ಭಾರವಾಗದ ವಿಕಲ ಚೇತನ

ಬದುಕು ಭಾರವಲ್ಲ ಸಂಚಿಕೆ 18

ಭಾರವಾಗದ ವಿಕಲ ಚೇತನ

ನಮ್ಮ ಟ್ರೇಜರಿ ಆಪೀಸ್ ನ ಎದುರಿಗೆ ಒಂದು ಹಣ್ಣಿನ ಜ್ಯೂಸ್ ಅಂಗಡಿ ಇತ್ತು .ಈಗಲೂ ಕೂಡ ಇದೆ .ಏಕ ಗ್ಲಾಸ್ ಪೈನಾಫಲ್ ಜ್ಯೂಸ್ ಬನಾಕೆ ದೆ ದೋ ಅಂದೆ .
ನಾನು ಹೋಗಿ ನಿಂತಾಗ ಮತ್ತಿಬ್ಬರು ಬಂದು ಎರಡು ಗ್ಲಾಸ್ ಮೋಸಂಬಿ ಜ್ಯೂಸ್ ಕೊಡು ಅಂದ್ರು . ನನಗೆ ಅಚ್ಚರಿಯಾಯಿತು. ಜೊತೆಗೆ ಆತನ ಕೈ ನೋಡಿ ತುಂಬಾ ಮರುಕ ಉಂಟಾಗಿ ಕೇಳಿದೆ ಕೈ ಗೆ ಏನಾಗಿತ್ತು ಅಂದೆ .ಜ್ಯೂಸ್ ಮಾಡು ಇದೇ ಮಿಶನ್ ದಲ್ಲಿ ನನ್ನ ಕೈ ಕಟ್ಟ ಆಗಿದೆ ಅಂದಾ .ಅಯ್ಯೋ ದೇವರೇ ಎರಡೂ ಕೈಗಳು ಚೆನ್ನಾಗಿ ಇದ್ದರೂ ಕೂಡ ಈ ತರ ಒಬ್ಬರೇ ಕೆಲಸ ಮಾಡಲಾರರು ನಿಮ್ಮನ್ನು ನೋಡಿ ಇತರರು ಕಲಿಯಬೇಕು ಅಂತಾ ಹೇಳಿ ಜ್ಯೂಸ್ ಕುಡಿದು ಬಂದೆ.
ಕಾಯಕ ಮಾಡಲು ಹಲವಾರು ಕೆಲಸಗಳು ಇದ್ದರೂ ಕೂಡ ನಮ್ಮ ಇಂದಿನ ಯುವಕರು ಮೈ ಮುರಿದು ಕೆಲಸ ಮಾಡದೇ ಸೊಂಬೇರಿಗಳಾಗಿ ಅಪ್ಪ ಅಮ್ಮ ನಿಗೂ ಸಹಾಯ ಮಾಡದಿರುವ ಇಂದಿನ ಯುವಕರು ತಿಳಿದುಕೊಳ್ಳಬೇಕಾಗಿದೆ.

ಬಹಳ ಹಿಂದಿನ ವರ್ಷ ನಾನು ಪ್ರತಿವರ್ಷ ಬೆಳಗಾವಿಗೆ ಮೌಲ್ಯಮಾಪನ ಕೆಲಸದ ನಿಮಿತ್ತ ಹೋಗುತ್ತಿದ್ದೆ . ಪ್ರತಿ ವರ್ಷ ನಾನು ನನ್ನ ಅಕ್ಕ ಮತ್ತು ಅಣ್ಣನ ಮನೆಯಿಂದ ಮೌಲ್ಯಮಾಪನ ಕೇಂದ್ರಕ್ಕೆ ನಾನು ಹೋಗುವ ರಿಕ್ಷಾದ ಹುಡುಗ ಅಲ್ಲೇ ಆಸ್ಪತ್ರೆ ಎದುರಿಗೆ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ ಇವಾಗ ಬೆಳಗಾವಿಯಲ್ಲಿ ಆತ ಇಲ್ಲವಂತೆ ಜ್ಯೂಸ್ ಅಂಗಡಿ ಆತ ಹೇಳಿದ. ಅವಳ ತಾಯಿ ಸುಮಾರು 40 ವರ್ಷ ಇರಬಹುದು.ಹಿಂದೆ ಕಿಲ್ಲಾಕೆ ಇಳಿದು ವಾಕಿಂಗ್ ಮಾಡುತ್ತ ಅಕ್ಕ ಳ ಮನೆ ಕಡೆಗೆ ಹೊರಟಿದ್ದೆ,

.ದಾರಿಯಲ್ಲಿ ಒಬ್ಬಳು ಹೆಂಗಸು ನನ್ನನ್ನು ಕೂಗಿದಳು ಕೈಯಲ್ಲಿ ಯಾವುದೋ ಒಂದು ಪತ್ರ ಇದ್ದಂಥಿತ್ತು. ನನಗೆ ತೋರಿಸಿದಳು ನಮ್ಮ ಹುಡುಗನ ಸರ್ಟಿಫಿಕೇಟ ನೋಡಿ ಹೇಳಿ ಎಂದಳು ನಾನು ನಿಮ್ಮ ಹುಡುಗ ನಾಲ್ಕು ವಿಷಯದಲ್ಲಿ ಫೇಲ್ ಆಗಿರುವನು ಎಂದೆ .ಹೇ ಅಲ್ಲಾ ಓ ಬಚ್ಚಾ ಅಂತಾ ಬಯ್ಯುತ್ತ ಬದುಕೆ ಭಾರವಾದ ಹಾಗೆ ಅಳುತ್ತ ಕುಳಿತುಕೊಂಡಳು.
ಆ ಹೆಂಗಸಿಗೆ ಬುದ್ಧಿ ಹೇಳಿದೆ ಓ ಬಚ್ಚಾ ದಿನಾಲು ಸಾಲಿಗೆ ಹೋಗ ಅಂದ್ರ ಕಬ್ಬಿನ ಅಂಗಡಿಗೆ ಮೀಷನ್ದಾಗ ಕಬ್ಬ ಹಾಕಾಕ ಹೋಗುತ್ತಾನ ರೀ ಎಂದಳು
ಸರಿ ಬಿಡವ್ವಾ. ಬಾಹ್ಯ ಪರೀಕ್ಷೆಯನ್ನು ಕಟ್ಟಿಸು ಅಂದು ಅಕ್ಕ ಳ ಮನೆಗೆ ಬಂದೆ .
ಮಾರನೇ ದಿನ ಮೌಲ್ಯಮಾಪನ ಕೇಂದ್ರ ಆರ್ ಪಿ ಡಿ ಹೋಗಿ ಬರುವಾಗ ದಿನಾಲು ಜ್ಯೂಸ್ ಅಂಗಡಿ ಮುಂದೆ ದಾಟಿ ಬರುತ್ತಿದ್ದೆ ಜ್ಯೂಸ್ ಅಂಗಡಿ ಹುಡುಗ ನಾನು ಕಲಿಸಿದ ವಿದ್ಯಾರ್ಥಿ ಮಾತನಾಡಿಸುತ್ತಿದ್ದ .ಫೇಲಾದ ಹುಡುಗ ಮತ್ತು ಜ್ಯೂಸ್ ಅಂಗಡಿ ಹುಡುಗ ಸ್ನೇಹಿತರೂ ಕೂಡ ಆಗಿದ್ದರು .ಎಲ್ಲಿ ನಿನ್ನ ಸ್ನೇಹಿತ ಎಂದೆ .
ಮಾಂಸಿ ಅವಂದಾ ಕೈ ಕಟ್ಟ ಆಯಿತಂತಾ ಕಬ್ಬಿನ ಅಂಗಡಿಗೆ ಹೋಗುತ್ತಿದ್ದ ಅಂತ .ಅವರ ಅಮ್ಮ ಹೇಳಿದಳು .ನಾನು ನೋಡಾಕ ಹೋಗಬೇಕಂದ್ರ ಗಿರೆಕಿ ಬಿಟ್ಟ ಹೋಗಾಕ ಆಗಿಲ್ಲ ಮಾಂಸಿ ಎಂದ .ದಾರಿಯಲ್ಲಿ ಬರುವಾಗ ಹುಡುಗನನ್ನು ಮಾತನಾಡಿಸಿದರಾಯಿತೆಂದು ಆಲೋಚಿಸಿ ಹೋಗುವಾಗ ಮನೆಯ ಮುಂದೆಯೇ ಹುಡುಗನ ತಾಯಿ ಕುಳಿತುಕೊಂಡಿದ್ದಳು.
ನನ್ನನ್ನು ಗುರುತಿಸಿ ಹೇ ಅಲ್ಲಾ ಮೇರಿ ಬಚ್ಚಾ ಅಂತಾ ಅಳಲಿಕ್ಕೆ ಪ್ರಾರಂಭಿಸಿದಳು. ದೈರ್ಯ ಹೇಳಿದೆ .ಮಗ ಮಗನಿಗೆ ಹೀಗೆ ಆಯಿತೆಂದು ಬದುಕೆ ಭಾರವಾದ ಹಾಗೆ ಕುಳಿತುಕೊಳ್ಳಬೇಡಿ. ಸಮಾಧಾನ ಹೇಳಿ ಊರಿಗೆ ಬಂದೆ .
ಮತ್ತೆ ಒಂದೆರಡು ವರ್ಷದ ಹಿಂದೆ
ಜ್ಯೂಸ್ ಅಂಗಡಿಯ ಅಂಗಡಿಯವನಿಗೆ ಕೇಳಿದೆ ನಿನ್ನ ಸ್ನೇಹಿತ ಎಲ್ಲಿ ಎಂದು ಮಾಂಸಿ ಆತ ಇವಾಗ ಬಹಳ ಚೆಲೋ ಆಗಿದಾನ ರೀ ಒಂದು ಕೈ ಕಟ್ಟ ಆದರೂ ವ್ಯಾಪಾರ ಮಾಡ್ತಾ ಇದ್ದಾನ ರೀ ಹೊಸ ಅಂಗಡಿ ಇಟ್ಟುಕೊಂಡು ಈಗ ಹೊಸ ಮನಿ ಕಟ್ಟಿ ದೊಡ್ಡ ಶ್ರೀಮಂತ ಆಗಿದಾನು ಮಾಂಸಿ ಎಂದ .
ದುಡಿಯುವ ಮನುಷ್ಯರನ್ನು ಕಂಡರೆ ಭಗವಂತ ಹೇಗಿದ್ದರೂ ಎಲ್ಲಿಯಾದರೂ ಇದ್ದರೂ ಸುಖವಾಗಿ ಇಡುವನು ಎಂದೆ.ನಿನ್ನ ಗೆಳೆಯನು ಕೈಯಲ್ಲಿದವ ಅಂತಾ ಕೆಲಸ ಮಾಡದೇ ಹಾಗೇ ಕುಳಿತುಕೊಳ್ಳಲಿಲ್ಲ.ಬದುಕು ಭಾರ ಮಾಡಿಕೊಳ್ಳಲಿಲ್ಲ ಭಾರವಾಗಲಿಲ್ಲ.ನಿನ್ನ ಸ್ನೇಹಿತನ ಹಾಗೆ ಎಲ್ಲರೂ ದುಡಿದರೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸ್ವಲ್ಪ ಕಡಿಮೆಯಾಗುವುದು ಅಲ್ಲವೇ ? ಎಂದೆ .
ಹುಡುಗನ ವ್ಯಾಪಾರವನ್ನು ಕಂಡು ಇತರರಿಗೆ ಸ್ವಲ್ಪ ಅಸೂಯೆ ಆದರೂ ಕೂಡಾ ಒಂದು ಕೈಯನ್ನು ಕಳೆದುಕೊಂಡು ಪರೀಕ್ಷೆಯಲ್ಲಿ ಫೇಲಾದರೂ ದುಡ್ಡು ಎಣಿಸಲಾರದೇ ಬಳೆದುಕೊಳ್ಳುವಂಥಹ ಸಂಪತ್ತನ್ನು ಗಳಿಸಿದನು .
ನನ್ನ ಕೈ ಕಟ್ಟ ಆಯಿತೆಂದು ಬದುಕಿಗೆ ವಿದಾಯ ಹೇಳದೇ ಭಾರವಾದ ಬದುಕನ್ನು ದುಡಿಮೆಯಿಂದ ಹಗುರ ಮಾಡಿಕೊಂಡ ಇಂಥಹ ವಿಕಲಚೇತನರನ್ನು ನಿಜಕ್ಕೂ ಮೆಚ್ಚಲೇ ಬೇಕು.
ನೊಂದು ಬೆಂದು ಬಳಲಿದ ವಯಸ್ಸಾದವರು, ಅನಾಥರು ಇಂಥಹ ವಿಕಲ ಚೇತನರು ನಡೆಸುವ ವ್ಯಾಪಾರದಲ್ಲಿ ನಾವುಗಳೆಲ್ಲ ಮಾಡಿದರೆ ಅವರಿಗೆ ಬದುಕು ಭಾರವಾಗಲಾರದು ಅಲ್ಲವೇ ?

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!