ಯಶವು ಪಯಣ

ಯಶವು ಪಯಣ

ಯಶವು ಪಯಣ
ಗುರಿಯಲ್ಲ
ಹೆಜ್ಜೆ ದಾರಿ ಸವೆತ

ಶ್ರಮ ಸಾರ್ಥಕ
ಅಲ್ಲ ಸಾಧನೆ
ಅಂತರಂಗದ ತಿವಿತ

ಹಲವು ತೊಡರು
ಎಳು ಬೀಳು
ಮರದ ಕೋತಿ ಕುಣಿತ

ಗೆದ್ದೇನೆಂಬ ಬೀಗುಬೇಡ
ಸೋತ ದಿನಗಳ
ನೋವ ಮರೆತ

ನಗೆಯು ಮಲ್ಲಿಗೆ
ಆಳುವು ಗೊಬ್ಬರ
ತನುವು ತೋಟದ ಧುರಿತ

ಸ್ನೇಹ ಪ್ರೀತಿ
ಒಡೆದ ಹೃದಯಕೆ
ತೇಪೆ ಹಚ್ಚಲಿ ಕೊರೆತ

ನಾವು ಬದುಕಿ
ಜಗವು ಬದುಕಲಿ
ಬುದ್ಧ ಬಸವನರಿತ

ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!