ಪ್ರವಾಸ ಕಥನ
Unity.. E.. Rickshaw.
Statue of unity……
ನೊಡಲು ನಮ್ಮ ಕಾರ ಪಾರ್ಕ್ ಮಾಡಿ ಅಲ್ಲಿರುವ ಫ್ರೀ ಬಸ್ ಸರ್ವಿಸ್ ಅಥವಾ ಪಿಂಕ್ ರಿಕ್ಷಾ ಬಾಡಿಗೆ ಪಡೆಯಬೇಕಾಗುತ್ತೆ. ಇಲ್ಲಿನ ಪ್ರಮುಖ ಆಕರ್ಷಣೆ ಪಿಂಕ್ ರಿಕ್ಷಾ. ಪಿಂಕ್ ರಿಕ್ಷಾ ನಡೆಸುವವರು ಸುತ್ತ ಮುತ್ತಲಿನ ಆದಿವಾಸಿ ಮಹಿಳೆಯರು ಅದೂ ಪಿಂಕ್ ಯುನಿಫಾರ್ಮ್ ತೊಟ್ಟು… ಒಟ್ಟು 80ಪಿಂಕ್ ರಿಕ್ಷಾ ಇದೆಯಂತೆ. ಚಿಕ್ಕ 20ಪಿಂಕ್ ಆಟೋ ಕೂಡ ಇದೆಯಂತೆ. ಒಂದು ಆಟೋದಲ್ಲಿ ಮೂವರು ಸವಾರಿ ಮಾಡಬಹುದು.
ಒಂದು ದಿನಕ್ಕೆ 2000rs ಚಾರ್ಜ್ ಮಾಡುತ್ತಾರೆ. ಗಂಟೆಗಳ ಲೆಕ್ಕದಲ್ಲೂ ಬಾಡಿಗೆ ಪಡಿಯಬಹುದು.
ನಾವು ಬಾಡಿಗೆ ಪಡೆದ ರಿಕ್ಷಾದ ಒಡತಿ ಮೀನಾ…… ನಾನು ಕುತೂಹಲದಿಂದ ಅವಳನ್ನು ಮಾತಿಗೆಳೆದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಡ್ಯೂಟಿ. ನನ್ನ್ ಗಂಡ ಕುಡುಕ ಮೇಲಾಗಿ ತುಂಬಾ ಹೊಡೆಯುತ್ತಿದ್ದ… ಹಾಗಾಗಿ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಬoದೆ…. ಒಂದು ತಿಂಗಳು ಟ್ರೇನಿಂಗ ಕೊಟ್ಟರು… ದಿನಕ್ಕೆ ಸಾಯಂಕಾಲ ಮನೆಗೆ ಹೋಗುವ ಮೊದಲು 600rs ಆಫೀಸ್ಗೆ ಕೊಡಬೇಕು. ಶನಿವಾರ. ರವಿವಾರ 900rs ಕೊಡಬೇಕು ಎಂದಳು.ಇಷ್ಟರ ಮೇಲೆ ಅವರ ಏನೇ ದುಡಿದರೂ ಅದು ಅವರದ್ದು ಅವರಿಗಾಗಿ ಪ್ರತ್ಯೇಕ ಸಂಬಳ ಇಲ್ಲ..
ದುಡಿಮೆ ಆಗುತ್ತಾ ಅಂದಿದ್ದಕ್ಕೆ… ಹೌದು ಇಲ್ಲಿಗೆ ಬಂದ ಮೇಲೆ ಜೀವನ ಮಟ್ಟ ಸುಧಾರಿಸಿದೆ ಎಂದಳು. ಒಂದು ರಿಕ್ಷಾ ಚಾರ್ಜ್ ಆಗಲು ನಾಲ್ಕು ಗಂಟೆ ಬೇಕಂತೆ… ಇಡೀ ದಿನ ಆರಾಮವಾಗಿ ಚಲಿಸಬಹುದು. ಸಂಜೆ ಚಾರ್ಜ್ ಸೆಂಟರ್ ನಲ್ಲಿ ಬಿಡುತ್ತೇವೆ. ಬೆಳಿಗ್ಗೆ ಚಾರ್ಜ್ ಮಾಡಿ ಇಟ್ಟಿರುತ್ತಾರಂತೆ. ಒಂದು ರಿಕ್ಷಾ ದಲ್ಲಿ ಮೂರು ಜನ ಆರಾಮವಾಗಿ ಕುಳಿತುಕೊಳ್ಳಬಹುದು… ಅಲ್ಲಿನ ಮಾಹಿತಿ ಕೂಡ ಒದಗಿಸುತ್ತಾರೆ. ಎಲ್ಲರೂ ಚಿಕ್ಕ ವಯಸ್ಸಿನ ಮಹಿಳೆಯರು. ಮಹಿಳೆಯರಿಗಾಗಿ ಈ ಸೌಲಭ್ಯ ಕಲ್ಪಿಸಿದ ಅಲ್ಲಿನ ವ್ಯವಸ್ಥೆಗೆ ಮನ ಹಾರೈಸುವಂತಾಗಿತ್ತು. ಈ ಪಿಂಕ್ ರಿಕ್ಷಾ ಸವಾರಿ ಮರೆಯಲಾರದ ಅದ್ಭುತ ಅನುಭವ ನೀಡಿತು.
✍️ಶ್ರೀಮತಿ. ವಿದ್ಯಾ. ಹುಂಡೇಕರ.