ಮಹಾಂತ ಶಿವಾಚಾರ್ಯರ ಖೋಟಾ ಅಧ್ಯಯನ
ಹನ್ನೆರಡನೆಯ ಶತಮಾನದ ದುಡಿವ ಕಾರ್ಮಿಕ ದಲಿತ ಅಸ್ಪ್ರಶಯ ಶೂದ್ರ ದಮನಿತ ಸಮಾಜವನ್ನು ಸಂಘಟಿಸಿ ಬಸವಣ್ಣನವರು ಲಿಂಗಾಯತ ಎಂಬ ವೈಚಾರಿಕ ಧರ್ಮವನ್ನು ಸ್ಥಾಪಿಸಿದರು. ಬಸವಣ್ಣನವರ ನಂತರ ಹರಿಹರ ರಾಘವಾಂಕ ಪಾಲ್ಗುರಿಕೆ ಸೋಮನಾಥ ಕೆರೆಯ ಪದ್ಮರಸ ಕೆರೆ ಪದ್ಮನಾಂಕ ಎಲ್ಲಿಯೂ ವೀರಶೈವ ಪದ ಬಳಕೆ ಮಾಡಿಲ್ಲ ಅದನ್ನು ಮೊಟ್ಟ ಮೊದಲು ಬಳಸಿದವ ಭೀಮ ಕವಿ ವೀರ ಮಾಹೇಶ್ವರ ಬದಲಾಗಿ ವೀರಶೈವ ಬಳಸಿದ್ದು
ವೀರಶೈವರು ಆಂಧ್ರ ಮೂಲದ ಅನಂತಪುರದ ಆರಾಧ್ಯ ಬ್ರಾಹ್ಮಣರು ಹಂಪಿ ಪ್ರೌಢ ದೇವರ ಆಡಳಿತದಲ್ಲಿ ಶರಣ ಸಾಹಿತ್ಯಕ್ಕೆ ದೊರೆಯುವ ಮನ್ನಣೆ ಪುರಸ್ಕಾರ ಮತ್ತು ಉಂಬಳಿ ಗೆ ಆಶೆ ಪಟ್ಟು ಶರಣ ಸಂಸ್ಕೃತಿ ಯಾಮಾರಿಸಿದ ಅವಕಾಶವಾದಿ ಪುರೋಹಿತರು
ಜಾತಿವೇದ ಮುನಿ ಇವರ ಪ್ರಸ್ತಾಪ ಸಿಂಗಿರಾಜ ಪುರಾಣದಲ್ಲಿ ಬರುವ ಕಾಲ್ಪನಿಕ ಕಥೆ ಕಾರಣ ಸಿಂಗಿರ್ರಾಜ ಹದಿನೇಳನೆಯ ಶತಮಾನದಲ್ಲಿ ಬರುವ ಒಬ್ಬ ಜೈನ ಕವಿ ಸಾರಂಗ ಮಠ ಇದು ವೀರಶೈವರ ಹುಟ್ಟು ಕಥೆ
ಶರಣರ ಚರಿತ್ರಗೆ ವಚನಗಳು ಮತ್ತು ಬಸವೊತ್ತರ ಕಾಲದ ಜನಪದ ಸಾಹಿತ್ಯ ಸಂಗ್ರಹ ಸತ್ಯವನ್ನು ಹೇಳಲು ಸಾಧ್ಯ. ಹೆಚ್ಚಿನ ಪ್ರಕ್ಸಿಪ್ತ ವಚನಗಳನ್ನು ಆಧಾರವಾಗಿಟ್ಟು ಕೊಂಡು ಒಂದು ಸುಳ್ಳನ್ನು ಸಾವಿರ ಸಲ ಹೇಳಿ ಜನರನ್ನು ಮೋಸ ಮಾಡುವ ಮೂಲಕ ನಿಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳುವ ಕಾಲ ಮುಗಿದು ಹೋಗಿದೆ .
ನಿಮ್ಮ ನಮ್ಮ ದಾರಿ ಬೇರೆ ಬೇರೆ . ವೀರಶೈವರು ವೈದಿಕರು ಲಿಂಗಾಯತ ಅವೈದಿಕರು
ನಿಮ್ಮ ಗೊಡ್ಡು ವಾದ ಬಿಟ್ಟು ಬಸವ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವಿವೇಕವನ್ನು ಹೆಚ್ಚಿಸಿ ಕೊಳ್ಳಿ.
ಕಲ್ಲಿನಿಂದ ಹುಟ್ಟುವ ಜನರಿಗೆ ಮಾನವ ಬಸವನ ಹೃದಯ ಮನಸ್ಸು ಅರ್ಥವಾಗದು. ಸನ್ಮಾನ್ಯ ಮುಖ್ಯಮಂತ್ರಿಗಳು ವೀರಶೈವರ ಮನವಿ ಪರಿಗಣಿಸದೆ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು ಎಂದು ಪರಿಷ್ಕರಿಸಿ .ಇಲ್ಲದಿದ್ದರೆ ಇನ್ನೊಂದು ದೊಡ್ಡ ಹೋರಾಟಕ್ಕೆ ಕಾರಣ ಆಗಬಹುದು.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ