ವಿಶ್ವ ಕರಾಟೆ ಜ್ಯೂನಿಯರ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಶ್ರೇಯಸ್ ಯಾದವಾಡ ಆಯ್ಕೆ

ವಿಶ್ವ ಕರಾಟೆ ಜ್ಯೂನಿಯರ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಶ್ರೇಯಸ್ ಯಾದವಾಡ ಆಯ್ಕೆ

e-ಸುದ್ದಿ ಅಥಣಿ

ಜಪಾನಿನ ಓಕಿನೊವಾದಲ್ಲಿ ಬರುವ ಅಗಷ್ಟ ಮೊದಲವಾರದಲ್ಲಿ ಜರುಗಲಿರುವ ಪ್ರಥಮ ಓಕಿನೊವಾ ವಲ್ಡ್೯ ಜ್ಯೂನಿಯರ್ ಕರಾಟೆ ಟೂರ್ನಾಮೆಂಟ್ ಗೆಅಥಣಿ ಮೂಲದ ಶ್ರೇಯಸ್ ವೀರಭದ್ರ ಯಾದವಾಡ ಆಯ್ಕೆಯಾಗಿದ್ದಾನೆ.

ನಾಲ್ಕು ವರುಷಗಳಿಗೊಮ್ಮೆ ಆಯೋಜಿಸಲಾಗುವ ವಿಶ್ವ ಕರಾಟೆ ಸ್ಪರ್ಧೆಯು, ಕರಾಟೆ ಹುಟ್ಟಿದ ಸ್ಥಳ ಓಕಿನೊವಾದಲ್ಲಿ ಪ್ರಥಮ ಬಾರಿಗೆ ಇದೇ ಅಗಷ್ಟ ೧ ರಂದು ಪ್ರಾರಂಭವಾಗುವುದು. ಇದನ್ನು ಪಾರಂಪರಿಕವಾಗಿ ಕರಾಟೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಆಯೋಜಿಸಲಾಗಿದೆ.

ಶ್ರೇಯಸ್ ಯಾದವಾಡ ಈತನು ಬೆಂಗಳೂರಿನ OSK ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದು , ಈಗಾಗಲೇ ಜ್ಯೂನಿಯರ್ ವಿಭಾಗದಲ್ಲಿ ನಾಲ್ಕು ರಾಷ್ಟ್ರ ಮಟ್ಟದ ಪದಕಗಳು ಹಾಗೂ ಒಂದು ಅಂತರಾಷ್ಟ್ರೀಯ ಮಟ್ಟದ ಪದಕವನ್ನು ಪಡೆದಿದ್ದಾನೆ.

೧) ೨೦೧೯ ರಲ್ಲಿ ನಡೆದ ರಿಪಬ್ಲಿಕ್ ಕಪ್ KIAI ನ್ಯಾಶನಲ್ ಲೇವಲ್ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಹಾಗೂ ೮ ವರುಷದೊಳಗಿನ ೨೫ ರಿಂದ ೩೦ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ.

೨) ೨೦೨೦ ರಲ್ಲಿ ನಡೆದ ನ್ಯಾಶನಲ್ ರಿಪಬ್ಲಿಕ್ ಡೇ ಕಪ್ ನ್ಯಾಶನಲ್ ಲೇವಲ್ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

೩) ೨೦೨೧ ರಲ್ಲಿ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ ನಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಬ್ರೌನ ಬೆಲ್ಟ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

೪) ೨೦೨೨ ಜನವರಿಯಲ್ಲಿ ನಡೆದ ರಿಪಬ್ಲಿಕ್ ಡೇ ಕಪ್ ನ್ಯಾಶನಲ್ ಲೇವಲ್ ಕರಾಟೆ ಸ್ಪರ್ಧೆಯಲ್ಲಿ ಬ್ರೌನ್ ಬೆಲ್ಟ್ ೧೨ ವರುಷದೊಳಗಿನ ವ್ಯಯಕ್ತಿಕ್ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾನೆ.

 

OSK ಫೆಡರೇಶನ್ ಆಫ್ ಇಂಡಿಯನ್ ಮುಖ್ಯಸ್ಥರಾದ ಸಿಯಾನ್ ಸುರೇಶ ಕೆನಿಚಿರಾ ಇವರ ಮಾರ್ಗದರ್ಶನದಲ್ಲಿ, ಕಿರಣ ಎಂ ಇವರ ನಿತ್ಯ ತರಬೇತಿಯಲ್ಲಿ ಶ್ರೇಯಸ್ ಯಾದವಾಡ ವಿಶ್ವ ಚಾಂಪಿಯನ್ ಶಿಫ್ ಗೆ ಸನ್ನದ್ದನಾಗುತ್ತಿದ್ದಾನೆ. ಈ ಸಂಸ್ಥೆಯು ಮೂರು ದಶಕಗಳ ಇತಿಹಾಸ ಹೊಂದಿದ್ದು , ೨೫ ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಬಂದಿದ್ದಾರೆ.

ಇದೇ ಜುಲೈ ಕೊನೆಯ ವಾರದಲ್ಲಿ OSK ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥರಾದ ಸಿಯಾನ್ ಸುರೇಶ ಕೆನಿಚಿರಾ ಅವರ ನೇತೃತ್ವದಲ್ಲಿ ತಂಡವು ಜಪಾನಿನ ಓಕಿನೊವಾಕ್ಕೆ ಪ್ರಯಾಣ ಬೆಳೆಸಲಿದೆ.

ಶ್ರೇಯಸ್ ಮೂಲತಃ ಅಥಣಿಯ ಖ್ಯಾತ ಹಿರಿಯ ಪತ್ರಕರ್ತರಾದ ಶಿವಪುತ್ರ ಯಾದವಾಡರ ಮೊಮ್ಮಗನಾಗಿದ್ದು, ಜಪಾನಿನ ಯೊಕೊಗೋವಾ ಅಂತರಾಷ್ಟ್ರೀಯ ಕಂಪನಿ ಉದ್ಯೋಗಿ ಬೆಂಗಳೂರಿನ ವೀರಭದ್ರ ಯಾದವಾಡ ಇವರ ಸುಪುತ್ರನಾಗಿದ್ದು, ಸಧ್ಯ ಬೆಂಗಳೂರಿನ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ.

Don`t copy text!