ಮುಂಗಾರು ಮಳೆ
ಬಿಟ್ಟು ಬಿಡದೆ
ಸುರಿಯುತ್ತಿದೆ ಜಡಿಮಳೆ
ಕೆರೆ ಕಟ್ಟೆಗಳೆಲ್ಲ ತುಂಬಿ
ನದಿ ಜಲಪಾತಗಳು
ಮೈ ದುಂಬಿ ಹರಿಯುತ್ತಿವೆ…
ವಸುಂಧರೆಯ
ಒಡಲೆಲ್ಲಾ ತಂಪಾಗಿ
ಹಸಿರುಡುಗೆ ತೊಟ್ಟು
ಕಂಗೊಳಿಸುವ ದೃಶ್ಯ
ನಯನ ಮನೋಹರವಾಗಿದೆ..
ಬೆಂಬಿಡದ ಮಳೆ ಸುರಿದು
ಜಲಪಾತಗಳು ಭೋರ್ಗರೆದು
ಗುಡ್ಡ ಕಾನನಗಳು ಕುಸಿದು
ಅಸ್ಥಿರವಾಗಿದೆ ಬದುಕು…
ರೈತ ಬಿತ್ತಿದ ಬೆಳೆಗಳು
ಮುಳುಗಿಹೋಗುವ ಮುನ್ನ
ಸಾಕು ವರುಣನೇ ಶಾಂತನಾಗು
ಮುನಿಸು ತರವೆ ನೀನೇ ಹೇಳು..
–ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ