e-ಸುದ್ದಿ ಮಸ್ಕಿ
ಮಸ್ಕಿ ಹಳ್ಳಕ್ಕೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ ಅವರ ಪತ್ನಿ ನೇತ್ರಮ್ಮ ಸರ್ಕಾರದಿಂದ 5 ಲಕ್ಷ.ರೂ ಪರಿಹಾರ ಹಣದ ಚೆಕ್‍ನ್ನು ಎಸಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಶನಿವಾರ ವಿತರಿಸಿದರು.
ಚನ್ನಬಸವ ಮಡಿವಾಳ ಮನೆಗೆ ಭೇಟಿ ನೀಡಿದ ಎಸಿ ರಾಜಶೇಖರ ಸರ್ಕಾರದಿಂದ ಪರಿಹಾರ ಹಣದ ಚೆಕ್ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಟುಂಬದ ಒಬ್ಬರಿಗೆ ಸ್ಥಳಿಯವಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳು ಕುರಿತು ಚಿಂತನೆ ನಡೆಸಲಾಗುತ್ತದೆ ಎಂದರು.
ಕಳೇದ ಅ.11 ರಂದು ಮಸ್ಕಿ ಜಲಾಶಯದಿಂದ ಮಸ್ಕಿ ಹಳ್ಳಕ್ಕೆ ನೀರು ಬಿಡಲಾಗಿತ್ತು. ಬಹಿರ್ದೆಸೆಗೆಂದು ತೆರಳಿದ್ದ ಚನ್ನಬಸವ ಮಡಿವಾಳ ಹಳ್ಳದ ನೀರಿಗೆ ಕೊಚ್ಚಿಕೊಂಡ ಹೋದ ಘಟನೆ ಜರುಗಿತ್ತು.
ಒಂದು ತಿಂಗಳ ನಂತರ ಚನ್ನಬಸವನ ಶವ ಹಳ್ಳದ ಮುಳ್ಳುಕಂಟಿಯಲ್ಲಿ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ತಹಸೀಲ್ದಾರ ಬಲರಾಮ ಕಟ್ಟಿಮನಿ ಇದ್ದರು.