ಹೂವಿನ ತೋಟದಲ್ಲಿ

ಹೂವಿನ ತೋಟದಲ್ಲಿ

ಹೂವಿನ ತೋಟದಲ್ಲಿ
ತಿರುಗಾಡುವ ಬಾರೇ
ಗೆಳತಿ
ಹಕ್ಕಿಗಳ ಸುಮಧುರ
ನಿನಾದವ ಕೇಳುವ ಬಾ

ಅಲ್ಲಿ ನೋಡು
ಉದ್ದ ಬಾಲದ ಹಕ್ಕಿ
ತಿನ್ನುತಿದೆ ಹುಳುಗಳ
ಕುಕ್ಕಿ ಕುಕ್ಕಿ

ಗರಿ ಬಿಚ್ಚಿದ ಮಯೂರ
ನೋಡಲದೆಷ್ಟು ಸುಂದರ
ನಾಟ್ಯ ಮಾಡಿದರೇ
ಸುಂದರ ನೀರೇ

ಕತ್ತನು ಕೊಂಕಿಸಿ
ಮಾತಾಡುತಿದೆ
ಅದೋ ನೋಡು
ಗಿಳಿವಿಂಡು

ಮೆತ್ತನೆ ಹಾಸನು
ಹಾಸಿದೆ ನೋಡು
ಸುಂದರ ಗುಲಾಬಿ
ಎನ್ನುತಿದೆ ಅವೋ ಅಭಿ.

ಸುಂದರ ಈ ಪರಿಸರ
ಆಶ್ಚರ್ಯದ ಮಹಾಪೂರ
ಬಣ್ಣ ಬಣ್ಣದ ಈ ಸೃಷ್ಟಿ
ಆನಂದದ ಪರಮೇಷ್ಟಿ

ಸೃಷ್ಟಿಸಿದ ಅದ್ಭುತ ಕಲಾವಿದ
ಎಲ್ಲೆ ಇಲ್ಲದ ಅಮೋದ
ಆ ಕಲಾವಿದನಿಗೊoದು
ನಮ್ಮದಿದು ನುಡಿ ನಮನ

✍️ರೇಖಾ.ಮುತಾಲಿಕ್
H/o ಶ್ರೀ S. G.ಕನ್ನೂರ್
4th ಕ್ರಾಸ್, ವಿದ್ಯಾಗಿರಿ,
ಬಾಗಲಕೋಟ

Don`t copy text!