ವಸತಿ ಯೋಜನೆ ಮನೆಗಳಿಗೆ ಗ್ರಹಣ, 9 ಕೋಟಿ ರೂ.ಬಾಕಿ !

e-ಸುದ್ದಿ, ಮಸ್ಕಿ
ರಾಜ್ಯದಲ್ಲಿ ಗುಡಿಸಲು ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ಸರ್ಕಾರ ವಿವಿಧ ವಸತಿ ಯೋಜನೆಗಳಲ್ಲಿ ಅರ್ಹ ಪಲಾನುಭವಿಗಳನ್ನು ಗುರಿತಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಸೂಚಿಸಿದೆ. ಆದರೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಪಲಾನುಭವಿಗಳಿಗೆ ವರ್ಷ ಕಳೆದರೂ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ.
ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ವಸತಿ ರಹಿತರಿಗಾಗಿ ಕಳೆದ 2018-19, 2019-20ನೇಸಾಲಿನಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 1600 ಕ್ಕೂ ಅಧಿಕ ಮನೆಗಳನ್ನು ವಿತರಿಸಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಮನೆ ಮಂಜೂರಾದವರು ಸಾಲ ಮಾಡಿ ಹಂತ-ಹಂತವಾಗಿ ಮನೆಗಳನ್ನು ಕಟ್ಟಿಸಿಕೊಂಡು ಸರ್ಕಾರದ ಸಹಾಯ ಧನಕ್ಕಾಗಿ ಕಳೆದ ಒಂದು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಂದಾಜು 9 ಕೋಟಿ ರೂ.ಗೂ ಅಧಿಕ ಹಣ ಫಲಾನುಭವಿಗಳಿಗೆ ವಿತರಿಸಲು ಬಾಕಿ ಉಳಿದಿದೆ.
ಮಸ್ಕಿ ಪಟ್ಟಣದಲ್ಲಿ ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ್, ವಾಜಪೇಯಿ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಸುಮಾರು 550 ಮನೆಗಳು ಮಂಜೂರು ಆಗಿವೆ. ಎಸ್‍ಸಿ 225, ಎಸ್‍ಟಿ 131, ಸಾಮಾನ್ಯ 131, ಅಲ್ಪಸಂಖ್ಯಾತರಿಗೆ 25 ಮನೆಗಳು ಮಂಜೂರು ಆಗಿವೆ. ಅದರಲ್ಲಿ 243 ಮನೆಗಳು ಸಂಪೂರ್ಣಗೊಂಡಿವೆ. ಇನ್ನೂಳಿದ 183 ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಹಣ ಬರದೆ ಇರುವುದರಿಂದ ಮನೆಗಳು ಅರ್ಧಕ್ಕೆ ಕಟ್ಟಿ ಸ್ಥಗಿತ ಗೊಂಡಿವೆ.
ಪುರಸಭೆಯ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಮನೆಗಳನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡುವಂತೆ ವಸತಿ ನಿಗಮಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಿಗಮದಲ್ಲಿ ಹಣದ ಕೊರತೆಯಿಂದ ಹಣ ಬಿಡುಗಡೆ ವಿಳಂಭವಾಗುತ್ತದೆ ಎಂದು ಸೂಚನಾ ಫಲಕದಲ್ಲಿ ಪ್ರಕಟಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಪುರಸಭೆಯ ಸದಸ್ಯ ಎಂ.ಅಮರೇಶ ತಿಳಿಸಿದ್ದಾರೆ.
ಒತ್ತಾಯ: ಸರ್ಕಾರ ಕೂಡಲೆ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಹಣ ಬಿಡುಗೆಡ ಮಾಡಬೇಕು ಎಂದು ಪಲಾನುಭವಿಗಳು ವಸತಿ ಸಚಿವ ವಿ.ಸೊಮಣ್ಣ ಅವರಿಗೆ ಒತ್ತಾಯಿಸಿದ್ದಾರೆ.
——————————————-

ನಮ್ಮ ಮನೆ ಅರ್ಧಕ್ಕೆ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳಿಂದ ಮನೆ ಆಯ್ಕೆಯಾಗಿದೆ. ಸಾಲ ಮಾಡಿ ಅರ್ಧಕ್ಕೆ ಕಟ್ಟಿದ್ದೇವೆ. ಸರ್ಕಾರದಿಂದ ಹಣ ಬಂದಿಲ್ಲ. ಹಾಗಾಗಿ ಮನೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
-ಅಂಬಮ್ಮ ಗಂಡ ಲಿಂಗಪ್ಪ ಅಂಕುಶದೊಡ್ಡಿ
———————–

ಮಸ್ಕಿ ಕ್ಷೇತ್ರದಲ್ಲಿ ವಸತಿ ಮನೆಗಳು ಅರ್ಪೂಣವಾಗಿವೆ. ಅವುಗಳ ಸ್ಥಿತಿಗತಿ ಕುರಿತು ಸಂಪೂರ್ಣ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸುವೆ.
-ಪ್ರತಾಪಗೌಡ ಪಾಟೀಲ ಮಾಜಿ ಶಾಸಕ, ಮಸ್ಕಿ

Don`t copy text!