ಪ್ರತಿದಿನ ಕಳೆದ ನಿನ್ನೆಗಳಲ್ಲಿ ಜೀವಿಸಿದರೆ ಅದು ನಮ್ಮ ನಾಳೆಯ ಭವಿಷ್ಯ ನುಂಗಿ ಹಾಕುತ್ತದೆ

(ವ್ಯಕ್ತಿತ್ವ ವಿಕಸನ ಮಾಲೆ)

ತರಾತುರಿ ಪ್ರಪಂಚದಿಂದ ಅದರ ಆಗುಹೋಗುಗಳಿಂದ ಬೇಸತ್ತು , ಮನರಂಜನೆಗಳಿಂದ ದಣಿದು ಅದರಿಂದ ಬಹಳ ಕಾಲ ಅಗಲಿದಾಗ ಏಕಾಂಗಿತನ ಅದೆಷ್ಟು ಕಾಡುತ್ತದಲ್ಲವೇ ?

ಇಂಥ ಸನ್ನಿವೇಶಗಳಿಂದ ಬೇಸತ್ತು ನಾವು ಏಕಾಂಗಿಯಾಗಿದ್ದಾಗ ಇದರಿಂದ ಹೇಗೆ ಹೊರಗೆ ಬರಬೇಕಪ್ಪಾ ಅಂತ ಡಿಪ್ರೆಶನ್ ಎಂಬ ಕಾಯಿಲೆಗೆ ತುತ್ತಾಗುತ್ತವೆ.

ನಮ್ಮನ್ನು ನಾವು ಹೇಗೆ ಪ್ರೀತಿಸಿಕೊಳ್ಳಬೇಕು, ನಮ್ಮನ್ನು ನಾವು ಹೇಗೆ ಪ್ರೇರೇಸಿಕೊಳ್ಳಬೇಕು ಎಂಬುದನ್ನು ಬಿಟ್ಟು,

ಯಾವುದನ್ನು ಬಿಟ್ಟು ಒದ್ದಾಡುತ್ತಿರುತ್ತೇವೋ ಅದರ ಕಡೆಗೆ ಮನಸ್ಸು ಎಳೆಯುತ್ತದೆ.
ಹಾಗಾದರೆ ನಮ್ಮನ್ನು ನಾವು ಹೇಗೆ ಪ್ರೀತಿಸಿಕೊಳ್ಳಬೇಕು?
ನಮ್ಮ ಸೂಪ್ತ ಮನಸ್ಸಿನ ಹವ್ಯಾಸಗಳೇನು? ಎನ್ನುವುದು ಮೊದಲು ತಿಳಿದುಕೊಳ್ಳಬೇಕು.

ನಾವು ಜನಿಸಿರುವುದೇ ಒಂದು ಯಶಸ್ವಿ ಜೀವನ ನಡೆಸಲು

ಹಾಗದರೆ ನಮ್ಮ ಬದುಕನ್ನು ರೂಡಿಸಿಕೊಂಡಿರುವ ರೀತಿ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎನ್ನುವುದರ ಮೇಲೆ ನಿಂತಿರುತ್ತದೆ .

ಈ ಬಗ್ಗೆ ವಿಚಾರಿಸಿದರೆ ನಮ್ಮಲ್ಲಿ ನಾವು ಹುಡುಕುವ ಗುಣ ಆಕಸ್ಮಿಕವಾಗಿ ಬಂದದ್ದಲ್ಲ. ಸತತ ನಿಶ್ಚಿತ ದೈಹಿಕ ಮತ್ತು ಮಾನಸಿಕ ಸಂಕಲ್ಪದ ಫಲವಾಗಿರುತ್ತದೆ.

ನಾವು ಪಡುತ್ತಿರುವ ಕಷ್ಟ ಎದುರಾಗುವ ಸಮಸ್ಯೆ ಒಳ್ಳೆಯದಾಗಿರುತ್ತದೆಯೋ ಅಥವಾ ಕೆಟ್ಟದಾಗಿರುತ್ತದೆಯೋ ಆದರೆ, ನಮ್ಮ ವ್ಯಕ್ತಿತ್ವದ ವರ್ತನೆಯನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು.

ಹೇಡಿತನ ಮತ್ತು ಅ ಪ್ರಾಮಾಣಿಕತನ ಅಂತಹ ಕೆಟ್ಟ ಗುಣಗಳನ್ನು ಇಟ್ಟುಕೊಂಡು ಒಳ್ಳೆಯ ಕಾರ್ಯ ಮಾಡುವುದು ಕಷ್ಟವಾಗಿ ನಮ್ಮನ್ನು ನಾವು ಪ್ರೀತಿಸಿಕೊಳ್ಳಲು ಆಗದಿರುವಂತಹ ಸನ್ನಿವೇಶ ನಾವು ತಂದುಕೊಳ್ಳುತ್ತೇವೆ.

ಒಳ್ಳೆಯ ಮನೋಭಾವನೆ ಜೊತೆಗೆ ಒಳ್ಳೆಯದನ್ನೇ ಮಾಡಬೇಕೆಂಬ ಇಚ್ಛೆ ಹೊಂದಿದ್ದರೂ ಕೂಡ ಕೆಲವೊಮ್ಮೆ ತದ್ವಿರುದ್ಧವಾದಂತಹ ಸನ್ನಿವೇಶಗಳು ಎದುರಾಗುತ್ತದೆ.

ಒಮ್ಮೆ ಸುಳ್ಳು ಹೇಳಲು ನಮಗೆ ನಾವೇ ಅನುಮತಿ ನೀಡಿದರೆ, ಮೂರನೆಯ ಬಾರಿ ಸುಲಭವಾಗಿ ಸುಳ್ಳು ಹೇಳಿಬಿಡುತ್ತೇವೆ . ಕೊನೆಗೆ ಅದು ಹವ್ಯಾಸವಾಗಿ ನಮ್ಮ ಮೇಲೆ ನಮಗೆ ದ್ವೇಷ ಆಗಲು ಪ್ರಾರಂಭವಾಗುತ್ತದೆ.

ನಮ್ಮನ್ನು ನಾವು ಪ್ರೀತಿಸಬೇಕಾದರೆ ನಮ್ಮ ಅಂತರಾತ್ಮದ ಜೊತೆಗೆ ನಾವು ನಿಷ್ಠೆಯಿಂದ ಇರಬೇಕಾಗುತ್ತದೆ. ಮನುಷ್ಯರು ವಿಚಾರವಾದಿಗಳಾಗಿರುವುದಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಜೀವಿಗಳು ಪ್ರಮಾಣಿಕತೆ ಮತ್ತು ಸಮಗ್ರತೆ ನಮ್ಮ ನಂಬಿಕೆ ಯಾಗಿರಬೇಕು ನಮ್ಮ ಸುತ್ತಲಿನ ಪರಿಸರ ಹಾಗೂ ಮೈಗೂಡಿಸಿಕೊಂಡಿರುವ ಕ್ರಮಗಳ ಪಟ್ಟಿ ಹೇಗಿದೆ ಎನ್ನುವುದು ನೋಡಬೇಕು .

ಒಬ್ಬ ವ್ಯಕ್ತಿ ಹೆಚ್ಚಿನ ಸಂದರ್ಭಗಳಲ್ಲಿ ಪ್ರಮಾಣಿಕನಾಗಿದ್ದು ಮೊದಲ ಬಾರಿ ಸುಳ್ಳು ಹೇಳಿದರು ಕೂಡ ಅವನು ಸಿಕ್ಕಿ ಬೀಳುತ್ತಾನೆ. ಅದೇ ರೀತಿ ಒಬ್ಬ ವ್ಯಕ್ತಿ ಸದಾ ಸುಳ್ಳು ಹೇಳುವವನಾಗಿದ್ದರು ಒಮ್ಮೆ ನಿಜ ಹೇಳಿದರು ಕೂಡ ಸಿಕ್ಕಿ ಬೀಳುತ್ತಾನೆ.

ಹೀಗಾಗಿ ನಮ್ಮ ಯೋಚನಾ ವಿಧಾನ ಹವ್ಯಾಸ ಹೇಗಿದೆ ಎನ್ನುವುದರ ಮೇಲೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತಹ ಸನ್ನಿವೇಶಗಳು ಎದುರಾಗುತ್ತವೆ.

ನಾವು ಯಾವತ್ತಿಗೂ ಕೂಡ ಸಕರಾತ್ಮಕವಾಗಿ ಚಿಂತಿಸುವಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರ ಯೋಚನೆ ಲಹರಿ ಅವರ ಕಾರ್ಯ ವೈಖರಿ ನಿರ್ವಹಿಸುತ್ತದೆ.

ಹಾಗಾದರೆ ನಮ್ಮನ್ನು ನಾವು ಪ್ರೇರಿಸಿಕೊಳ್ಳುವುದಂದರೆ ಹೇಗೆ?

ಕೆಲಸದಲ್ಲಿ ಆಸಕ್ತಿ ಮತ್ತು ಪ್ರೇರಣೆ ಉಳಿಸಿಕೊಳ್ಳುವುದು ಹೇಗೆ ಎಂಬುದು ಬಹಳಷ್ಟು ಜನರ ಪ್ರಶ್ನೆ ಜೊತೆಗೆ ನನ್ನ ಗೊಂದಲ ಕೂಡ.

ನಾವು ಮಾಡುವ ಕೆಲಸದಲ್ಲಿ ದಿನೇ ದಿನೇ ಆಸಕ್ತಿ ಕುಸಿಯುತ್ತಿದೆ , ಕೆಲಸ ಕಾರ್ಯಗಳಲ್ಲಿ ಪ್ರೇರಣೆಯನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ . ಹಾಗಾದರೆ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವುದು ಹೇಗೆ?? ಎಂಬ ಪ್ರಶ್ನೆ ಸಹ ತಲೆಯಲ್ಲಿ ಸುಳಿಯುತ್ತಿದೆ.

ಹಾಗಾಗಿ ಮುಖ್ಯವಾಗಿ ನಮ್ಮನ್ನು ಪ್ರೇರಿಸಲು ದಿನದಿಂದ ದಿನಕ್ಕೆ ಹೆಚ್ಚು ಚೆನ್ನಾಗಿ ಕಾರ್ಯನಿರ್ವಹಿಸಲು ನಮ್ಮ ಸುತ್ತಮುತ್ತಲಿನ ಗೆಳೆಯರಿಂದ ಆತ್ಮೀಯರಿಂದ, ತಜ್ಞರಿಂದ ಉತ್ತಮ ಸಲಹೆಗಳನ್ನು ಪಡೆದುಕೊಂಡು, ಅವುಗಳನ್ನು ಅಳವಡಿಸಿಕೊಳ್ಳುವುದು ಯಾವುದೇ ವೆಚ್ಚ ಏನು ಇಲ್ಲವಲ್ಲ,

ಹಾಗಾದರೆ ಕಾರ್ಯನಿರ್ವಹಿಸುವ ರೀತಿ ಎಲ್ಲವನ್ನು ಬದಲಾಯಿಸಬಲ್ಲದು

ಮನಸ್ಸನ್ನು ಕೇಂದ್ರೀಕರಿಸಿದರೆ ಕೆಲಸದ ಮೇಲೆ ಪ್ರೇರಣೆಯನ್ನು ಒದಗಿಸಿ ಕೊಳ್ಳಬಹುದು ಹಾಗಾದರೆ

ಕೆಲಸದಲ್ಲಿ ಪ್ರೇರಣೆಯನ್ನು ನಿರಂತರವಾಗಿ ಕಾಪಾಡಿಟ್ಟುಕೊಳ್ಳಲು ಕೆಲವು ನನ್ನ ವೈಯಕ್ತಿಕ ಸಲಹೆಗಳು.

ಪ್ರತಿದಿನ ಕಳೆದ ನಿನ್ನೆಗಳಲ್ಲಿ ನಾವು ಜೀವಿಸಿದರೆ ಅದು ನಮ್ಮ ನಾಳೆಯ ಭವಿಷ್ಯವನ್ನು ನುಂಗಿ ಹಾಕುವುದರಲ್ಲಿ ಸಂಶಯವೇ ಇಲ್ಲ. ಪ್ರತಿ ಕ್ಷಣ ಸಮಸ್ಯೆಗಳ ಬಗೆಗೆ ಚಿಂತಿಸುವದಿದ್ದರೆ ಪರಿಹಾರ ದೊರೆಯುವುದು ದುರ್ಬಲವಾಗಿ ಬಿಡುತ್ತದೆ. ಸುಮ್ಮನೆ ನೆಪಕ್ಕೆ ಮಾಡುವ ಕೆಲಸ ಅಷ್ಟೊಂದು ಚೆನ್ನಾಗಿ ಫಲಿತಾಂಶ ನೀಡಲಾರದು ಹಾಗಂತ ಒತ್ತಾಯದಿಂದ ಮಾಡುವಂತಹ ಕೆಲಸ ಅಲ್ಪಾವಧಿ ಮಾತ್ರ .

ಮನುಷ್ಯನು ದಿನವೂ ತನ್ನ ಕೂದಲನ್ನು ಬಾಚಿಕೊಳ್ಳುತ್ತಾನೆ. ಮನಸ್ಸನ್ನು ಏಕೆ ಬಾಚಿಕೊಳ್ಳಲಾರ. ಎನ್ನುವುದು ನಾನು ಯಾವುದೋ ಪುಸ್ತಕದಲ್ಲಿ ಓದಿದ್ದು ಇದು ಎಷ್ಟೊಂದು ನಿಜವಲ್ಲವೇ?

ಸತ್ತು ಹೋದ ನೆನ್ನೆಗಳಲ್ಲಿ ಕಳೆದು ಹೋದರೆ ಅತ್ತಮೂಲ್ಯವಾದ ಇಂದು ಗೊತ್ತಿಲ್ಲದಂತೆ ಸರಿದು ಹೋಗುತ್ತದೆ. ಹಾಗಾಗಿ ಕೆಲಸಕ್ಕಾಗಿ ನಾವು ಕೆಲಸ ಮಾಡಬಾರದು ಹಾಗೆ ಮಾಡಿದರೆ ಕನಸುಗಳೇ ಗತಿ ಎನ್ನುವ ಸ್ಥಿತಿಯಾಗುತ್ತದೆ.

ಅನವಶ್ಯಕ ಕೆಲಸಗಳಿಗೆ ಇವತ್ತು ಕೊಟ್ಟು ಮಾಡುವುದು ನಿಜಕ್ಕೂ ನಿರರ್ಥಕವೆ ಬಿಡಿ . ಅದು ನಮ್ಮ ಶಕ್ತಿ ಹಾಳು ಮಾಡಿ ಬುದ್ದಿ ಭ್ರಷ್ಟ ಮಾಡುತ್ತದೆ . ಅಮೂಲ್ಯ ಸಮಯವನ್ನು ಕೈಗೆ ಸಿಗದಂತೆ ಹಾರಿ ಹೋಗುತ್ತದೆ .

ಅನಗತ್ಯ ಕೆಲಸಗಳು ನಮ್ಮ ನಿಜವಾದ ಕೆಲಸಗಳಿಗೆ ತಡೆಗೋಡೆಯಂತೆ ನಿಲ್ಲುತ್ತದೆ. ಹಾಗಾಗಿ ಕೆಲಸ ಕಾರ್ಯಗಳು ಗುರುತಿಸಿ ಅವುಗಳಿಂದ ದೂರವಿರುವುದು ಎಲ್ಲಕ್ಕಿಂತ ಉತ್ತಮ.

ಯಶಸ್ವಿ ವ್ಯಕ್ತಿಗಳು, ವಿಫಲರು, ಮಾಡಲು ಇಷ್ಟಪಡದಿದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರಂತೆ ಎಂದು ವಿಚಾರವಾದಿಗಳ ಬಾಯಿಂದ ಕೇಳಿದ್ದೇನೆ , ಓದಿದ್ದೇನೆ , ಅವರ ಇಷ್ಟವಿಲ್ಲದಿರುವಿಕೆ ಎಂಬುದು ಅವರ ಉದ್ದೇಶಕ್ಕೆ ಅಡಿಯಾಲ ಆಗಿರುತ್ತದೆಯೇ?

ಮುಂದುವರೆಯುವುದು…..

_ ಮೇನಕಾ ಪಾಟೀಲ್

Don`t copy text!