ಸಂಗೊಳ್ಳಿ ರಾಯಣ್ಣ ತತ್ವಗಳನ್ನು ಅರಿತು ಅಳವಡಿಸಿಕೊಳ್ಳಿ -ಕೆ.ವಿರೂಪಾಕ್ಷಪ್ಪ
e-ಸುದ್ದಿ ಮಸ್ಕಿ:
ಹಾಲುಮತ ಸಮಾಜದ ಯುವಜನಾಂಗ ಸ್ವಾತಂತ್ರ‍್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಮಾಜಿ ಸಂಸದ ಕೆ,ವಿರೂಪಾಕ್ಷಪ್ಪ ಕರೆ ನೀಡಿದರು
ತಾಲ್ಲೂಕಿನ ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ರಾಯಣ್ಣನವರ ನೂತನ ಮೂರ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ “ ರಾಯಣ್ಣನ ಪ್ರಾಧಿಕಾರ ಹೆಸರಿನಲ್ಲಿ ಸಂಶೋಧನಾ ಕೇಂದ್ರಗಳು, ಸೈನಿಕ ಶಾಲೆಗಳನ್ನು ಸರ್ಕಾರಗಳು ಆರಂಭಿಸಿವೆ, ಅದರ ಪ್ರಯೋಜನೆಗಳನ್ನು ಯುವಜನಾಂಗ ಬಳಸಿಕೊಳ್ಳಬೇಕು ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಪದಾಧಿಕಾರಿಗಳು ಮೂರ್ತಿಗಳನ್ನು ಸ್ಥಾಪಿಸಿ ರಾಯಣ್ಣನ ಆದರ್ಶಗಳನ್ನು ಯುವಜನಾಂಗಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತುರ್ವಿಹಾಳದ ಮಾದಯ್ಯ ಗುರುವಿನ, ಸೋಮಲಿಂಗೇಶ್ವರ ದೇವರುಷಿಗಳು ಹಿಪ್ನಾಳ, ಮಾಡಗಿರಿಯ ರಾಮಣ್ಣ ಪೂಜಾರಿ, ಹೂವಿನಭಾವಿಯ ಅಂಬಣ್ಣ ಪೂಜಾರಿ, ಅಯ್ಯಪ್ಪತಾತ ಆರೂಢಮಠ ಮಲ್ಲದಗುಡ್ಡ, ನಾಗಯ್ಯ ಗುರುವಿನ ಗೌಡನಭಾವಿ ಇದ್ದರು.
ಶಾಸಕ ಆರ್ ಬಸನಗೌಡ ತುರವಿಹಾಳ , ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕೆ. ಕರಿಯಪ್ಪ, ದೊಡ್ಡ ಬಸವರಾಜ ನಿರುಪಾದೆಪ್ಪ ವಕೀಲರು
ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲನಗೌಡ ಸುಂಕನೂರು ನಗರ ಘಟಕದ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಬಸವಂತರಾಯ ಕುರಿ, ಚೆಂದಪ್ಪ ಹೊಸೂರು, ಹನುಮಂತಪ್ಪ ಮುದ್ದಾಪುರ, ಮೆಹಬೂಬ ಸಾಬ್ ಮುದ್ದಾಪುರ, ಶಿವಣ್ಣ ನಾಯಕ ವೆಂಕಟಾಪುರ, ಕರಿಯಪ್ಪ ಪೂಜಾರಿ ಬೆಂಗಳೂರು, ಬಸವರಾಜ ವಕೀಲರು ಡೊಣಮಡಿ, ಕರಿಯಪ್ಪ ಹಾಲಾಪುರ, ದುರುಗೇಶ ವಕೀಲರ, ಹನುಮೇಶ ಬಾಗೋಡಿ, ಬಸವರಾಜ ಚಿಕ್ಕಕಡಬೂರು,ಈರಣ್ಣ ರಾಯಚೂರು, ರಾಘವೇಂದ್ರ ಹರ್ವಾಪುರ, ಮಲ್ಲಯ್ಯ ಹಾಲ್ದರ್ ಮಸ್ಕಿ, ಶರಣ ಬಸವ ಗುಡದಿನ್ನಿ ಸೇರಿದಂತೆ ಇತರರು ಇದ್ದರು.