ಯುವಕರು ಪಕ್ಷ ಸಂಘಟನೆಯಲ್ಲಿ ತೊಡಗಿ-ಪ್ರತಾಪಗೌಡ ಪಾಟೀಲ
e-ಸುದ್ದಿ ಮಸ್ಕಿ :
ಪಕ್ಷದ ಸಂಘಟನೆಯಲ್ಲಿ ಯುವಕರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡುವ ಮೂಲಕ ಮೊತ್ತಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕರೆ ನೀಡಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಯುವ ಮೊರ್ಚದ ತಾಲ್ಲೂಕು ಅಧ್ಯಕ್ಷ ಶರಣೇಗೌಡ ಪಾಟೀಲ್ ತಿಡಿಗೋಳ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ‘ಯುವಕರನ್ನು ಗುರುತಿಸಿ ಹೆಚ್ಚಿನ ಜವಬ್ದಾರಿಯನ್ನು ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು
ಚುನಾವಣೆ ಸಂದರ್ಭದಲ್ಲಿ ಯುವಕರು ನಿರ್ಣಯಕ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಪಕ್ಷದ ಯುವ ಮೊರ್ಚದ ನೂತನ ಅಧ್ಯಕ್ಷರು ತಂಡವನ್ನು ಕಟ್ಟಿಕೊಂಡು ಕ್ಷೇತ್ರದಾದ್ಯಂತ ಯುವಕರನ್ನು ಸಂಘಟಿಸುವ ಮೂಲಕ ಬಿಜೆಯನ್ನು ಅಧಿಕಾರಕ್ಕೆ ತರುವಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದರು.
ಪಕ್ಷದ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಯುವ ಮೊರ್ಚದ ರಾಜ್ಯ ಪರಿಷತ್ ಸದಸ್ಯ ಅಡಿವೇಶಸ್ವಾಮಿ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ವಿರುಪಣ್ಣ ಸಾಹುಕಾರ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಬಸವರಾಜ ಸ್ವಾಮಿ, ಎಸ್ಸಿ ಮೊರ್ಚದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ ವಕೀಲ, ಮಹಾಂತಪ್ಪ ಸಾಹುಕಾರ, ಬಸವರಾಜಪ್ಪ ಕುರಕುಂದ, ಮಲ್ಲನಗೌಡ ಗುಂಜಳ್ಳಿ, ವೆಂಕೋಬ ಸಾಹುಕಾರ, ಸುಕುಮುನಿಯಪ್ಪ ತುರ್ವಿಹಾಳ ಪಕ್ಷದ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಮಲ್ಲುಯಾದವ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು.