ಜಲ ಷಟ್ಪದಿ
ಮುಗ್ದ ಮನಸಿನ ಮಗು
ಹಸಿರು ದಿರಿಸಲಿ
ಪಸಿರು ಬಳೆಯಲಿ
ತುಸುವೆ ನಗುವನು ಹೊಮ್ಮಿಸಿ
ಸಸಿಯ ಚಿಗುರದು
ಹುಸಿಯನಾಡದು
ಹಸುಳೆ ಮನಸಿನ ಮುಗ್ದತೆ
ಸರಳ ಚೆಂದದಿ
ಮೆರೆವ ಚೆಲುವದು
ಕರವು ಬೆರಗನು ಸೂಚಿಸಿ
ಇರುವ ಮನೆಯಲಿ
ತರುವೆ ಸಂತಸ
ಮರೆಸಿ ಮನದಾ ನೋವನು
ಹೊಳೆವ ಕಂಗಳು
ಸೆಳೆವ ನೋಟವು
ಸುಳಿದ ಹುಸಿನಗೆ ಸೆಳೆದಿದೆ
ಎಳೆಯ ಕರದಲಿ
ಬಳೆಯ ಬಣ್ಣವು
ಕಳೆಯ ತಂದಿದೆ ಚೆಲುವಿಗೆ
ಮಕ್ಕಳ ನಗುವು
ಸಕ್ಕರೆ ಸಿಹಿಯು
ನಕ್ಕು ನನ್ನ ಸೆಳೆಯುವದು
ಅಕ್ಕರೆಯ ಮಗು
ಸಿಕ್ಕರೆ ನನಗೆ
ಸಕ್ಕರೆಯ ಮುತ್ತ ಕೊಡುವೆ.
✍ ಅಂಜಲಿ ತೊರವಿ