ಕರಗಿದ ಕುಂಕುಮ…
ಬೇಡೆನಗೆ ಈ
ದೇವಿಯ ಪಟ್ಟ..
ಬಾಳಲು ಬಿಡಿ
ಹೆಣ್ಣಾಗಿ ನನ್ನ..
ನನ್ನ ಕನಸುಗಳಿಗೆ
ಕಲೆಸಬೇಡಿ ಹೊಲಸು ಕೆಸರು
ಮಾಡಿ ನನ್ನ ದೇವದಾಸಿ
ಕಾಮುಕರ ಕೈಗಿಡಬೇಡಿ..
ವಿಕೃತ ಸಮಾಜದ
ಅನಿಷ್ಟ ಪರಂಪರೆಯ
ಕೈಗೊಂಬೆ ಮಾಡಬೇಡಿ
ಮರ್ಯಾದೆಯ ಬದುಕು ಕೊಡಿ
ಪೌರುಷದ ಆ ನೋಟ
ಕಾಮ ಪಿಶಾಚಿಯ ಬೇಟ
ದೇವಿ ಹೆಸರಿನ ಕುಂಕುಮ
ಕರಗಿ ನಲುಗಿ ನರಳುತಿದೆ…
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ