Statue of Unity…..
ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತಿ ಪಡೆದ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಮೂರ್ತಿ ಗುಜರಾತನ ಕೇವಾ ಡಿಯ ಪ್ರದೇಶದಲ್ಲಿದೆ. ಸುಮಾರು 182ಮೀಟರ್ ಎತ್ತರದ ಈ Statue of Unity ಮೂರ್ತಿ ಜಗತ್ತಿನ ಅತಿ ಎತ್ತರದ ಮೂರ್ತಿ ಎಂದು ಖ್ಯಾತಿ ಪಡೆದಿದೆ.
ಇಲ್ಲಿನ ಪರಿಸರ ಸ್ವಚ್ಯ ಸುಂದರ. ಎಲ್ಲೆಡೆ ಕರಾರುವಕ್ಕಾ ದ ವ್ಯವಸ್ಥೆ. ಮೊದಲೇ ಆನ್ಲೈನ್ ಟಿಕೆಟ್ ಕಾಯ್ದಿರಿಸಿದರೆ ಉತ್ತಮ. ಕ್ಯೂ ನಿಲ್ಲುವದು ತಪ್ಪಿ ವೇಳೆಯ ಸದುಪಯೋಗವಾಗುತ್ತೆ. ನಾವು ಹೋದಾಗ ಮಳೆಗಾಲ ಜನಸಂಣಿ ಕಮ್ಮಿ ಇತ್ತು. ರಜಾ ದಿನಗಳಲ್ಲಿ ತುಂಬಾ ಜನಸಂದಣಿ ಇರುತ್ತಂತೆ. ಪ್ರತಿ ಟಿಕೆಟ್ಗೆ ಪ್ಯಾಕೇಜ್.ವೇಳೆ ಬೇರೆ ಬೇರೆ ಇದೆ. ಯಾವುದು ಮೊದಲು ನೋಡಬೇಕು ಹಾಗೂ ನಿಮ್ಮಲ್ಲಿರುವ ವೇಳೆಗೆ ಅನುಗುಣವಾಗಿ ಟಿಕೆಟ್ ಖರೀದಿಸಿ.
ಕಾಕ್ಚಸ್ ಗಾರ್ಡನ್. ರೋಜ್ ಗಾರ್ಡನ್. ಜಂಗಲ ಸಫ್ಫಾರಿ. ಡ್ಯಾಮ್. ಲೇಸರ್ ಶೋ. ವಿಶ್ವವನ. ಚಿಟ್ಟೆಯ ಉದ್ಯಾನವನ. ರಿವರ್ ರಾಫ್ಟಿಂಗ್. ಎಕ್ತಾ ಕ್ರೂಜ್. ಎಕ್ತಾ ಮಾಲ್. ಹೀಗೆ ಅನೇಕ ಜಾಗಗಳು ಟಿಕೆಟ್ ಜೊತೆ ಬುಕ್ ಮಾಡಬೇಕು. ವಲ್ಲಭ ಭಾಯಿ ಮೂರ್ತಿ ನೋಡಲು ಕೂಡ 3 ಟಿಕೆಟ್ ದರಗಳಿವೆ. ಎಲ್ಲೆಡೆ ಹೋಗಲು ಉಚಿತ ಬಸ್ ವ್ಯವಸ್ಥೆ ಇದೆ. ಪಿಂಕ್ ಆಟೋ ಮಹಿಳೆಯರೇ ನಡೆಸುವ ಈ ಆಟೋಕೂಡ ಬಾಡಿಗೆಗೆ ಸಿಗುತ್ತವೆ. ಆಟೋ ತೆಗೆದುಕೊಂಡ್ರೆ ವೇಳೆಯ ಉಳಿತಾಯ.
ಟಿಕೆಟ್ ಪಡೆದು ಒಳಗೆ ಹೋದ ತಕ್ಷಣ… ವೀಲ್ ಚೇರ್ ವ್ಯವಸ್ಥೆ ಹಾಗೂ ಎಕ್ಸ್ಕಲೇಟರ್ ಇದೆ. ತುಂಬಾ ಸ್ಟ್ರಿಕ್ಟ್ ಆದ ಸೆಕ್ಯೂರಿಟಿ ಚೆಕಿಂಗ್ ಇದೆ. ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾಗುತ್ತೆ. ಒಳಗೆ ಹೋದಮೇಲೆ 2ಗಂಟೆ ವೇಳೆಯಾದ್ರೂ ಬೇಕು. ಎಲ್ಲೆಡೆ ಮಾಹಿತಿ ನೀಡಲಾಗುತ್ತೆ.
V. Vip ಟಿಕೆಟ್ಗೆ ಡೈರೆಕ್ಟ್ ಎಂಟ್ರಿ ಇದೆ. ಮೂರ್ತಿ ಒಳಗೆ ಹೋಗಲು ಲಿಫ್ಟ್ ಇದೆ. ಮೂರ್ತಿ ಒಳಗಡೆಯಿಂದ ಸ್ಟೀಲ್. ಹೊರಗಡೆ ಕಾoಕ್ರಿಟ್. ಹೊರಗೆ ಬ್ರಾಸ್ ನಿಂದ ಮಾಡಲ್ಪಟ್ಟಿದೆ. ತುಕ್ಕು ಹಿಡಿಯದ ರೀತಿ ಬ್ರೋoಜ್ ಲೇಪನ್ ಇದೆ. ಜೋರಾಗಿ ಬೀಸುವ ಗಾಳಿಯಿಂದಾ ತೊಂದ್ರೆ ಆಗದ ರೀತಿ ಕಟ್ಟಿದ್ದಾರೆ. ಭೂಮಿಯ ಕೆಳಗೆ 50ಮೀಟರ್ ಇದೆಯಂತೆ. ಭೂಕಂಪನದಿಂದ ಕೂಡ ಹಾನಿ ಸಂಭವಿಸದ ರೀತಿ ಕಟ್ಟಲ್ಪಟ್ಟಿದೆ. ಮೂರ್ತಿಯ ಮೇಲಿನ ಭಾಗ ಟೋಳ್ಳಾಗಿದೆ. ಸುತ್ತಲೂ ಸ್ಥಳೀಯ ಸ್ಯಾಂಡ್ ಸ್ಟೋನ್ ಹಾಗೂ ಬನ್ಸ್ವರ ಮಾರ್ಬಲ್ ಕಲ್ಲುಗಳನ್ನು ಉಪಯೋಗಿಸಿದ್ದಾರೆ. ಸುತ್ತ ಮುತ್ತಲಿನ ಆದಿವಾಸಿ ಜನರು ಹಾಗೂ ಹಳ್ಳಿ ಜನರಿಗೆ ತರಬೇತಿ ಕೊಟ್ಟು ಇಲ್ಲಿನ ಕೆಲಸಕ್ಕಾಗಿ ನಿಯೋಜಿಸಿದ್ದು ವಿಶೇಷ ಹಾಗೂ ಪ್ರಶoಸನೀಯ.
ಲಿಫ್ಟ್ ಹತ್ತಿ ಒಳಗೆ ಹೋದ್ರೆ ಮೂರ್ತಿಯ ಹೃದಯ ಭಾಗ ಮುಟ್ಟುತ್ತೇವೆ. ಅಲ್ಲಿಂದ ಸರ್ದಾರ ಸರೋವರ ಮೋಹಕವಾಗಿ. ಸುಂದರವಾಗಿ ಕಾಣಿಸುತ್ತದೆ. ಡ್ಯಾಮ್ ಕಟ್ಟಲು ಅಡಿಪಾಯ ಹಾಕಿದ್ದು ಪಟೇಲರು ಹಾಗಾಗಿ ಅವರ ಹೃದಯಾಸೆಯಂತೆ ನಾವು ಹೃದಯ ಭಾಗದಲ್ಲಿ ನಿಂತು ಸರೋವರ. ಡ್ಯಾಮ್ ನೋಡುತ್ತೇವೆ. ಮೂರ್ತಿ ಕೂಡ ಡ್ಯಾಮ್ ಗೆ ಎದುರಾಗಿ ಇದೆ.
ಈ ಭಾಗ ಮೂರು ರಾಜ್ಯದ ಗಡಿಯಲ್ಲಿದೆ. ಇಲ್ಲಿಂದ 6 ಕಿಮೀ ಮಹಾರಾಷ್ಟ್ರ.40 ಕಿ.ಮೀ ಮಧ್ಯ ಪ್ರದೇಶ. ಹಾಗೂ ಗುಜರಾತ. ಹಲವು ವಿಶಿಷ್ಟತೆ ಒಳಗೊಂಡ ಈ statue of Unity ಒಮ್ಮೆ ನೋಡಲೇ ಬೇಕಾದ ಸ್ಥಳ. ಮೂರ್ತಿ ಅಂತೂ ಅದ್ಭುತ… ಧೋತರದ ನೆರಿಗೆ. ಕಾಲಿಗೆ ಹಾಕಿದ ಚಪ್ಪಲಿ ಎಲ್ಲದರಲ್ಲಿಯೂ ಕರಾರುವಕ್ಕಾದ ಲೆಕ್ಕಾಚಾರ. ಮೂರ್ತಿ ಕೆಳಗೆ ನಿಂತರೆ ಒಂದು ಉಂಗುಷ್ಟಕ್ಕೆ ನಮ್ಮ ಎತ್ತರ. ಚಿಕ್ಕoದಿನಲ್ಲಿ ಓದಿದ ಲಿಲಿಪುಟ್ ಹಾಗೂ ಗಲಿವರ್ ಕಥೆ ನೆನಪಾಯಿತು.
ಮೂರ್ತಿ ಯ ಒಳಗೆ ಹೋದ ತಕ್ಷಣ ಒಂದು ಸರ್ದಾರ್ಮೂರ್ತಿ ಇದೆ.ಮ್ಯೂಸಿಯಂ ಹಾಗೂ ಮೂರ್ತಿ ರಚನೆ ಬಗ್ಗೆ ಚಿತ್ರ. ವಿಡಿಯೋ. ಇತಿಹಾಸ. ಇದಕ್ಕಾಗಿ ಶ್ರಮ ಪಟ್ಟವರ ಹೆಸರು ಎಲ್ಲದರ ಸವಿಸ್ತಾರ ಮಾಹಿತಿ ಇದೆ.
ಎಲ್ಲೆಡೆ ಶಿಸ್ತು. A . C. ಹಾಗೂ ಎಕ್ಸಕಲೇಟರ್ ಇರುವದರಿಂದ ದಣಿವು ಕಮ್ಮಿ. ಇಲ್ಲಿನವರಿಗೇ ಕೆಲಸ ಕೊಟ್ಟು. ಆದಿವಾಸಿ ಮಹಿಳೆಯರಿಗೆ ತರಬೇತಿ ಕೊಟ್ಟು… ಪಿಂಕ್ ಆಟೋಗೆ ಅವರನ್ನೇ ನೇಮಿಸಿ ಅವರ ಜೀವನಕ್ಕೆ ದಾರಿ ಮಾಡಿದ್ದು ವಿಶೇಷ. ಅವರಿಗಾಗಿ ಮನೆ ಕೂಡ ಕಟ್ಟಿ ಕೊಟ್ಟಿದ್ದಾರೆ. ಅವರನ್ನೆಲ್ಲ ಮಾತನಾಡಿಸಿದಾಗ ಅವರು ತಮ್ಮ್ ಜೀವನ ಇದರಿಂದ ಸುಗಮವಾಗಿದೆ ಎಂದು ಸಂತೃಪ್ತಿಯ ನಗೆ ಚೆಲ್ಲಿದರು.
ಇಂಥ ಅಚ್ಚುಕಟ್ಟಾದ ವ್ಯವಸ್ಥೆಗೆ ಕೈ ಜೋಡಿಸಿದ ಎಲ್ಲರಿಗೂ ನಮೋ ಎನ್ನೋಣವೇ.
✍️ಶ್ರೀಮತಿ. ವಿದ್ಯಾ. ಹುಂಡೇಕರ.