ಅವಳು
ಅವಳು
ಮೌನಿಯಾಗಿದ್ದಾಳೆ
ಏನೂ ಗೊತ್ತಿಲ್ಲದ ಹಾಗೆ ||
ಅವಳು
ನಗುತ್ತಿದ್ದಾಳೆ
ದುಃಖವೇ ಇಲ್ಲದ ಹಾಗೆ ||
ಅವಳು
ಶ್ರಮಿಸುತ್ತಿದ್ದಾಳೆ
ದಣಿವೇ ಇಲ್ಲದ ಹಾಗೆ ||
ಅವಳು
ನೋವನೆದೆಗವಚಿಕೊಂಡಿದ್ದಾಳೆ
ಯಾರಿಗೂ ಕಾಣದ ಹಾಗೆ ||
ಅವಳು
ಸಾಗಿಸುತ್ತಿದ್ದಾಳೆ ಬದುಕ
ನಂಜುಂಡ ಶಿವನ ಹಾಗೆ ||
✍️ ಶ್ರೀಮತಿ ನೂರಜಾ