ಸಾಹಿತಿ ಮಹಾಂತೇಶ ಮಸ್ಕಿ ಕನ್ನಡ ಜಾಗೃತಿ ಸಮಿತಿಗೆ ನೇಮಕ

 

e-ಸುದ್ದಿ, ಮಸ್ಕಿ

ರಾಯಚೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಮಸ್ಕಿ ಅವರನ್ನು ಸರ್ಕಾರ ಅಧಿಕಾರೇತರ ಸದಸ್ಯರನ್ನಾಗಿ ನೇಮಕಮಾಡಲಾಗಿದೆ.
ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆಮುರಳಿದರ ನೇಮಕಾತಿ ಆದೇಶ ಹೊರಡಿಸಿದ್ದು ಪ್ರಾಧಿಕಾರದ ವತಿಯಿಂದ ಕನ್ನಡ ಪರ ಕೆಲಸ ಕಾರ್ಯಗಳಲ್ಲಿ ತೊಡುಗುವಂತೆ ಸೂಚಿಸಿದ್ದಾರೆ.


ಮಹಾಂತೇಶ ಮಸ್ಕಿ ಅವರ ನೇಮಕವಾಗಿರುವದಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ಜೋಗಿನ್, ಉಪಾಧ್ಯಕ್ಷ ಶಿವಕುಮಾg.À ಎನ್, ಕಾಂiÀರ್iದರ್ಶಿ ವೀರೇಶ ಸೌದ್ರಿ, ಸಹಕಾರ್ಯದರ್ಶಿ ಮಲ್ಲಿಕಾರ್ಜುನ ಹಳ್ಳಿ, ಖಜಾಂಚಿ ಚಿದಾನಂದ ಎಚ್. ನಿರ್ದೆಶಕರಾದ ಪ್ರಕಾಶ ಮಸ್ಕಿ, ಪಾಶ್ರ್ವನಾಥ ಕೊಲ್ಹಾರ, ಮಂಜುನಾಥ ಬಿಜ್ಜಳ, ಭರತರಾಜ ದೇಶಮುಖ, ಸೋಮಶೇಖರ ಸಜ್ಜನ್ ಅಭಿನಂದಿಸಿದ್ದಾರೆ.

 

Don`t copy text!