ಪ್ರವಾಸ ಕಥನ
ಎಲ್ಲೋರಾ ಗುಹೆಗಳು…..
ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ನಗರದಿಂದ 30km ದೂರದಲ್ಲಿದೆ. ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರಾ ಗುಹಾಂತರ ದೇವಾಲಯವನ್ನು 1983 ರಲ್ಲಿ ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೊ ಘೋಷಿಸಿತು.
ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪ ಶಾಸ್ತ್ರದ.. ಭಾರತೀಯ ಶೈಲಿಯ ದೋತ್ಯಕ ವಾಗಿರುವ ಎಲ್ಲೋರಾ ಗುಹೆಗಳು ಹಿಂದು. ಬೌದ್ಧ. ಜೈನ ದೇವಾಲಯವಾಗಿವೆ. ಧರ್ಮಶಾಲೆ ಹೊಂದಿದ ಈ ಗುಹೆಗಳನ್ನು 5ರಿಂದ 10ನೇ ಶತಮಾನದ ಮಧ್ಯೆ ನಿರ್ಮಿಸಲಾಯಿತು. ಒಟ್ಟು 12ಬೌದ್ಧ.17ಹಿಂದೂ.5ಜಿ ನಾಲಯ ಇವೆ.
ಎಲ್ಲೋರಾ ಗುಹೆಗಳನ್ನು ಸ್ಥಳೀಯವಾಗಿ “ವೆರುಲ್ ಲೆನಿ “ಎಂದು ಕರೆಯುವ ಪ್ರಾಚೀನ ಗುಹೆಗಳು.
ಗುಹೆಯ ಸಂಕಿರ್ಣವನ್ನು ಚರಣಾoದ್ರಿ ಬೆಟ್ಟಗಳ ಘನ ಬಂಡೆಗಳಿಂದ ಕತ್ತರಿಸಿದ್ದು 34 ಗುಹೆಗಳನ್ನು ಹೊಂದಿದೆ. ಮೂರು ವಿಭಿನ್ನ ಜೈನ. ಬೌದ್ಧ. ಹಿಂದೂ ಧರ್ಮಗಳನ್ನು ಧಾರ್ಮಿಕ ಸಹಿಷ್ಣುತೆಯ ಅಧ್ಭುತ ದೃಶ್ಯ ನಿರೂಪಣೆಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಎಲ್ಲೋರಾದ ಕೇಂದ್ರ ಆಕರ್ಷಣೆ ವಿಶ್ವಪ್ರಸಿದ್ಧ ಕೈಲಾಶನಾಥ ದೇವಾಲಯ. ಬ್ರಹತ್ ಬಂಡೆಯಿಂದ ಆಕಾರ ಪಡೆದ ಈ ದೇವಾಲಯ ಸಭಾಂಗಣ. ಗರ್ಭ ಗುಡಿ. ಗೋಪುರ ಒಳಗೊಂಡಿದ್ದು ದ್ರಾವಿಡ ಕಲೆಗೆ ಸಾಕ್ಷಿಯಾಗಿದೆ. ಇದನ್ನು ರಾಷ್ಟ್ರಕೂಟ ರಾಜಕೃಷ್ಣ ಪ್ರಾರಂಭಿಸಿದನೆಂದು ಹೇಳಲಾಗುತ್ತದೆ.
ಇದು ಶಿವನ ವಾಸಸ್ಥಾನ ಕೈಲಾಶಪರ್ವತವನ್ನು ಪ್ರತಿನಿಧಿಸುತ್ತದೆ. ಶಿವನಿಗೆ ಅರ್ಪಿತವಾದ ಕೇಂದ್ರ ದೇವಾಲಯ ಹಾಗೂ ನಂದಿ ಇದೆ. ದೇವಾಲಯದ ಹೋರಗೋಡೆಗೆ ಸೂಕ್ಷ್ಮ ರೂಪದಲ್ಲಿ ರಾಮಾಯಣ. ಮಹಾಭಾರತದ ಘಟನೆಗಳನ್ನು ಕೆತ್ತಿದ ಶಿಲ್ಪ ಕಲೆಗಳಿವೆ. ದೇವಾಲಯದ ಆವರಣದಲ್ಲಿ ಐದು ಬೆರ್ಪಟ್ಟ ದೇವಾಲಯಗಳಿವೆ. ಗಣೇಶ. ರುದ್ರ. ಗಂಗಾ. ಯಮುನಾ. ಸರಸ್ವತಿಗೆ ಅರ್ಪಿತವಾಗಿವೆ.
ಅಂಗಳದಲ್ಲಿ ಎರಡು ಧ್ವಜ ಸ್ಥoಭಗಳಿವೆ. ಈ ದೇವಾಲಯವನ್ನು 250.000 ಟನ ಬಂಡೆಯಿಂದ ಕೆತ್ತಿದ್ದು ಪೂರ್ಣಗೊಳ್ಳಲು ನೂರು ವರ್ಷ ತೆಗೆದುಕೊಂಡಿತು. ಏಕ ಶಿಲೆಯಲ್ಲಿ ಕೆತ್ತಿದ ಕೈಲಾಸ ದೇವಾಲಯ ಇಂದಿಗೂ ಆಕರ್ಷಣೆ ಉಳಿಸಿಕೊಂಡಿರುವದು ಅಚ್ಚರಿ. ಸೂಕ್ಷ್ಮ ಕೆತ್ತನೆ ಬೃಹತ್ ದೇವಾಲಯ ಮೈನವೀರೆಳಿ ಸುವಂತೆ ಮಾಡುತ್ತದೆ.
ಬ್ರಿಟಿಷ್ ಅಧಿಕಾರಿ ಜಾನ್ ಸ್ಮಿತ್ 1819ರಲ್ಲಿ ಹುಲಿಯನ್ನು ಬೇಟೆಯಾಡುವಾಗ ಆಕಸ್ಮಿತವಾಗಿ ಈ ಗುಹೆಗಳನ್ನು ಪತ್ತೆ ಹಚ್ಚಿದ್ದನು.
ಬೌದ್ಧ ಗುಹೆಗಳು ಪ್ರಾರ್ಥನಾ ಮಂದಿರ್. ವಿಶ್ರಾಂತಿಗ್ರಹ. ಅಡುಗೆ ಕೋಣೆ ಹಾಗೂ ಬಹುಮಹಡಿ ಕಟ್ಟಡಗಳೂ ಇವೆ.ಇಲ್ಲಿ ಬುದ್ಧನ ಮೂರ್ತಿ ಸುಂದರವಾಗಿದೆ. ಪ್ರಾರ್ಥನೆ ಮಾಡಿದರೆ ಇಕೊ ಆಗಿ ಕೇಳಿಸುತ್ತೆ
ಒಟ್ಟು 100ಗುಹೆಗಳಿವೆ. ಆದರೆ 34ಗುಹೆಗಳನ್ನು ನೋಡಲು ಮಾತ್ರ ಅನುಮತಿ ನೀಡಲಾಗಿದೆ
ಮಂಗಳವಾರ ರಜೆ ದಿನ. ಬೆಳಿಗ್ಗೆ 6ಗಂಟೆಯಿಂದಾ ಪ್ರವೇಶ ಹಾಗೂ ಟಿಕೆಟ್ ಕೌಂಟರ್ ತೆರೆಯಲಾಗುತ್ತೆ.
ಜೀವಮಾನದಲ್ಲಿ ಒಮ್ಮೆ ನೋಡಬೇಕಾದ ಅದ್ಭುತ… ಕೈಲಾಸನಾಥ ದೇವಾಲಯ.
✍️ಶ್ರೀಮತಿ. ವಿದ್ಯಾ. ಹುಂಡೇಕರ.