ಮಸ್ಕಿಯ ಡಾ:ಖಲೀಲ್ ವೃತ್ತ ಸರಿಪಡಿಸಲು ಶ್ರೀರಾಮುಲು ಅಭಿಮಾನಿ ಸಂಘ ಒತ್ತಾಯ

e- ಸುದ್ದಿ ಮಸ್ಕಿ
ಪಟ್ಟಣದ ಗಾಡಿಭಾವಿ ಹತ್ತಿರ ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ
ಡಾ.ಖಲೀಲ್‍ಅಹ್ಮದ್ ವೃತ್ತದಲ್ಲಿ ಕಟ್ಟಡ ಕಟ್ಟುವ ಸಾಮಗ್ರಿ ಸೇರಿದಂತೆ ಕಸ ಕಡ್ಡಿಗಳನ್ನು ಹಾಕುತ್ತಿದ್ದಾರೆ,ವೃತ್ತದ ನಾಮಫಲಕ ಹಾಳಾಗುತ್ತಿದ್ದು ಸಾರ್ವಜನಿಕರಿಗೆ ತಿರುಗಾಡಲು ಬಾರದಂತಾಗಿದೆ ಎಂದು ಕಲ್ಯಾಣ ಕರ್ನಾಟಕ ಬಿ.ಶ್ರೀರಾಮುಲು ಅಭಿಮಾನಿ ಸಂಘದ ಉಪಾಧ್ಯಕ್ಷ ಆರ್.ಕೆ.ನಾಯಕ ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಸ್ಕಿ ಐತಿಹಾಸಿಕ ಪಟ್ಟಣಕ್ಕೆ ಡಾ: ಖಲೀಲ್ ಅಹ್ಮದ್ ಅವರ ಕೊಡುಗೆ ಅಪಾರವಾದುದು. ಅಲ್ಲದೇ ಜನರ ಆರೋಗ್ಯವನ್ನು ಕಾಪಾಡುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಆದರೆ ಪಟ್ಟಣಕ್ಕೆ ಮಹಾ ಕೊಡುಗೆ ನೀಡಿದ ವ್ಯಕ್ತಿ ಸವಿನೆನಪಿಗಾಗಿ ಗ್ರಾಮಸ್ಥರು ಖಲೀಲ್ ವೃತ್ತವನ್ನು ನಿರ್ಮಿಸಿದ್ದಾರೆ. ಆದರೆ ವೃತ್ತದ ಸುತ್ತ-ಮುತ್ತಗಳಲ್ಲಿ ಕಸಕಡ್ಡಿ ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ಹಾಕುತ್ತಿರುವುದರಿಂದ ಅಂದ ಹಾಳಾಗುತ್ತಿದೆ. ಅಲ್ಲದೇ ಇದರಿಂದ ರೋಗ ರುಜಿನಗಳು ಸಹ ಉಲ್ಬಣವಾಗುವ ಸಾಧ್ಯತೆಗಳಿವೆ ಕೂಡಲೇ ಸ್ಥಳಿಯ ಪುರಸಭೆ ಆಡಳಿತ ಡಾ:ಖಲೀಲ್ ವೃತ್ತದಲ್ಲಿ ಹಾಕಿರುವ ತ್ಯಾಜ್ಯಾಗಳನ್ನು ತೆಗೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Don`t copy text!