್ರಿ ಅವರು ಅನುಭವ ಮಂಟಪ ಇರಲಿಲ್ಲ ಅದೊಂದು ಕಟ್ಟು ಕಥೆ ಎಂದು ಹೇಳಿದಾಗ ಪ್ರೊ ಶಿ ಶಿ ಬಸವನಾಳರ ಸಹಯೋಗ ದೊಂದಿಗೆ ರೇವ. ಉತ್ತಂಗಿ ಚನ್ನಪ್ಪ ನವರು The existance of Anubhava Mantapa ಎಂಬ ಸಂಶೋಧನಾ ಕೃತಿ ಸಾದರ ಪಡಿಸಿದರು. ಹಾಗಿದ್ದರೆ ಅನುಭವ ಮಂಟಪ ಎಲ್ಲಿ ಎಂಬುದು ಅನೇಕರ ಪ್ರಶ್ನೆ.
ನಾನು ಕಳೆದ ನಲವತ್ತು ವರ್ಷಗಳಿಂದ ಬಸವ ಕಲ್ಯಾಣ ಸಂದರ್ಶನ ನೀಡಿರುವೆ. ಅಂದಿನಿಂದಲೂ ಅಲ್ಲಿಯ ಜನರ ಅಭಿಪ್ರಾಯ ಕ್ಷೇತ್ರ ಸಮೀಕ್ಷೆ ಮೌಖಿಕ ಹೇಳಿಕೆಗಳ ಸಂಗ್ರಹ ನನ್ನಲ್ಲಿರುವ ಆಸಕ್ತಿಯನ್ನು ಹೆಚ್ಚಿಸಿತು. ಅಂದಿನಿಂದ ಇಂದಿನ ವರೆಗೂ ಹಲವು ಬಾರಿ ನಾನೂ ಮತ್ತು ನನ್ನ ಅನೇಕ ಸಾಹಿತಿಗಳ ಸಂಶೋಧಕರ ಸಹಾಯದ ಜೊತೆಗೆ ಸ್ಥಳೀಯ ಕ್ಷೇತ್ರ ಸಮೀಕ್ಷೆ ಮಾಡಿದಾಗ ಈಗಿರುವ
*ಫೀರ್ ಪಾಷಾ ಬಂಗಲೆಯೆ ಅನುಭವ ಮಂಟಪ* ಎಂಬುದು ತಿಳಿದು ಬಂದಿದೆ.
ಇತ್ತೀಚೆಗೆ ಬಸವ ಸಮಿತಿಯು ಪ್ರಕಟಿಸಿದ ಕರ್ನಾಟಕದ ಶ್ರೇಷ್ಠ ಸಂಶೋಧಕರಾದ ಡಾ ಜಯಶ್ರೀ ಅಕ್ಕ ದಂಡೆ ಮತ್ತು ಡಾ ವೀರಣ್ಣ ದಂಡೆ ಅವರು ಸುಮಾರು ಹತ್ತು ವರುಷ ತಮ್ಮ ನಿರಂತರ ಶ್ರಮದಿಂದ ಶರಣರ ಸ್ಮಾರಕಗಳು ಸಮಾಧಿ ಶರಣರ
ಸಮಾಧಿ ಮುಂತಾದ ಕುರುಹುಗಳ ಬಗ್ಗೆ ಸುಧೀರ್ಘ ಸಂಶೋಧನಾ ಕೃತಿ ಎಲ್ಲಾ ಸಂಶಯಗಳಿಗೆ ಕೊನೆ ಹೇಳುತ್ತದೆ. ನನ್ನ ಸಂದೇಹಕ್ಕೆ ಉತ್ತಮ ಪರಿಹಾರ ಸಿಕ್ಕಿದ್ದು ದಂಡೆ ದಂಪತಿಗಳ ಸಂಶೋಧನೆ. ಇದರ ಜೊತೆಗೆ ಬಸವಣ್ಣನವರ ಅರುಹಿನ ಮನೆ ಸುತ್ತಲಿನ ಪ್ರದೇಶ ಮತ್ತು ಪರುಷ ಕಟ್ಟೆ ಅಲ್ಲಿನ ಮುಸ್ಲಿಮ ಬಂಧುಗಳ ಕೈವಶದಲ್ಲಿದೆ.
ಇಂತಹ ಸೂಕ್ಷ್ಮ ವಿಷಯ ಮುಂದಿದ್ದಾಗ ಲಿಂಗಾಯತ ಬಸವ ಭಕ್ತರು ಎಲ್ಲರೂ ಒಕ್ಕಟ್ಟಾಗಿ ನ್ಯಾಯ ಸಮ್ಮತ ಹೋರಾಟಕ್ಕೆ ಸಜ್ಜಾಗ ಬೇಕು.
ಇದೊಂದು ಅಯೋಧ್ಯೆ ಆಗಬಾರದು ಎಂಬುದು ನನ್ನ ಆಶಯ ಸಂಘಿಗಳ ಅಥವಾ ರಾಜಕಾರಣಿಗಳ ಚಿತಾವಣೆ ಇದಲ್ಲ.
ಜಗತ್ತಿನ ಅತ್ಯಂತ ಪ್ರಾಚೀನ ಪ್ರಜಾಸತ್ತಾತ್ಮಕ ಮ್ಯಾಗ್ನ ಕಾರ್ಟ್ ದವರಿಗಿಂತಲೂ ಒಂದು ಶತಮಾನ ಮೊದಲು ಶರಣರು ಅನುಭವ ಮಂಟಪ ಎಂಬ ಸಂಸತ್ತನ್ನು ನಿರ್ಮಿಸಿದ್ದು ಜಾಗತಿಕ ದಾಖಲೆ ಇದನ್ನು ಡಾ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅನೇಕ ಸಮಾಜ ಸುಧಾರಕರು ಬಸವಣ್ಣನವರ ಅನುಭವ ಮಂಟಪದ ಬಗ್ಗೆ ಉಲ್ಲೇಖ ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ಮುಸ್ಲಿಂ ಸಮಾಜದವರು ತಾವಾಗಿಯೇ ಮುಂದೆ ಬಂದು ಬಸವೇಶ್ವರ ಪಂಚ ಕಮಿಟಿ ಅಥವಾ ಬಸವ ಕಲ್ಯಾಣ ಪ್ರಾಧಿಕಾರ ಇದಕ್ಕೆ ಒಪ್ಪಿಸ ಬೇಕು. ಇದು ನಮ್ಮೆಲ್ಲರ ಕಳಕಳಿಯ ಮನವಿ
ಅನುಭವ ಮಂಟಪ ಪರುಷ ಕಟ್ಟೆ ಮುಂತಾದ ಅತಿಕ್ರಮಣ ತೆರವುಗೊಳಿಸಬೇಕು . ಬಸವಾದಿ ಶರಣರು ನಿರ್ಮಿಸಿದ ಅನುಭವ ಮಂಟಪ ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338