ರೋಹಿಣಿ ಯಾದವಾಡರಿಗೆ ಕಾಯಕ ರತ್ನ ಪ್ರಶಸ್ತಿ
e-ಸುದ್ದಿ ಅಥಣಿ
ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ (ರಿ) ದ ವತಿಯಿಂದ ಕೊಡಮಾಡುವ ” ಕಾಯಕ ರತ್ನ ೨೦೨೨ ” ಪ್ರಶಸ್ತಿಯನ್ನು, ಬೆಳಗಾವಿ ಜಿಲ್ಲೆ ಅಥಣಿಯ ಸಾಹಿತಿ, ಕವಯತ್ರಿ, ಅಂಕಣಕಾರ್ತಿ , ಆಧುನಿಕ ವಚನಕಾರ್ತಿ, ಶಿಕ್ಷಕಿ ರೋಹಿಣಿ ಯಾದವಾಡರಿಗೆ ನೀಡಿ ಗೌರವಿಸಲಾಗಿವುದು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ಸಿ. ಸಿ. ಹೇಮಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಶನಿವಾರ ದಿ. ೮ ರಂದು ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ದಲ್ಲಿ ನಡೆಯಲಿರುವ ” ಸರ್ವಧರ್ಮ ಸಂಸತ್ ೨೦೨೨ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಮೂಲತಃ ಅಥಣಿಯವರಾದ ರೋಹಿಣಿ ಯಾದವಾಡ ಅವರು ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದು. ಸಾಹಿತ್ಯ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದು, ಅಣ್ಣಾ ಹಜಾರೆ , ಡಾ.ಮಂದಾಕಿನಿ ಪಟ್ಟಣ, ಶಿವನೂರ ಗೌಡರ ಸಾರ್ಥಕ ಸಂಭ್ರಮ ಮೊದಲಾದ ವ್ಯಕ್ತಿಚಿತ್ರಣ, ” ವಚನ ಸೌರಭ”, ” ಜೀವಸೆಲೆ” ಕವನ ಸಂಕಲನ, ” ಅಂತರ್ಗತ ” ಅಂಕಣಬರಹ ಸಂಗ್ರಹ, ಡಾ. ಈಶ್ವರ ಮಂಟೂರರ ” ಈಶ ಗೀತ ಗುಚ್ಛ” , ಸಹಸಂಪಾದಕತ್ವದಲ್ಲಿ ಕೃತಿಗಳನ್ನು ಹೊರತಂದಿದ್ದಾರೆ. ಅಖಿಲ ಭಾರತ ಕನ್ನಡ ಸಮ್ಮೇಳನಗಳಲ್ಲಿ ಉಪನ್ಯಾಸ, ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ, ” ಮಹಿಳಾ ರತ್ನ”, ” ಮಹಿಳಾ ಲೋಕದ ಕಣ್ಮಣಿ”, ” ಮಹಿಳಾ ಮನಿಹ ರತ್ನ” , ” ಬೆಸ್ಟ್ ಟೀಚರ್”, ” ಜಿಲ್ಲಾ ಆದರ್ಶ ಪತ್ರಕರ್ತೆ” ಹಾಗೂ ರಾಜ್ಯ ಸರ್ಕಾರದ ” ರಾಜ್ಯ ಯುವ ಪ್ರಶಸ್ತಿ” ಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈಚೆಗೆ ” ಗಡಿನಾಡ ಸಾಂಸ್ಕೃತಿಕ ಸಂಭ್ತಮ ಸಮ್ಮೇಳನದ ಸರ್ವಾಧ್ಯಕ್ಷೆ” ಸ್ಥಾನವನ್ನು ಅಲಂಕರಿಸಿದ್ದರು.
“ಕಾಯಕ ರತ್ನ ” ಪ್ರಶಸ್ತಿ ಸಂದಿದಕ್ಕೆ ಕಸಾಪ ಜಿಲ್ಲಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಜಿಲ್ಲಾ ಲೇಖಕಿಯರ ಸಂಘ, ಶೆಟ್ಟರ ಮಠದ ಪೂಜ್ಯ ಮರುಳಸಿದ್ದ ಸ್ವಾಮೀಜಿ, ತಹಶೀಲ್ದಾರ ಸುರೇಶ ಮುಂಜೆ, ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ, ಅಥಣಿ ವಿದ್ಯಾವರ್ಧ ಕ ಸಂಸ್ಥೆಯ ಅಧ್ಯಕ್ಷ ಸುನಿಲ್ ಶಿವಣಗಿ , ಪ್ರಕಾಶ ಮಹಾಜನ ಆಡಳಿತ ಮಂಡಳಿ ಸದಸ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ, ರಾಣಿ ಚನ್ನಮ್ಮ ಪೌಂಡೇಶನ್ ಅಧ್ಯಕ್ಷ ಶಶಿಧರ ಬರ್ಲಿ ಮೊದಲಾದವರು ಅಭಿನಂದಿಸಿದ್ದಾರೆ.