ಬದುಕು ಭಾರವಲ್ಲ ಸಂಚಿಕೆ 23.
ಸತ್ಯ ಸತ್ತು ಹೋಯಿತು ಸುಳ್ಳು ನಕ್ಕಿತು
ಜೀವನದಲ್ಲಿ ಏಳು ಬೀಳು, ಸುಖ ದುಃಖ ,ಸೋಲು ಗೆಲುವು ಏನೇ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸಬೇಕು .
ಬದುಕು ಭಾರವಾಗಿಲ್ಲ. ನಮ್ಮ ನಮ್ಮ ಮನಸ್ಸುಗಳು ಭಾರವಾಗಿವೆ ಸುಂದರ ಜೀವನಕ್ಕೆ ವಿದಾಯ ಹೇಳುವ ಮುರ್ಖರು ನಾವಾಗಬಾರದು. ನಮಗಾದ ಯಾವುದೇ ನೋವಿರಲಿ ನಮ್ಮ ಆತ್ಮೀಯರ ಹತ್ತಿರ ಹಂಚಿಕೊಳ್ಳಬೇಕು. ಮನಸ್ಸು ಹಗುರ ವಾಗುತ್ತದೆ .
ಬದುಕಿನಲ್ಲಿ ಯಾವ ನೋವೂ ಶಾಶ್ವತವಾಗಿ ಉಳಿಯುವುದಿಲ್ಲ.
ಯಾವ ಸುಖವೂ ಶಾಶ್ವತವಾಗಿ ಉಳಿಯುವುದಿಲ್ಲ. ಕ್ಷಣಿಕ ನೋವು ಕ್ಷಣಿಕ ಸುಖಕ್ಕೆ ಶಾಶ್ವತವಾಗಿ ಬದುಕಿಗೆಯೇ ಅಂತ್ಯ ಹೇಳುವುದು ಯಾವ ನ್ಯಾಯ. ನಂಬಿದ ಕುಟುಂಬ ಏನಾಗಬಾರದು .ಕಲಿಸಿದ ತಂದೆ ತಾಯಿಗಳಿಗೆ ಏನಾಗಬಾರದು .
ಸಮಾಜವನ್ನು ತಿದ್ದುವ ಜ್ಞಾನವಂತರೂ ,ವಿದ್ಯಾವಂತರೂ ವಿದ್ಯಾರ್ಥಿಗಳ ಮನವನ್ನು ತಿದ್ದುವಂತವರೇ ಬದುಕು ಭಾರ ಮಾಡಿಕೊಂಡರೆ ಹೇಗೆ ?
ಗಂಡಿರಲಿ ಹೆಣ್ಣಿರಲಿ ಯಾವುದೇ ಧರ್ಮ ವಿರಲಿ ಜನಾಂಗವಿರಲಿ ಎಲ್ಲರಿಗೂ ಇರುವುದು ಒಂದೇ ಜೀವ .ಒಮ್ಮೆ ಈ ಜೀವ ಹೋದ ಮೇಲೆ ಮರಳಿ ಬರಲು ಸಾಧ್ಯವೇ ? ಇಲ್ಲವೇ ಇಲ್ಲ ತಾನೇ ? ಮುದ್ದಾದ ಹೆಣ್ಣು ಮಗಳು ಶಿಕ್ಷಕಿ ,ಜಾಣೇ ಪ್ರವೀಣೆ ಯಾಕೆ ಬದುಕಿಗೆ ಅಂತ್ಯ ಹೇಳಿದಳು? ಇದು ಆಗಿದ್ದು 1999 ರಲ್ಲಿ ಅಂದಿನಿಂದ ಇಂದಿನವರೆಗೆ ನನ್ನ ಗೆಳತಿಯನ್ನು ಮರೆತಿಲ್ಲ ನಾನು .
ಹೀಗೆ ಮಾಡಬಾರದಿತ್ತು ನೀನು ಅನು .ಸತ್ತು ಹೋಗಿ ಏನು ಸಾಧಿಸಿದೆ ನೀನು .ನೀನು ಕೊಟ್ಟು ಹೋದ ತಂದೆ ತಾಯಿಗೆ ಸ್ನೇಹಿತರಿಗೆ ಬರೀ ನೋವು ಕೊಟ್ಟೆ ಅಣ್ಣ ಅಕ್ಕ ತಮ್ಮ ನಿಗೆ ಏನು ಕೊಟ್ಟೆ ಬರೀ ದುಃಖ ಕೊಟ್ಟೆ . ಏಕೆ ? ಬದುಕು ಭಾರವಾಗಿತ್ತೆ ನಿನಗೆ ? ಏಕೆ ಕೊರಳ ಕುಣಿಕೆಗೆ ಕೊರಳ ಕೊಟ್ಟಿ ಗೆಳತೀ
ಯಾವ ಕಾರಣ? ಯಾವ ತಪ್ಪು ? ನೀ ಮಾಡಿದೆ ನನಗೆ ಕಾಡುವ ಚಿಂತೆ ಏಕೆ ಬದುಕು ಭಾರವಾಯಿತು.?ನಿನಗೆ
ಯಾವ ಕೆಟ್ಟ ಮನಸ್ಸು ನಿನ್ನನ್ನು ಸಾವಿನ ದವಡೆಗೆ ಧೂಡಿತು?ಯಾಕೆ ವಿಚಾರಿಸಲಿಲ್ಲ?ಸತ್ಯ ಸತ್ತು ಹೋಯಿತೇ ನಿನ್ನ ಜೊತೆಗೆ ? ನಗುವ ಸುಳ್ಳಿಗೆ ಯಾವ ಶಿಕ್ಷೆ ?
ಇಂಥಹ ನೂರೆಂಟು ಪ್ರಶ್ನೆಗಳಿಗೆ ಉತ್ತರ ಯಾವುದು ?
ಸಮಾಜದಲ್ಲಿ ,ಅನೇಕ ಕುಟುಂಬಗಳಲ್ಲಿ ನಾವು ನೀವುಗಳೆಲ್ಲ ಓದುತ್ತೇವೆ ಹಾಗೆ ಅಯಿತು ಹೀಗೆ ಆಯಿತೆಂದು .ಬದುಕಿಗೆ ಅಂತ್ಯ ಹೇಳುವಂತೆ ಮಾಡುವ ಕಠುಕರಿಗೆ ಯಾರು ಶಿಕ್ಷೆ ಕೊಡಬೇಕು .
ಅದೆಷ್ಟೋ ಮನೆಗಳಲ್ಲಿ ನೊಂದ ಮಹಿಳೆಯರು ಇರುವರು ತಮ್ಮ ನೋವುಗಳನ್ನು ತಮ್ಮ ಸಂಕಟಗಳನ್ನು ತಮ್ಮ ದುಃಖವನ್ನು
ಹೇಳಲು ಹಿಂದೇಟು ಹಾಕುವ
ಹೆಣ್ಣುಮಕ್ಕಳು ಇರುವರು.
ಕಾನೂನಿನ ಮೂಲಕ ಅನೇಕ ಪರಿಹಾರೋಪಾಯಗಳನ್ನು
ಕಂಡುಕೊಂಡು ದೈರ್ಯ ವಾಗಿ ಹೆಜ್ಜೆ ಹಾಕಬೇಕಷ್ಟೇ.
ನಾನು ಒಂದು ಪತ್ರಿಕೆ ಓದುತ್ತಿದ್ದೆ ಇನ್ನೂ ನಾನು ಆ ಪೇಪರವನ್ನು ಕಟ್ಟು ಮಾಡಿ ಕೊಂಡು ಇಟ್ಟಿರುವೆ .
ಮಧ್ಯ ಪ್ರದೇಶದ ಒಂದು ಹಳ್ಳಿ ದೀಪಾ ಅಂತೆ .ಆಕೆಯ ಗಂಡನಿಗೆ ತನ್ನ ದೇಹವನ್ನು ಬಲಿಷ್ಠ ಮಾಡಿಕೊಳ್ಳುವ ಹುಚ್ಚು ಅದಕ್ಕಾಗಿ ಆತ ದಿನಾಲೂ ರಾತ್ರಿ ಹೆಂಡತಿಯ ರಕ್ತವನ್ನು ಒಂದು ಸಿರೇಂಜಿನಿಂದ ತೆಗೆದು ಕುಡಿಯುತ್ತಿದ್ದನಂತೆ . ಆ ನೀನು ಯಾರಿಗೂ ಹೇಳಬೇಡ ಎಂದು ಅಂಜಿಕೆ ಹಾಕಿದನಂತೆ .
ಕೊನೆಗೆ ಎಲ್ಲ ನೋವನ್ನು ಸಹಿಸಿಕೊಂಡ ಹುಡುಗಿ ಆಸ್ಪತ್ರೆಗೆ ಹೋದಾಗ ನೀನು ತಾಯಿಯಾಗುವೆ ನಿನಗೆ ತುಂಬಾ ರಕ್ತ ಕಡಿಮೆ ಇದೆ ಮಗು ಬದುಕುವುದು ಸ್ವಲ್ಪ ಕಷ್ಟ ಎಂದು ಹೇಳಿದಾಗ ವೈದ್ಯರ ಹತ್ತಿರ ತನ್ನ ನೋವು ತೋಡಿಕೊಂಡಾಗ ಆಮೇಲೆ ಸತ್ಯ ತಿಳಿದು ಸಮಸ್ಯೆಗೆ ಪರಿಹಾರ ಸೂಚಿಸಿದರಂತೆ.
ನೋಡಿ ಸಮಾಜದಲ್ಲಿ ಎಂಥ ಎಂಥ ಜನರ ಮದ್ಯ ಈ ಹೆಣ್ಣು ಬದುಕ ಬೇಕಾಗಿದೆ .
ಆ ವ್ಯಕ್ತಿ ನಿಜವಾಗಿ ರಕ್ತ ಕುಡಿದರೆ. ಮಾನಸಿಕವಾಗಿ ಕಿರುಕುಳ ಕೊಟ್ಟು ರಕ್ತ ಹೀರುವ ಅದೆಷ್ಟೋ ಮಹಾಪುರುಷರು ಈ ಸಮಾದಲ್ಲಿ ಕುಟುಂಬದಲ್ಲಿ ಇದ್ದಾರೋ ?ಅದೇಷ್ಟೋ ಹೆಣ್ಣು ಮಕ್ಕಳು ತಮ್ಮ ನೋವನ್ನು ಸಹಿಸಿಕೊಂಡು ಇದ್ದಾರೋ ?.
ನಾನು ಕಲಿಸಿದ ವಿದ್ಯಾರ್ಥಿನಿ ಜಾಣೆ ಮದುವೆಯಾಗಿ ಒಂದು ವರ್ಷದ ಮಗು ಬಿಟ್ಟು ಜೀವನಕ್ಕೇ ಅಂತ್ಯ ಹೇಳಿದ ಘಟಣೆ .
ಮತ್ತೊಬ್ಬಳು ನಮ್ಮ ತವರು ನೆಲದ ಹುಡುಗಿ ನೇಣಿಗೆ ಶರಣು
ಯಾಕೆ ತಮ್ಮ ಬದುಕಿಗೆ ಅಂತ್ಯ ಹೇಳುವ ಇಂಥಹ ನೂರೆಂಟು ಜನರ ತಿಳುವಳಿಕೆ ಮಣ್ಣಲ್ಲಿ ಮಣ್ಣಾಗಿ ಹೋಯಿತು ಅಲ್ಲವೇ ?
ಸತ್ಯವನ್ನು ಮರೆಮಾಚಿ ಜೀವಿಸುವ ಮಹಾಶಯರು ತಿಳಿದುಕೊಳ್ಳಬೇಕಾಗಿದೆ .
ಮಹಿಳೆಯರ ಮೇಲಿನ ದೌರ್ಜನ್ಯ ಇದು ನಿತ್ಯ ನಿರಂತರವಾಗದಂತೆ ನೋಡುವ ಜವಾಬ್ದಾರಿಯುತ ಪ್ರಜ್ಞಾವಂತರ ಆದ್ಯ ಕರ್ತವ್ಯ ಆಗಬೇಕು .
ಎಲ್ಲಿ ನೊಂದು ಬೆಂದು ಬಳಲುತ್ತಿದೆಯೋ ಆ ಜೀವಕ್ಕೆ ನೆರಳಾಗಿ .ನಿಲ್ಲಿ ನಿಮ್ಮ ನಿಮ್ಮ ಮನೆಯಲ್ಲಿರುವ ಸಹೋದರಿಯರಂತೆ, ಮಗಳಂತೆ ತಾಯಂತೆ ,ಉತ್ತಮ ಸ್ನೇಹಿತೆಯಂತೆ ಕಂಡಾಗ ಬದುಕು ಭಾರವಾಗಲಾರದು ಅಲ್ಲವೇ ?
–ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್