ಮೇ- 1 ಕಾರ್ಮಿಕರ ದಿನ…

ಮೇ- 1 ಕಾರ್ಮಿಕರ ದಿನ…

ಪ್ರತಿ ವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನ, ಲೇಬರ್ಸ ಡೇ ,ಮೇ ಡೇ ಎಂದು ಆಚರಿಸಲಾಗುತ್ತದೆ. ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಮೀಸಲಾಗಿ ಇಟ್ಟಿರುವಿರಿ.

ವಿವಿಧ ದೇಶಗಳಲ್ಲಿ ಅಧಿಕೃತ ಸಾರ್ವಜನಿಕ ರಜಾ ದಿನವನ್ನು ಮಾಡಿದ್ದಾರೆ. ಉದಾ: ಕ್ಯೂಬಾ , ಚೀನಾ , ಭಾರತ ಹಾಗೂ ಇನ್ನಿತರ ದೇಶಗಳು. ಆದರೆ ಭಾರತದಲ್ಲಿ 1923 ನೇ ಇಸ್ವಿಯ ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್  ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲು ಆರಂಭ ಆಯಿತು. ಆ ಸಮಯದಲ್ಲಿ ಇದನ್ನು ಮದ್ರಾಸ್ ಡೇ ಎಂದು ಕರೆಯುತ್ತಿದ್ದರು.

ಈ ದಿನದಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಹಾಗೂ ಕಾರ್ಮಿಕರಿಗೆ ಅಂದಿನ ದಿನ ರಜೆ ನೀಡಬೇಕೆಂದು ಸದನದಲ್ಲಿ ಮಸೂದೆಯನ್ನು ಮಂಡಿಸಲಾಯಿತು. ಅಂದಿನಿಂದ ಭಾರತದಲ್ಲಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆ*ಆಚರಿಸಲಾಗುತ್ತದೆ. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸಲ್ಪಡುತ್ತದೆ.

ವಿಶ್ವ ಕಾರ್ಮಿಕರ ದಿನದ ಇತಿಹಾಸ ಮತ್ತು ಮಹತ್ವ

ಅಮೇರಿಕಾದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರನ್ನು ವಿಪರೀತ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ವಿರೋಧಿಸಲು 1886 ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಬದಲಾಗಿ 8 ಗಂಟೆಗಳ ಕೆಲಸಕ್ಕಾಗಿ ಮುಷ್ಕರ ಘೋಷಿಸಿತು. ಸಹಸ್ರ ಸಂಖ್ಯೆಯಲ್ಲಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದರು. ಇದನ್ನು ನಿಯಂತ್ರಿಸಲು ಪೋಲಿಸರು ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಅನೇಕ ಕಾರ್ಮಿಕರು ಸಾವನ್ನಪ್ಪಿದರು , ಕೆಲವರು ಗಾಯಗೊಂಡರು. ಈ ಘಟನೆಯ ನಂತರ ಕಾರ್ಮಿಕರ ಹಕ್ಕುಗಳಿಗಾಗಿ ಸಾಗರೋತ್ತರ ಚಳುವಳಿ ಆರಂಭವಾಯಿತು. ಕೊನೆಗೆ 1916 ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 8 ಗಂಟೆಗಳ ಕೆಲಸದ ಅವಧಿಯನ್ನು ಘೋಷಿಸಿತು. ಕಾರ್ಮಿಕ ಹಕ್ಕುಗಳ ಹೋರಾಟಕ್ಕೆ ಮತ್ತು ಕಾರ್ಮಿಕರ ಪ್ರಭುತ್ವದ ನೆನಪಿಗೆ 1889 ರಲ್ಲಿ ಮೊದಲ ಬಾರಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಪ್ಯಾರಿಸಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಪ್ರಥಮ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಆಚರಣೆಯ ಉದ್ದೇಶ…

ವಿಶ್ವದಾದ್ಯಂತ ಕಾರ್ಮಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಒದಗಿಸಲು ನಡೆದ ಐತಿಹಾಸಿಕ ತ್ಯಾಗ ಮತ್ತು ಹೋರಾಟದ ಸ್ಮರಣಾರ್ಥ ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವನ್ನು ಕಾರ್ಮಿಕ ಸಮುದಾಯಗಳ ಕೊಡುಗೆಗೆ ಸ್ಪಂದಿಸುವ ಜೊತೆಗೆ , ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಲು , ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು , ಸಾಮಾಜಿಕ ರಕ್ಷಣೆಯನ್ನು ನೀಡಲು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದ ಆಚರಿಸಲಾಗುತ್ತದೆ.

ಆಧಾರ : ವಿವಿಧ ಮೂಲಗಳಿಂದ.

✍️…. *ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.

Don`t copy text!