ನನ್ನವ್ವ.
ಚಿಪ್ಪಾಡಿ ಹತ್ತಿ ಕಟ್ಟಿಗೆಗಳ ಬಳಸುತ
ಒಲೆಯ ಊದಿದವಳು ನೀನು , ನಮ್ಮವ್ವ || 1 ||
ಸಿರಿವಂತರು ಕೊಟ್ಟ ಬದುಕಿನ ಜಿನಿಸುಗಳ
ಬಳಸುತ ನಮ್ಮೆಲ್ಲರನು , ಸಲಹಿದೆ ನಮ್ಮವ್ವ || 2 ||
ಕಡು ಬಡತನದ ಬೇಗೆಯಲಿ ಬೇಸರಿಸದೇ
ಪತಿಯೊಂದಿಗೆ ಸಂಸಾರ ಜೀಕಿಸಿದೆ ನಮ್ಮವ್ವ || 3 ||
ಪತಿಯಗಲಿ ಹೋದಾಗ , ಗತಿಯಿಲ್ಲದಿದ್ದಾಗ
ನಿನ್ನ ತಾಯಿಯ ಆಸರೆಯಲಿ, ಬದುಕಿಸಿದೆ ನಮ್ಮವ್ವ || 4 ||
ಮೇಣದ ಬತ್ತಿಯ ತರಹ ಸುಡುತಲಿ ಹೋದೆ
ಆದರೂ ಪುಟ ಕೊಟ್ಟೆ ನಮ್ಮ ಜೀವನಕೆ ನಮ್ಮವ್ವ || 5 ||
ಮರೆಯಲಾರದ ವಸ್ತು ನೀನಿಂದು ನಮ್ಮವ್ವ
ನಿನ್ನಾಸರೆಯ ಪಡೆದ ನಾವಿಂದು ಧನ್ಯ ನಮ್ಮವ್ವ || 6 ||
–ಕೃಷ್ಣ ಬೀಡಕರ.
ವಿಜಯಪುರ
ಮೋ. 9972087473