e-ಸುದ್ದಿ ಗೆ ಎರಡುವರ್ಷ, 2426 ಪೋಸ್ಟ್ , 2 ಸಾವಿರ ಓದುಗರು
e-ಸುದ್ದಿ ಓದುಗರಿಗೆಲ್ಲ ನಮಸ್ಕಾರಗಳು, ಬನ್ನಿ ತಗೋಳ್ರೀ ನಾವು ನೀವು ಬಂಗಾದಂಗ ಇರೋಣ, ವಿಜಯದಶಮಿಯ ಶುಭಾಶಯಗಳು 🙏
ಅಕ್ಟೋಬರ್ 2, 2020 ಗಾಂಧಿಜಯಂತಿಯಂದು e-ಸುದ್ದಿ ಅಂತರಜಾಲದ ಪತ್ರಿಕೆ ಪ್ರಾರಂಭವಾಯಿತು. ಎರಡು ದಿನ ಪ್ರಾಯೋಗಿಕ ಸಂಚಿಕೆ ಪ್ರಕಟಿಸಿದ ನಂತರ ಅಧಿಕೃತವಾಗಿ ವಿಜಯದಶಮಿಯಂದು ಓದುಗರಿಗೆ ತಲುಪಿಸುವ ಕೈಂಕರ್ಯಕ್ಕೆ ಮುಂದಾಯಿತು.
ಪತ್ರಿಕೆ ಪ್ರರಾಂಭವಾದದ್ದು ಅತ್ಯಂತ ಸರಳವಾಗಿ ಯಾವುದೇ ಆಡಂಬರವಿಲ್ಲ, ಜನಜಂಗುಳಿ ಇಲ್ಲ. ಅತಿಥಿ ಮಹೋದಯರಿಲ್ಲ, ಭಾಷಣ, ಮಾತುಕತೆ ಸದ್ದು ಗದ್ದಲವಿಲ್ಲ.
ನನ್ನ ಅಂಗಡಿಯಲ್ಲಿ ನನ್ನ ಮಕ್ಕಳಾದ ಸಮರ್ಥ ಸೌದ್ರಿ ಮತ್ತು ಹರ್ಷ ಸೌದ್ರಿ ಲ್ಯಾಪ್‌ಟಾಪ್ ನ ಬಟನ್ ಒತ್ತುವ ಮೂಲಕ e-ಸುದ್ದಿ ಯನ್ನು ಬಿಡುಗಡೆ ಮಾಡಿದರು. ಅಂದಿನ ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಮತ್ತು ಪತ್ರಕರ್ತ ಇಂದರ್ ಪಾಷಾ, ಬಾಗವಾನ ಜತೆಯಾಗಿದ್ದರು.
ಸರಳವಾಗಿ ಉದ್ಘಾಟನೆಯಾದ e-ಸುದ್ದಿ ಎರಡು ವರ್ಷದಲ್ಲಿ ಇದುವರೆಗೆ ೨೪೨೬ ಪೋಸ್ಟ್ ಗಳನ್ನು ಪ್ತಕಟಿಸಲಾಗಿದೆ. ಪ್ರಕಟವಾಗುವ ಎಲ್ಲಾ ಸುದ್ದಿ ಮತ್ತು ಬರಹಗಳು 2 ಸಾವಿರ ಜನರಿಗೆ ಪ್ರತಿ ನಿತ್ಯ ತಲುಪಿಸಲಾಗುತ್ತಿದೆ.
ಆರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳು ಮತ್ತು ಸಾಹಿತ್ಯವಾಗಿ ಬರಹಗಳನ್ನು ಪ್ರಕಟಿಸಬೇಕೆಂಬ ಉದ್ದೇಶವಿತ್ತು. ಆದರೆ ಇಷ್ಟು ಬೇಗ ಕಲ್ಯಾಣ ಕರ್ನಾಟಕವಲ್ಲದೆ ಕಿತ್ತೂರು ಕರ್ನಾಟಕ, ಮುಂಬೈ, ಪುಣೆ ಹಾಗೂ ವಿದೇಶದಲ್ಲಿರುವ ಕೆಲ ಕನ್ನಡಿಗರು e-ಸುದ್ದಿಯ ಓದುಗರು ಆಗಿರುವುದು ಸಾರ್ಥಕವೆನಿಸುತ್ತದೆ.
ಅತಿಹೆಚ್ಚು 739 ಸಾಹಿತ್ಯಕ ಲೇಖನಗಳು, 698 ವಿಶೇಷ ಲೇಖನಗಳು , 542 ಮಸ್ಕಿಯ ವರದಿಗಳು ಪ್ರಕಟವಾಗಿದ್ದರೆ, ಲೈಫ್ ಸ್ಟೋರಿ, ಐತಿಹಾಸಿಕ, ಕೃಷಿ, ಕ್ರೀಡೆ, ಜ್ಞಾನ ವಿಜ್ಞಾನ, ದೇಶ-ವಿದೇಶ, ಧಾರ್ಮಿಕ, ನಾನು ನನ್ನಿಷ್ಟ, ನಿಮ್ಮೂರು, ಶಿಕ್ಷಣ,ಐತಿಹಾಸಿಕ, ಸಿನಿ ಜಗತ್ತು ಹೀಗೆ ವಿವಿಧ ರೀತಿಯ ಎಲ್ಲಾ ಸ್ಥರದ ಬರಗಳನ್ನು ಪ್ರಕಟಿಸಿದ್ದು e-ಸುದ್ದಿ ಯ ಹೆಗ್ಗಳಿಕೆ.
ರಾಯಚೂರು, ಕಲಬುರ್ಗಿ, ಬೀದರ,ಯಾದಗೀರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಕಾರವಾರ, ಧಾರವಾಡ, ಹುಬ್ಬಳ್ಳಿಗಳಿಂದ ಸುದ್ದಿಗಳನ್ನು ಪ್ರಕಟಿಸಿದ್ದೇವೆ.
ಇಂದಿನಿಂದ 3 ನೇ ವರ್ಷದಲ್ಲಿ ಪಾದರ್ಪಣೆ ಮಾಡುತ್ತಿದ್ದೇವೆ. ಎಂದಿನಂತೆ ನಮ್ಮ ಓದುಗರು e-ಸುದ್ದಿ ಯನ್ನು ಬರಮಾಡಿಕೊಳ್ಳಿ. ಟೀಕೆ, ಟಿಪ್ಪಣೆ, ಮೆಚ್ಚುಗೆ, ಸಲಹೆಗಳಿಗೆ ಸದಾ ಸ್ವಾಗತ.
ಈ ವರ್ಷ ಇನ್ನೂ ಹೆಚ್ಚಿನ ಸುದ್ದಿ, ಹಾಗೂ ಬರಹಗಳನ್ನು ಕೊಡುವಲ್ಲಿ ಕ್ರಿಯಾಶೀಲರಾಗುತ್ತಿದ್ದೇವೆ.
e-ಸುದ್ದಿ ಹೊಸ ಹೊಸ ಲೇಖಕರಿಗೆ ಒಂದು ವೇದಿಕೆಯಾಗಿದ್ದರೆ, ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಿರಿಯ ಲೇಖಕರು ಪ್ರೀತಿಯಿಂದ ಲೇಖನ ಕಳಿಸುವ ಮೂಲಕ ನನಗೆ ಪ್ರೋತ್ಸಾಹಿಸಿದ್ದಾರೆ. ಅವರಿಗೆಲ್ಲ ನಾನು ಚಿರರುಣಿ.
ಇವತ್ತು ಪ್ರಿಂಟ್ ಮಿಡಿಯಾ ಮತ್ತು ದೃಷ್ಯ ಮಾದ್ಯಮಕ್ಕಿಂತ ಸಾಮಾಜಿಕ ಜಾಲತಾಣ ಅತೀ ವೇಗವಾಗಿ ಜನರಿಗೆ ತಲುಪುವ ಮಾದ್ಯಮವಾಗಿದೆ.
ದಿನಕ್ಕೆ1 ರೂ.ಕೊಡಿ. ಹತ್ತು ಬರಹ ಓದಿ
e-ಸುದ್ದಿ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ಎರಡು ಸಾವಿರ ಜನರಿಗೆ ನಿಯಮಿತವಾಗಿ ಸುದ್ದಿ ಹಾಗೂ ಲೇಖನಗಳನ್ನು ಕಳಿಸುತ್ತಿದ್ದೇವೆ. ಇದುವರೆಗೂ ಓದುಗರಿಂದ ಹಣ ಪಡೆದಿಲ್ಲ, ಮತ್ತು ಜಾಹಿರಾತು ಪ್ರಕಟಿಸಿದ್ದು ಬೆರಳಣಿಕೆಯಷ್ಟು. ಕೆಲ ಗೆಳೆಯರು, ಹಿರಿಯರು ಒಂದಿಷ್ಟು ಹಣ ಕಳಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ.
ಅಂತರಜಾಲದ ನಿರ್ವಹಣೆ, ವಾರ್ಷಿಕ ಶುಲ್ಕ್ ಹೆಚ್ಚಾಗುತ್ತಿದೆ. ಹಾಗಾಗಿ e-ಸುದ್ದಿ ಓದುಗರು ನನಗೆ ದಿನಕ್ಕೆ ಒಂದು ರೂಪಾಯಿ ಕೊಡಿ ಸಾಕು. ನಿಮಿಷ್ಟದ ಬರಹಗಳನ್ನು ಕೊಡುವ ಜವಬ್ದಾರಿ ನನ್ನದು. ದಿನಕ್ಕೆ ಒಂದು ರೂ. ಕೊಡುವುದು ನಿಮಗೆ ಭಾರ ಅಲ್ಲ ಅಂದುಕೊಂಡಿರುವೆ. ನೀವು ಕೊಡುವ ಒಂದು ರೂಪಾಯಿ ನಮ್ಮ ತಂಡದ ಚೈತನ್ಯ ಹೆಚ್ಚಿಸುತ್ತದೆ.
ಪ್ರತಿದಿನ 1 ರೂಪಾಯಿ ಆದರೆ ವರ್ಷಕ್ಕೆ 365 ರೂ. ಆಗುತ್ತದೆ. ಒಂದೇ ಸಲ ಹಣ ಕಳಿಸುವವರಿಗೆ ರಿಯಾಯಿತಿಯಾಗಿ ವರ್ಷಕ್ಕೆ 3೦೦ ರೂ.ಕಳಿಸಿ. ಸಾಕು. 3೦೦ ರೂ.ಒಂದೇ ಸಲ ಕಳಿಸಲಾರದವರು ಅರ್ದವಾರ್ಷಿಕದಂತೆ ಎರಡು ಸಲ 150 ರೂ.ಕಳಿಸಿ. ಇಲ್ಲ ಪ್ರತಿ ತಿಂಗಳು 30 ರೂ. ಕಳಿಸಿ.
ಹಣ ಕೊಟ್ಟು ಚಂದಾದಾರದವರಿಗೆ ಮಾತ್ರ ಇನ್ನೂ ಮುಂದೆ
e-ಸುದ್ದಿ ಪೋಸ್ಟ್ ಮಾಡಲಾಗುತ್ತದೆ. ಚಂದಾದಾರಲ್ಲದವರಿಗೆ ಕಳಿಸುವುದಿಲ್ಲ. ಚಂದಾದಾರರು ಆಗಲು ಕೊನೆಯ ದಿನಾಂಕ 31-10-2022
ನಿಮ್ಮ ಚಂದಾ ಹಣವನ್ನು 9448805067 ನಂ.ಗೆ ಪೋನ್ ಪೇ, ಗೂಗಲ್ ಪೇ ಮಾಡಬಹುದು. ಚಂದಾ ಹಣ ಕಳಿಸಿದವರು ಸ್ಕ್ರೀನ್ ಚಾಟ ತಪ್ಪದೆ ಕಳಿಸಿ. ರಶೀದಿ ಕಳಿಸಲಾಗುತ್ತದೆ.
ದಯವಿಟ್ಟು ಎಲ್ಲಾ ಓದುಗರು ಚಂದಾ ಹಣ ಕೊಡುವ ಮೂಲಕ ಸಹಕರಿಸಿ. ನಮ್ಮನ್ನು ಬೆಂಬಲಿಸಿ. ನೀವು ನಿಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ.
ಇಂತಿ
ಸಂಪಾದಕ
ವೀರೇಶ ಸೌದ್ರಿ ಮಸ್ಕಿ
ಕರೆಗಂಟೆ- 9448805067