ದುಃಖವಿಲ್ಲದ ಹಗರಣಿಗನ ತೆರನಂತೆ….
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಿಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!
ಬಸವಣ್ಣನವರ ಈ ವಚನದಲ್ಲಿ ಮನುಷ್ಯನ ಆಷಾಢಭೂತಿತನದ
ಕುರಿತು ಹೇಳಿದ್ದಾರೆ.
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ ಬಡವಾದನೆಂದು ಮರಗುವ
ಸತಿಯ ಸ್ನೇಹದಂತೆ…..
ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಅವನು ಸೇವಿಸುವ ಆಹಾರವನ್ನು ಅವಲಂಬಿಸಿದೆ.ಕುಟುಂಬದ ಸದಸ್ಯರ ಆರೋಗ್ಯ ಅಡಿಗೆ ಮನೆ ಮತ್ತು ಅಡಿಗೆ ಮಾಡಿ ಮಮತೆಯಿಂದ ಉಣಬಡಿಸುವ ಮಹಿಳೆಯನ್ನು ಅವಲಂಬಿಸಿದೆ.ಸಮಯಕ್ಕೆ ಸರಿಯಾಗಿ ಶುಚಿರುಚಿಯಾದ ಆಹಾರವನ್ನು ತಯಾರಿಸುವ ಜವಾಬ್ದಾರಿಯು ಮಹಿಳೆಗೆ ಇದೆ. ಅಂಥ ಜವಾಬ್ದಾರಿಯಿಂದ ನುಣುಚಿಕೊಂಡು,
ಹಸಿದ ಗಂಡನಿಗೆ ಊಟಕ್ಕೆ ಹಾಕಿ,ಸ್ನೇಹಿತೆಯಂತೆ ಅವನ ಬೇಕು ಬೇಡಗಳನ್ನು ಗಮನಿಸಿ ಅವನ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಹೆಂಡತಿಯ ಧರ್ಮ.
ಆದರೆ ಹೆಂಡತಿ ಸರಿಯಾದ ಸಮಯಕ್ಕೆ ಅಡಿಗೆ ಮಾಡಿ ಗಂಡನಿಗೆ ಊಣಬಡಿಸದೆ. ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು, ಗಂಡನನ್ನು ಉಪವಾಸ ಕೆಡವಿ ಅವನ ದೈಹಿಕ ಅಶಕ್ತತೆಗೆ “ಅಯ್ಯೋ ನನ್ನ ಗಂಡ ಸೊರಗಿದ್ದಾನೆ ” ಅಂತ ಒಣಕಾಳಜಿ ಮಾಡಿದರೆ, ಗಂಡನ ಹಸಿವುನಿಗಲಾರದು.
ಹಾಗೆಯೇ….
ಬಂದುದದನರಿಯಳು ಇದ್ದುದಸವಿಯಳು…
ನಿಜಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ, ಇದ್ದುದರಲ್ಲಿ ಸುಖವನ್ನು ಕಾಣದೆ
ಪರಿತಪಿಸುವ ಹೆಂಡತಿಯ ಮನಸ್ಥಿತಿಯು ಕುಟುಂಬ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ.
ದುಖಃವಿಲ್ಲದ ಹಗರಣಿಗನ ತೆರನಂತೆ…,
ಅಂದರೆ, ನಿಜವಾಗಿಯೂ ನೋವು, ಸಂಕಟ, ದುಃಖವಿಲ್ಲದೆ ….ತುಂಬಾ ದುಃಖ ವಾಗಿದೆ ಎಂದು ತೋರಿಸಿಕೋಳ್ಳುತ್ತಾ, ನಾಟಕವಾಡುತ್ತ, ಮೊಸಮಾಡುವರು
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!
ಕೂಡಲಸಂಗಮದೇವನ ಶರಣರಿಗೆ ತ್ರಿವಿಧ ವಂಚಿಸಿ
ತ್ರಿವಿಧ… ಗುರು,ಲಿಂಗ,ಜಂಗಮ
ಕಾಯಕ, ದಾಸೋಹ, ಪ್ರಸಾದ
ಇವುಗಳಲ್ಲಿ ನಂಬಿಕೆ ಇಲ್ಲದೆ ಆಚರಣೆಗೂ ತರದೆ ಮೊಸಮಾಡಿ
ದೇವರಿಗೆ ವಂಚನೆ ಮಾಡುವವರನ್ನೂ ಕಂಡರೆ
ತಮಗೆ ನಾಚಿಕೆಯಾಗುತ್ತದೆ ಎಂದು ಬಸವಣ್ಣ ನವರು ಹೇಳಿದ್ದಾರೆ.