ಅನುಭವ ಮಂಟಪದ ತೈಲ ಚಿತ್ರ ಅನಾವರಣ ಹಾಗೂ ಪದಗ್ರಹಣ ಬೈಲಹೊಂಗಲ
e-ಸುದ್ದಿ ಬೈಲಹೊಂಗಲ
ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಅನುಭವ ಮಂಟಪದ ತೈಲ ಚಿತ್ರ ಅನಾವರಣ ಗೊಳಿಸಿದ ಸಂಸದೆ ಮಂಗಳಾ ಅಂಗಡಿ ಮಾತನಾಡಿ ಜಗತ್ತಿನ ಇತಿಹಾಸದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ನೀಡಿದ ಅನುಭವ ಮಂಟಪದ ವಿಶ್ವ ಮಾನ್ಯ ತತ್ವಗಳು ಸರ್ವಕಾಲಿಕ ಸತ್ಯ ಇಂದಿಗೂ ವಚನಗಳು ಜಗದ ಮನ ಸೆಳೆಯುತ್ತಿವೆ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಮಹಾಂತೇಶ್ ಕೌಜಲಗಿ ಪತ್ರಿ ಬಸವೇಶ್ವರ ಅನುಭವ ಮಂಟಪ ನಿರಂತರವಾಗಿ ವಚನ ಪ್ರಚಾರ ಮಾಡುತ್ತಿವೆ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ ಅದಕ್ಕೆ ಮತ್ತೊಂದು ಗರಿ ಎಂದರು.
ಬೈಲಹೊಂಗಲ ಪತ್ರಿ ಬಸವ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಕಾಡ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ್ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿದರು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಮಳಗಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿದರು ಶರಣ ದಂಪತಿಗಳಾದ ಡಾ ಶೈಲಜಾ ಡಾ ಮಂಜುನಾಥ ಮುದುಕನ ಗೌಡರ್ ದಂಪತಿಗಳು ಧ್ವಜಾರೋಹಣ ನೆರವೇರಿಸಿದರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್ ಆರ್ ಠಕ್ಕಾಯಿ ಕರ್ನಾಟಕ ವಿಜ್ಞಾನ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷ ಮೋಹನ್ ಗೌಡ ಪಾಟೀಲ್ ಶರಣ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಎ ಎನ್ ಬಾಳಿ ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ಚಂದ್ರಣ್ಣ ಕೊಪ್ಪದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಿಜಿ ಮಠಪತಿ ಮಲ್ಲೇಶಣ್ಣ ಬೋಳನ್ನವರ್ ಪುಂಡಲೀಕ ಕಡಕೋಳ ನಾಗನಗೌಡ ಪಾಟೀಲ ಗಂಗಪ್ಪಾಅಂಗಡಿ ಮಹದೇವ ಕರಡಿಗುದ್ದಿ ವಿಜಯಗೌಡಾ ಪಾಟೀಲ ಹನುಮಂತಪ್ಪ ಮಸ್ತ್ ನವರ್ ಮಡಿವಾಳಪ್ಪ ಮೂಳಕೂರ ಸಂತೋಷ ಕೊಳವಿ ಹಿರಿಯ ಸಾಹಿತಿಗಳಾದ ಗೌರಾದೇವಿ ತಾಳಿಕೋಟಿ ಮಠ ಅನ್ನಪೂರ್ಣ ಕನೋಜ್ ಕದಳಿ ವೇದಿಕೆ ಅಧ್ಯಕ್ಷ ಮೀನಾಕ್ಷಿ ಕುಡಸೋಮನ್ನವರ್ ಗೌರಿ ಕರ್ಕಿ ಶಂಕ್ರಣ್ಣ ಸೇಬಣ್ಣವರ ಜಿ. ಬಿ. ತುರುಮರಿ ಮಹಾಂತೇಶ ಅಕ್ಕಿ ಅರ್ಜುನ ಕಲಕುಟಕರ ಶರಣ ಸಾಹಿತ್ಯ ಪರಿಷತ್ತ ನೂತನ ಪದಾಧಿಕಾರಿಗಳು ಮುಕ್ತಾಯಕ್ಕ ಅಜ್ಜಗಣ್ಣ ಬಳಗ ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ದಾಸೋಹಿ ಗೀತಾ ಬೇವಿನಗಿಡ ಪಕೀರಪ್ಪ ಸೋಮಣ್ಣವರ ಇವರನ್ನು ಸನ್ಮಾನಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಫಕೀರ್ ನಾಯಕ ಗಡ್ಡಿಗೌಡರ ಸ್ವಾಗತಿಸಿದರು ಉಪಾಧ್ಯಕ್ಷ ಶ್ರೀಶೈಲ್ ಶರಣಪ್ಪನವರ್ ವಂದಿಸಿದರು ವಿದ್ಯಾ ನೀಲಪ್ಪನವರು ದಾಕ್ಷಾಯಿಣಿ ತುಕ್ಕಾನಟ್ಟಿ ನಿರೂಪಿಸಿದರು.