ಬೆಲ್ಲ

 

ನಿಮ್ಮ ಆಹಾರ ನಿಮಗೆಷ್ಟು ತಿಳಿದಿದೆ?

ಬೆಲ್ಲ

ರುಚಿಗಳಲ್ಲಿ ಸಿಹಿ ಎಲ್ಲರಿಗೂ ಪ್ರಿಯವಾದದ್ದೇ, ಮಧುಮೇಹಿಗಳಿಂದ ತುಂಬಿರುವ ಈ ಪ್ರಪಂಚದಲ್ಲಿ ಸಕ್ಕರೆಯನ್ನು ಉಪಯೋಗಿಸಬೇಕೋ ಬೆಲ್ಲವನ್ನು ಉಪಯೋಗಿಸಬೇಕೋ ಇದು ದೊಡ್ಡ ಚರ್ಚೆಯ ವಿಷಯ. ಹಣ್ಣಿನಿಂದ ದೊರೆಯುವ ಸಿಹಿ ಮತ್ತು ಬೆಲ್ಲ ಮಧುಮೇಹಿಗಳಿಗೆ ಹೆಚ್ಚಿನ ಹಾನಿಯನ್ನು ಮಾಡುವುದಿಲ್ಲ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಮೊದಲೆಲ್ಲ ಎಲ್ಲೋ ಪ್ರಯಾಣ ಮಾಡಿ ಬಂದವರಿಗೆ ಬಯಾರಿಕೆ ಕಡಿಮೆಯಾಗಲು ದಣಿವಾರಲು , ಕೈ ಕಾಲು ತೊಳೆದುಕೊಂಡ ಕೂಡಲೇ ಬೆಲ್ಲ ಮತ್ತು ನೀರನ್ನು ಕೊಡುತ್ತಿದ್ದರು.

ಆಂಗ್ಲದಲ್ಲಿ ಜಾಗೇರಿ ಎಂತಲೂ, ಸಂಸ್ಕೃತದಲ್ಲಿ ಗೂಡ ಎಂತಲೂ,ಕನ್ನಡದಲ್ಲಿ ಬೆಲ್ಲ ಎಂತಲೂ, ಹಿಂದಿಯಲ್ಲಿ ಗುಡ್‌ ಎಂತಲೂ ಕರೆಯುತ್ತಾರೆ.
ಬೆಲ್ಲದಲ್ಲಿ 100 ಕ್ಯಾಲರಿ, ಪ್ರೋಟಿನ್‌ 1 ಗ್ರಾಂಗಿಂತಲೂ ಕಡಿಮೆ, ಕೊಬ್ಬು 1ಗ್ರಾಂ ಗಿಂತಲೂ ಕಡಿಮೆ26 ಗ್ರಾಂ ನಷ್ಟು ಕಾರ್ಬೋಹೈಡ್ರೆಟ್ಸ್‌, 1 ಗ್ರಾಂ ಗಿಂತಲೂ ಕಡಿಮೆ ಫೈಬರ್ಸ್‌, 25 ಗ್ರಾಂ ನಷ್ಟು ಸಕ್ಕರೆಯ ಪ್ರಮಾಣವಿರುತ್ತದೆ.

ಬೆಲ್ಲವನ್ನು ಹೇಗೆಮಾಡುತ್ತಾರೆ ಎಂದು ತಿಳಿಯೋಣ. ಕಬ್ಬಿನ ರಸವನ್ನು ತೆಗೆದು ಅದನ್ನು ಆಲೆಮನೆಯಲ್ಲಿ ಒಂದು ನಿರ್ಧಿಷ್ಟ ಉರಿಯಲ್ಲಿ ಕುದಿಸಿ ಆರಿಸಿ ಬೆಲ್ಲವನ್ನು ತಯಾರಿಸುತ್ತಾರೆ. ಇದರಲ್ಲಿ ನೈಸರ್ಗಿಕವಾದ ವಿಟಮಿನ್‌ ಅಥವಾ ಪೋಷಕಾಂಶಗಳು ಇರುತ್ತವೆ. ಆದರೆ ಸಕ್ಕರೆಯ ತಯಾರಿಕೆಯಲ್ಲಿ ರಸಾಯನಿಕಗಳನ್ನು ಬಳಸುವುದರಿಂದ ಸಕ್ಕರೆ ಆರೋಗ್ಯಕ್ಕೆ ಹಾನಿಕರ.

ಬೆಲ್ಲವನ್ನು ಬಹಳ ಹಿಂದಿನಿಂದಲೂ ಬಳಸುತ್ತೇವೆ ಆದರೆ ಸಕ್ಕರೆ ಇತ್ತೀಚಿನ ಬಳಕೆಯಾಗಿದೆ. ಇಂದಿನ ಕಾಲದಲ್ಲಿ ಚಹಾ ಅಥವಾ ಕಾಫಿ , ಸಿಹಿ ಪದಾರ್ಥ ಯಾವುದೇ ಇರಲಿ ಬೆಲ್ಲದಿಂದಲೇ ತಯಾರಿಸುತಿದ್ದರು.

ಬೆಲ್ಲದಿಂದ ನಮಗೆ ಏನು ಪ್ರಯೋಜನವಾಗುತ್ತದೆ ಎಂದು ತಿಳಿಯೋಣ: –

ರಕ್ತ ಮತ್ತು ಯಕೃತ್ತಿನಲ್ಲಿರುವ ಅಶುದ್ಧ ಪದಾರ್ಥಗಳಲ್ಲಿ ತೆಗೆಯುವಲ್ಲಿ ಸಹಾಯ ಮಾಡುತ್ತದೆ.

ಶ್ವಾಸಕೋಶ ಮತ್ತು ಶ್ವಾಸನಾಳದ ಸೋಂಕುಗಳು ಮತ್ತು ಸಮಸ್ಯೆಗಳ ಚಿಕಿತ್ಸೆಯಲ್ಲಿ ಸಹಕಾರಿಯಾಗಿದೆ.

ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸುತ್ತದೆ.

ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆಯಾದಾಗ ಬೆಲ್ಲವನ್ನು ಸೇವಿಸದರೆ ಶಕ್ತಿ ಬರುತ್ತದೆ

ಒತ್ತಡವನ್ನು ಕಡಿಮೆ ಮಾಡುತ್ತದೆ

ಋತು ಚಕ್ರದ ಮೊದಲು ಆಗುವ ನೋವು ಮತ್ತು ಒತ್ತಡ ಪರಿಹರಿಸುತ್ತದೆ

ಆಂಟಿ ಆಕ್ಸಿಡೆಂಟ್‌ ಮತ್ತು ಆಂಟಿ ಕಾರ್‌ಕೋನೋಜೆನಿಕ್‌ ಆಗಿ ಕೆಲಸ ಮಾಡುತ್ತದೆ.

ಯಾವುದೇ ಪದಾರ್ಥವನ್ನು ಅತೀಯಾಗಿ ಸೇವಿಸುವುದಿಲ್ಲ. ಹಾಗೆಯೇ ಅತೀ ಬೆಲ್ಲದ ಸೇವನೆಯನ್ನು ಮಾಡಬಾರದು ಸ್ವಲ್ಪ ಪ್ರಮಾಣದಲ್ಲಿ ದಿನ ನಿತ್ಯದ ಅಡುಗೆಯಲ್ಲಿ ಬಳಸಬೇಕು.
ಬೆಲ್ಲ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗುತ್ತದೆ.

ದಿನದಲ್ಲಿ 10 ಗ್ರಾಂ ಬೆಲ್ಲ ಸೇವಿಸುವುದು ಉತ್ತಮ. ಯಾವುದೇ ಕಾಯಿಲೆ ಇಲ್ಲದೇ ಪಥ್ಯ ಇಲ್ಲದೇ ಇರುವವರು ಇಷ್ಟು ಬೆಲ್ಲ ದಿನನಿತ್ಯ ಸೇವಿಸಬಹುದು. ಹಿಂದೆ ಬೆಲ್ಲ ಪಿತ್ತವನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯಿಂದ ಬೆಲ್ಲದ ಸಜ್ಜಿಗೆ ಮಡುತತಿದ್ದರು. ಬಾಣಂತಿಗೂ ಸಹ ಬೆಲ್ಲದ ಸಜ್ಜಿಗೆಯನ್ನು ಕೊಡುತ್ತಿದ್ದರು. ಬೆಲ್ಲವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ದೇಹದ ತೂಕ ಹೆಚ್ಚುವುದು ಸಹಜವೇ ಆದ್ದರಿಂದ ನಿಯಮಿತವಾಗಿ ಸರಿಯಾದ ಪ್ರಮಾಣದಲ್ಲಿ ಬೆಲ್ಲವನ್ನು ತಿಳಿದು ಬಳಸಬೇಕು.

ಎಲ್ಲ ಪದಾರ್ಥಗಳು ಎಲ್ಲರಿಗೂ ಉಪಯುಕ್ತವಾಗಿರುವುದಿಲ್ಲ. ಕೆಲವರ ದೇಹಕ್ಕೆ ಕೆಲವು ಪದಾರ್ಥಗಳು ತೊಂದರೆ ಕೊಡುತ್ತವೆ ಆ ರೀತಿಯಲ್ಲಿ ಬೆಲ್ಲದಿಂದ ಕೆಲವರಿಗೆ ಕೆಲವು ರೀತಿಯ ಅಡ್ಡ ಪರಿಣಾಮಗಳು ಆಗಬಹುದು

ಬಹು ಮುಖ್ಯ ಅಡ್ಡ ಪರಿಣಾಮ ಎಂದರೆ ತೂಕದ ಹೆಚ್ಚುವಿಕೆ
ಹೆಚ್ಚು ಬೆಲ್ಲದ ಸೇವನೆ ಮಧುಮೇಹವನ್ನು ಹೆಚ್ಚಿಸುತ್ತದೆ.

ಪಾರಾಸಿಟಿಕ್‌ ಸೋಂಕುಗಳನ್ನು ಹೆಚ್ಚಿಸುತ್ತದೆ.

ಹೆಚ್ಚು ಸೇವಿಸಿದರೆ ಅಜೀರ್ಣವೂ ಆಗುತ್ತದೆ.

ಮೂಗಿನಿಂದ ರಕ್ತ ಸ್ರಾವವಘಬಹುದು.

ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.

ಆದರೆ ಬೆಲ್ಲವು ಚರ್ಮದ ಸುಕ್ಕುಗಟ್ಟುವಿಕೆ ಮತ್ತು ಕೆಲವು ಚರ್ಮ ಸಮಸ್ಯೆಗಳಲ್ಲಿ ಉತ್ತಮ ಕೆಲಸವನ್ನು ಮಾಡುತ್ತದೆ. ಮುಖದ ಕಾಂಥಿ ಮತ್ತು ತಾಜಾತನವನ್ನು ಕಾಪಾಡುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಸಹಾಯಕವಾಗಿದೆ. ಬೆಲ್ಲದ ಅತ್ಯುತ್ತಮ ಸಂಗತಿಯೆಂಧರೆ ಬಹಳ ವರ್ಷಗಳ ಕಾಲ ಕೆಡುವುದಿಲ್ಲ. ಬೆಲ್ಲದಲ್ಲಿ ಕಬ್ಬಿಣದ ಅಂಶವಿರುವುದರಿಂದ ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಊಟದ ನಂತರ ಒಂದು ಹರಳು ಬೆಲ್ಲದ ಸೇವನೆ ಜೀರ್ಣ ಕ್ರಿಯೆಯನ್ನು ಪ್ರಚೋದಿಸಿ ಅಸಿಡಿಟಿ ಮತ್ತು ಗ್ಯಾಸ್‌ ತಡೆಯುತ್ತದೆ. ಹಿಂದಿನ ಕಾಲದ ಜನರು ನಮ್ಮ ಅಜ್ಜಿ ತಾತ ಅಥವಾ ಮುತ್ತಾತ ಮತ್ತಜ್ಜಿಯರಲ್ಲಿ ಈಗಲೂ ಊಟದ ನಂತರ ಬೆಲ್ಲ ಸೇವಿಸುವ ರೂಢಿ ಇರುತ್ತದೆ.

ನಾವು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ. ಆರೋಗ್ಯಕರ ಅಭ್ಯಾಸ ಮಾಡಿಕೊಳ್ಳೋಣ. ಅರೋಗ್ಯವಂತರಾಗಿ ಬಾಳೋಣ

ಮಾಧುರಿ ದೇಶಪಾಂಡೆ, ಬೆಂಗಳೂರು

—————————————————————————ಆತ್ಮೀಯ ಓದುಗರೇ,

ಶ್ರೀಮತಿ ಮಾಧುರಿ ದೇಶಪಾಂಡೆ ಬೆಂಗಳೂರು ಇವರು ಇದುವರೆಗೆ e-ಸುದ್ದಿಯಲ್ಲಿ ಬಿಡಿ ಬಿಡಿ ಲೇಖನಗಳನ್ನು ಬರೆಯುತ್ತಿದ್ದರು. ನೀವು ಓದಿರುತ್ತಿರಿ.

ಇವರು ಅನೇಕ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಸಹಕಾರ ಇಲಾಖೆಯ ಅನೇಕ ಇಂಗ್ಲೀಷ ವಿಷಯಗಳನ್ನು ಕನ್ನಡಕ್ಕೆ‌ ಅನುವಾದ ಮಾಡಿದ್ದಾರೆ. ಬಹುಮುಖ ಪ್ರತಿಭೆಯ

ಇನ್ನುಮುಂದೆ ಪ್ರತಿ ಸೋಮವಾರ ನಿಮ್ಮ ಆಹಾರ ನಿಮಗೆಷ್ಟು ತಿಳಿದಿದೆ? ಈ ಅಂಕಣದಲ್ಲಿ ಆರೋಗ್ಯಕ್ಕಾಗಿ ಆಹಾರ ಕುರಿತು 

ಬರೆಯುತ್ತಾರೆ. ಎಂದಿನಂತೆ ಓದುಗರು ಸ್ವಾಗತಿಸಿ ಪ್ರೋತ್ಸಾಹಿಸಲು ವಿನಂತಿ.

ಸಂಪಾದಕ

ವೀರೇಶ ಸೌದ್ರಿ ಮಸ್ಕಿ

9448805067

Don`t copy text!