ವಿಘ್ನ ಓಡಿಸು ವಿನಾಯಕ

ವಿಘ್ನ ಓಡಿಸು ವಿನಾಯಕ

 


ಗಜಾನನ ನಿನ್ನ ಚರನ ಸೇವೆಯ ಭಾಗ್ಯ ನೀಡು
ವಿಧ್ಯಾಧಿಪತಿಯೇ ವಿಧ್ಯಾ ಬುದ್ಧಿ ಕೊಡು
ಭಕ್ತರ ಮನೆಯಲ್ಲಿ ಸದಾ ನೆಲೆಸು
ಸರ್ವ ಶುಭಕಾರ್ಯಗಳ ಬೇಗನೆ ನಡೆಸು
ಪ್ರಸನ್ನತೆಯ ನೋಟದಿ ಸಕಲರ ಹರಸು

ಎಲ್ಲೆಲ್ಲೂ ಸಮೃದ್ಧಿಯ ತುಂಬಿಸಿ
ಎಲ್ಲ ಜೀವರಾಶಿಗಳ ಉದ್ಧರಿಸಿ
ಅರಿಯದೇ ಮಾಡಿದ ತಪ್ಪುಗಳ ಮನ್ನಿಸಿ
ಎಲ್ಲೆಲ್ಲೂ ಪುಣ್ಯ ಕಾರ್ಯಗಳೇ ನಡೆಯುವಂತಾಗಿ ಬಾಳು ಬೆಳಕಾಗಲಿ

ಮನಸು ಹಸನಾಗಿಸಿ ಫಲಫ್ರದವಾಗಿಸು
ಸಾಸಿವೆ ಕಾಳಿನಷ್ಟಿರುವ ಎನ್ನ ಭಕ್ತಿ
ಈ ಬ್ರಹ್ಮಾಂಡವನ್ನೇ ತೂಗಿಸುವ ನಿನ್ನ ಯುಕ್ತಿ
ನಿನ್ನ ಕೃಪೆಯೊಂದೇ ಸಾಕು
ಜನ್ಮಸಾರ್ಥಕತೆಗೆ ದೇವಾಧಿದೇವಾ

ರಚನೆ :ಶ್ರೀಕಾಂತ. ಮ.ಅಮಾತಿ
ಕಲ್ಯಾಣ (ಪಶ್ಚಿಮ) ಮುಂಬೈ

Don`t copy text!