ಲೋಪಯುಕ್ತ ಪಠ್ಯ ಬದಲಾವಣೆ ಅತ್ಯಗತ್ಯ

ಲೋಪಯುಕ್ತ ಪಠ್ಯ ಬದಲಾವಣೆ ಅತ್ಯಗತ್ಯ

 

ಲೋಪಯುಕ್ತ ಪಠ್ಯ ಬದಲಾವಣೆ ಮಾಡುವಾದಾಗಿ ಸನ್ಮಾನ್ಯ ಮುಖ್ಯಮಂತ್ರಿ ಶ್ರಿ ಬಸವಾರರಾಜ ಬೊಮ್ಮಯಿ ಅವರ ಹೇಳಿಕೆ ಸ್ವಾಗತ. ಬಸವಣ್ಣನವರ ಚರಿತ್ರೆ ಹಾಗೂ ಇತಿಹಾಸ ಸಂಪೂರ್ಣ ಲೋಪಯುಕ್ತ ಪಠ್ಯವಾಗಿದ್ದು ಅದನ್ನು ಕೆಳಗಿನಂತೆ ಬದಲಾವಣೆ ಮಾಡಲು ಆಗ್ರಹ.
ಬರಗೂರು ಸಮಿತಿಯ ಪಠ್ಯವನ್ನೇ ಮುಂದುವರಿಸುವುದಾದರೆ
ಬಸವಣ್ಣನವರನ್ನು ಕುರಿತು ಅದರಲ್ಲಿರುವ ಈ ಕೆಳಗಿನ ತಪ್ಪುಗಳನ್ನು ಸರಿಪಡಿಸಬೇಕು.

೧. …ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚುರಪಡಿಸಿದರು.

೨. ಬಸವಣ್ಣನವರು ಶೈವಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು.

೩. ಸಾಮಾಜಿಕ , ಧಾರ್ಮಿಕ ಚಳವಳಿಯನ್ನು ಬಸವೇಶ್ವರರು ಮಂಗಳಖೇಡಿಯಲ್ಲಿ (ಇದು ಮಂಗಳವೇಡೆ ಎಂದಾಗಬೇಕು) ಆರಂಭಿಸಿದರು.

(ಇವು ಹೊಸ ಪರಿಷ್ಕೃತ ಪಠ್ಯದಲ್ಲಿಯೂ ಮುಂದುವರಿದಿವೆ .ಹಾಗೆಯೇ ಕೆಲವನ್ನು ಕೈಬಿಡಲಾಗಿದೆ .ಮತ್ತೆ ಕೆಲವನ್ನು ತಿರುಚಿ ಹೆಚ್ಚಿಗೆ ಸೇರಿಸಲಾಗಿದೆ )

ಇವು ಈ ಕೆಳಗಿನಂತೆ ತಿದ್ದುಪಡಿಯಾಗಬೇಕು

೧. ಬಸವಣ್ಣನವರು ವೀರಶೈವ ಸಿದ್ಧಾಂತವನ್ನು ಪ್ರಚುರಪಡಿಸಲಿಲ್ಲ; ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.

೨. ಬಸವಣ್ಣನವರು ಯಾವುದೇ ಶೈವಗುರುವಿನ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆಯಲಿಲ್ಲ; ಅವರಿಗೆ ಅರಿವೇ ಗುರುವಾಗಿತ್ತು.

೩. ಸಾಮಾಜಿಕ , ಧಾರ್ಮಿಕ ಚಳವಳಿಯನ್ನು ಬಸವೇಶ್ವರರು ಆರಂಭಿಸಿದುದು ಮಂಗಳವೇಡೆಯಲ್ಲಿ ಅಲ್ಲ; ಕಲ್ಯಾಣದಲ್ಲಿ.

೪ ಶಕ್ತಿ ವಿಶಿಷ್ಟ ದ್ವೈತ ಸಿದ್ದಾಂತ ಪದ ಸಂಪೂರ್ಣ ಕೈ ಬಿಡಬೇಕು ಆದರ ಸ್ಥಳದಲ್ಲಿ ಕಾಯಕ ದಾಸೋಹ ತತ್ವ ಅಥವಾ ಶೂನ್ಯ ತತ್ವ ಬೋಧಿಸಿದಖ ಎಂದಾಗ ಬೇಕು

ಈ ತಿದ್ದುಪಡಿಯೊಂದಿಗೆ ವಿದ್ಯಾರ್ಥಿಗಳಿಗೆ ಸತ್ಯ ಶುದ್ಧ ಪಠ್ಯವನ್ನು ಒದಗಿಸುವಂತಾಗಬೇಕು.
ಅದೇ ರೀತಿ ಕನ್ನಡ ಆರನೆಯ ತರಗತಿ ಕನ್ನಡ ವಿಷಯದಲ್ಲಿ ಡಾ ಎಲ್ ಬಸವರಾಜ ಅವರ ಪಾಠವನ್ನು ಸಂಪೂರ್ಣ ತೆಗೆದು ಅಲ್ಲಿ ಬಸವಣ್ಣನವರ ಬಗೆಗಿನ ತಜ್ಞರ ಪಾಠವನ್ನು ಸೇರ್ಪಡಿಸಲು ವಿನಂತಿ ಮತ್ತು ಅಗ್ರಹ.

ಇವುಗಳ ಜೊತೆಗೆ ಬುದ್ಧ ಅಂಬೇಡ್ಕರ್ ನಾರಾಯಣ ಗುರು ಕುವೆಂಪು ಇವರ ಪಠ್ಯ ಪುಸ್ತಕ ಇನ್ನೊಮ್ಮೆ ಪರಿಷ್ಕರಿಸಿ ಲೋಪ ದೋಷವಿಲ್ಲದ ಪಠ್ಯ ಪುಸ್ತಕ ಪ್ರಕಟಿಸಲು ಮನವಿ.

-ಡಾ ಶಶಿಕಾಂತ ಪಟ್ಟಣ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ

Don`t copy text!