ಕಾಸ ಪಟಾರ. (Kaas plateau )

ಸರಣಿ ಪ್ರವಾಸ ಕಥನ ಮಾಲಿಕೆ

ಕಾಸ ಪಟಾರ. (Kaas plateau )

ಮಹಾರಾಷ್ಟ್ರದ ಸತಾರದಿಂದ ಕೇವಲ 25 km ದೂರದಲ್ಲಿದೆ. ಹಾಗಾಗಿ ತುಂಬಾ ಜನ ಸತಾರ ದಲ್ಲಿ ತಂಗುತ್ತಾರೆ.ಬೆಳಗಾವಿ ಯಿಂದಾ ಕಾಸ ಪಟಾರ 250km ದೂರದಲ್ಲಿದೆ.
ಸುಮಾರು 20ವರ್ಷದಿಂದ ಬೆಳಗಾವಿಯಲ್ಲಿದ್ದ ನನಗೇ ಈ ಹೂವಿನ ಬೆಟ್ಟದ ಮಾಹಿತಿ ಇರಲಿಲ್ಲ. ಬೆಂಗಳೂರಿನ ನನ್ನ ಚಿಕ್ಕಮ್ಮ ಫೋನ್ ಮಾಡಿ ತಿಳಿಸಿದಾಗಲೇ ಮಾಹಿತಿ ಕಲೆ ಹಾಕಿದೆ. ವರ್ಷದ ಎರಡು ತಿಂಗಳಲ್ಲಿ ಅಂದ್ರೆ ಸೆಪ್ಟೆಂಬರ ಹಾಗೂ ಅಕ್ಟೋಬರ ತಿಂಗಳಲ್ಲಿ ಮಾತ್ರ ಈ ದೃಶ್ಯ ಸವಿಯಲು ಸಾಧ್ಯ. ಅಧ್ಭುತ ಸೃಷ್ಟಿ. ಹಿತವಾದ ವಾತಾವರಣ.
ಸತಾರಾಕ್ಕೆ soldier city ಅಂತ ಕೂಡ ಕರಿಯುತ್ತಾರೆ. Saath -tara.7ಕಿಲ್ಲಾ ಇಲ್ಲಿದೆ. ಸತಾರದಲ್ಲಿ ಕಾಂತಿ ಪೆಢ ಬಹಳ ಪ್ರಸಿದ್ಧಿ. ಹೋಟೆಲ ಕೂಡ ಸಿಗುತ್ತೆ. ಕಾಸ ಪಟಾರಕ್ಕೆ ಬರುವವರು ಮೊದಲೇ online ಟಿಕೆಟ್ ಕಾಯ್ದಿರಿಸಬೇಕು.
ಸತಾರದಿಂದ ಬಮನೊಲಿ ಹಳ್ಳಿ. ಅಲ್ಲಿಯ ದೃಶ್ಯ ಮನಮೋಹಕವಾಗಿದೆ. ಇದಕ್ಕೆ ಮಹಾರಾಷ್ಟ್ರದ ಮಿನಿ ಕಾಶ್ಮೀರ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಶಿವ ಸಾಗರ ಲೇಕ ಇದೆ. ಬೋಟನಲ್ಲಿ ಕೂಡ ವಿಹರಿಸಬಹುದು.


ಕಾಸ ಪಟರ ಕೇವಲ 2ರಿಂದ 3ವಾರ ಮಾತ್ರ ನೋಡಲು ಸಿಗುವದು.ಜಗತ್ತಿನ ಅದ್ಭುತ. ಹಾಗಾಗಿ world heritage ಅಡಿ ಗುರುತಿಸಿಕೊಂಡಿದೆ. ಒಂದು ದಿನಕ್ಕೆ ಸಾವಿರ ಜನರಿಗೆ ಮಾತ್ರ ವೀಕ್ಷಿಸಲು ಅವಕಾಶ. ಹಾಗಾಗಿ ಟಿಕೆಟ ಕಾಯ್ದಿರಿಸಬೇಕು.ತುಂಬಾ ಚಳಿ ಕೂಡ ಇರುತ್ತೆ. ತುಂಬಾ ಮಳೆ ಆದ್ರೆ ಹೂವು ಅರಳುವದಿಲ್ಲ. ಪೂರ್ತಿ ಗುಡ್ಡಗಳು ಮನಮೋಹಕ ನೀಲಿ. ಗುಲಾಬಿ. ಬಿಳಿ. ಹಳದಿ ಹೂವುಗಳಿಂದ ತುಂಬಿರುತ್ತವೆ. ಒಳಗೆ ಓಡಾಡಲು ಜಾಗ ಮಾಡಿದ್ದಾರೆ ಅದರಲ್ಲೇ ಓಡಾಡಬೇಕು. ಹೂವುಗಳನ್ನು ಸಂರಕ್ಷಿಸೋದು ನಮ್ಮ ಜವಾಬ್ಧಾರಿ.ಕೀಟ ಭಕ್ಷಕ ಗಿಡಗಳು ಕೂಡ ಇವೆ.
ಕಾಸ ತನ್ನ ಅದ್ಭುತ ಜೀವ ವೈವಿದ್ಯೆತೆಗಾಗಿ ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂಬ ಟ್ಯಾಗ ನೀಡಿದೆ. ಸುಂದರವಾದ ಅರ್ಕಿಡ್ ಗಳಿಂದ ಮಾoಸಾಹಾರಿ ಡ್ರೋ ಸೆರಾ ಇಂಡಿಕಾಕೂಡ ನೋಡಬಹುದು. ಇಲ್ಲಿ ಹೂವುಗಳು ನೆಲದ ಉದ್ದಕ್ಕೂ ರತ್ನ ಗಂಬಳಿಯಂತೆ ಕೂಡಿರುತ್ತದೆ.
ಇಲ್ಲಿ ವಸತಿಗಾಗಿ ಹೆಚ್ಚಿನ ಆಯ್ಕೆ ಇಲ್ಲ. ಒಂದು ದಿನದ ವೀಕ್ಷಣೆ.ಇದು ಜ್ವಾಲಾಮುಖಿ ಬಂಡೆಗಳಿಂದ ಆದ ಪ್ರಸ್ಥಭೂಮಿ. ಇಲ್ಲಿನ ಹೂಗಳು ಕಾಡು ಹೂಗಳು. ಕಾಲೊಚಿತವಾಗಿ ಅರಳುವ ಹೂಗಳು.
ಸಸ್ಯ ಶಾಸ್ತ್ರೀಯ ಅಧ್ಯಯನಗಳು. ಸಂಶೋಧನಾ ಕಾರ್ಯಗಳಿಗಾಗಿ ವಿದ್ಯಾರ್ಥಿಗಳು ಅಭ್ಯಸಿಸಲು ಭೇಟಿ ನೀಡುತ್ತಾರೆ.
ಸುಮಾರು 850 ವೈವಿಧ್ಯ ಹೂಗಳು ನೋಡಲು ಸಿಗುತ್ತೆ. 4 ಮುಖ್ಯ ದ್ವಾರಗಳಿವೆ. ಸೈಕಲ ಪಡೆದು ಕೂಡ ಓಡಾಡಬಹುದು. ಪ್ರತಿ ಹೂವಿನ ಬಗ್ಗೆ ಮಾಹಿತಿ ಬೇಕಾದ್ರೆ ಗೈಡ ಇದ್ದರೆ ಒಳಿತು.
7ವರ್ಷಕ್ಕೊಮ್ಮೆ ಬಿಡುವ ಹೂವಿನ ಗಿಡ ಕೂಡ ಇಲ್ಲಿ ಕಾಣಬಹುದು. ಬೆಳಿಗ್ಗೆ ಅರಳಿ ಮಧ್ಯಾನ್ಹ ಬಾಡುವ ಹೂಗಳು. ಸಂಜೆ ಅರಳುವ ಹೂಗಳು ಹೀಗೆ ವೈವಿಧ್ಯತೆ ಕಾಣುತ್ತೇವೆ.ಜೀಪನಲ್ಲಿ ಕುಳಿತು ಕೂಡ ವೀಕ್ಷಿಸಬಹುದು. ಅದಕ್ಕಾಗಿ ಪ್ರತ್ಯೇಕ ಟಿಕೆಟ್ ಇದೆ. ಇವೆಲ್ಲ ಗಿಡಗಳು ತಾವೇ ಬೆಳೆದು ಮುರುಟಿ ಮತ್ತೆ ಮುಂದಿನ ವರ್ಷಕ್ಕೆ ಅರಳುವ ಹೂಗಳು. ಒಂದೊಂದು ಗುಡ್ಡ ಗುಲಾಬಿ. ನೀಲಿ. ಹಳದಿ ಹೂಗಳು ಅರಳಿ ಪೂರ್ತಿ ಗುಡ್ಡಗಳು ಬಣ್ಣ ಬಣ್ಣ ದಲ್ಲಿ ಗೋಚರಿಸುತ್ತವೆ. ಒಮ್ಮೆ ನೋಡಲೇ ಬೇಕಾದ ಪ್ರಕೃತಿಯ ಅದ್ಭುತ ಲೋಕ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

Don`t copy text!