ಶ್ರೇಯಸ್ ಗೆ ದುಬೈ ಅಂತರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ಪದಕ
e-ಸುದ್ದಿ ಅಥಣಿ
ದುಬೈನಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ದಲ್ಲಿ ಕಟಾ ಮತ್ತು ಕುಮಿಟಿ ಎರಡು ವಿಭಾಗಗಳಲ್ಲಿ ಶ್ರೇಯಸ್ ವೀರಭದ್ರ ಯಾದವಾಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಟ್ರೋಪಿಯನ್ನು ಪಡೆದುಕೊಂಡಿದ್ದಾನೆ.
ಅಬುದಾಬಿಯ ಸಾಂಪ್ರದಾಯಿಕ ಮಾರ್ಷಲ್ ಆಟ್೯ ಅಡಿಯಲ್ಲಿ ನಡೆದ 1 ನೇ ಶೋರಿನ್ ಕಪ್ ಓಪನ್ ಕರಾಟೆ ಚಾಂಪಿಯನ್ ಶಿಪ್ ಭಾರತ, ಯುಕೆ, ಆಸ್ಟ್ರೇಲಿಯಾ ಚಿಲಿ ಜಪಾನ್ ಓಮನ್ ,ಯುಎಇ, ನೇಪಾಳದಂತಹ ದೇಶಗಳಿಂದ ನೂರಾರು ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಹನ್ಮಿ ಕೀಶುನ್ ಕಾಕಿನಹೊನ್ ಶೀಪ್ ನ ಮುಖ್ಯ ಅತಿಥಿಯಾಗಿದ್ದರು.
ಓಎಸ್ ಕೆ ಫೇಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಮುಖ್ಯ ತರಬೇತಿದಾರ ಶಿಹಾನ್ ಸುರೇಶ ಕೆನಿಚಿರಾ ನೇತೃತ್ವದ ೧೨ ಜನ ಆಟಗಾರ ತಂಡದೊಂದಿಗೆ ಶ್ರೇಯಸ್ ಯಾದವಾಡರು ಪ್ರತಿನಿಧಿಸಿದ್ದಾರೆ.
ಶ್ರೇಯಸ್ ಕಳೆದ ೮ ವರುಷಗಳಿಂದ ಶಿಹಾನ್ ಮತ್ತು ಸೇನ್ಪೈ ಕಿರಣ ಎಂ ಅವರ ಬಳಿ ತರಬೇತಿ ಪಡೆದಿದ್ದಾರೆ. ಶ್ರೇಯಸ್ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಏಳನೇ ತರಗತಿ ವಿದ್ಯಾರ್ಥಿ. ಶ್ರೇಯಸ್ ಇದೂವರೆಗೆ ೫ ರಾಷ್ಟ್ರ ಮಟ್ಟದ ಪದಕಗಳು, ೨ ಅಂತರರಾಷ್ಟ್ರೀಯ ಟ್ರೋಫಿಗಳು, ಒಂದು ಅಂತರಾಷ್ಟ್ರೀಯ ಪದಕ ಮತ್ತು ಈ ವರುಷ ಜಪಾನ್‌ನಲ್ಲಿ ನಡೆದ ” ಓಕಿನವಾ ಜೂನಿಯರ್ ವಿಶ್ವ ಚಾಂಪಿಯನ್ ನಲ್ಲಿ ” ಎರಡನೇ ಸುತ್ತಿನ ಯಶಸ್ಸನ್ನು ಗಳಿಸಿದ್ದಾನೆ.
ಶ್ರೇಯಸ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಕ್ರೀಡಾ ಸಚಿವ ಡಾ.ನಾರಾಯಣಗೌಡಾ , ಮಾಜಿ ಡಿಸಿಎಂ ಲಕ್ಮಣ ಸವದಿ, ಬಿಜಿಎಸ್ ಗ್ರೂಪ್ ಎಂಡಿ ಶ್ರೀ ಶ್ರೀ ಡಾ. ಪ್ರಸನ್ನನಾಥ ಸ್ವಾಮೀಜಿ, ಶೈಕ್ಷಣಿಕ ನಿರ್ದೇಶಕ ಡಾ. ಎಸ್ ಅಯ್ಯಪ್ಪನ್ ನಾಯರ್ ಮತ್ತು ಪ್ರಾಂಶುಪಾಲರಾದ ಶ್ರೀಮತಿ ಶ್ರೀಕಲಾ ಜಿ.ಕುಮಾರ್ ಅವರು ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದರು.
ಶ್ರೇಯಸ್ ಭಾರತಕ್ಕೆ ಆಗಮಿಸಿ ಬೆಂಗಳೂರಿನ ತನ್ನ ನಿವಾಸಕ್ಕೆ ಬರುತ್ತಿದ್ದಂತೆಯೆ ವಿವಾರ್ಥ ಮಗನ ಅಪಾರ್ಟಮೆಂಟನಲ್ಲಿ ಸಂಭ್ರಮದಿಂದ ಆರತಿ ಮಾಡಿ ಸಿಹಿ ತಿನಿಸಿ ಸ್ವಾಗತಿಸಲಾಯಿತು.