ಬತ್ತುತ್ತಿವೆ ಜಲದ ಸೆಲೆಗಳು
,,ನಾಗರಿತೆಗಳ ಆವಿಷ್ಕಾರ ಆಗಿದ್ದು ನದಿಗಳ ತೀರದಲ್ಲಿ ಯಾಕೆಂದರೆ ಜೀವನಕ್ಕೆ ನೀರು ಅತೀ ಮುಖ್ಯ.
ಮಳೆಯಿಂದಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತಿದ್ದ ಕಾಲ ಹಿಂದೆ ಇತ್ತು,ಈಗ ಮಾನವನ ದುರಾಸೆಯಿಂದ,ನಗರಗಳ ಬೆಳವಣಿಗೆಯಿಂದ,ಹೆಚ್ಚಿದ ಜನಸಂಖ್ಯೆಯಿಂದ,ರಸ್ತೆಗಳ ಅಗಲೀಕರಣದಿಂದ, ಮರಗಳ ಮಾರಣ ಹೋಮವಾಗಿ ಮಳೆ ಮಾಯವಾಗುತ್ತಾ ಸಾಗಿದ್ದು ಕಾಲ ಕಾಲಕ್ಕೆ ಮಳೆ ಬರುತ್ತಿಲ್ಲ ಇದರಿಂದ ನೀರಿನ ಮೂಲವಾದ ಹಳ್ಳಗಳು ಬತ್ತಿಹೋದ ಕುರುಹುಗಳಾಗಿವೆ,ಹಳ್ಳಗಳಲ್ಲಿ ನೀರು ಹೋದ ಮೇಲೂ ಅನೇಕ ತಿಂಗಳುಗಳವರೆಗೆ ಒರತೆಗಳಲ್ಲಿ ನೀರು ತುಂಬುವುದನ್ನು ನಾವು ಕಂಡಿದ್ದೇವೆ,ಆದರೆ ಈಗಿನ ಪೀಳಿಗೆಗಾಗಿ ಒರತೆಗಳನ್ನು ಕೃತಕವಾಗಿ ಸೃಷ್ಟಿಸಿ ತೋರಿಸಬೇಕಾಗಿದೆ.
ಇನ್ನು ಬಾವಿಗಳು ಮುಚ್ಚಿ ಹೋಗಿವೆ ಗ್ರಾಮದ ಜನ ತಮ್ಮ ಕಷ್ಟ ಸುಖಗಳನ್ನು ಬಾವಿ ನೀರು ಸೇದುತ್ತಾ ಮಾತನಾಡಿ ಅನುಭವಿಸುತ್ತಿದ್ದ ಕಾಲ ಮರೆಯಾಯಿತು.ಕೆರೆಗಳೂ ಒಣಗಿ ಹೋಗಿವೆ.ಬೆಂಗಳೂರು ಒಂದರಲ್ಲಿಯೇ ಎರಡು ಸಾವಿರ ಕೆರೆಗಳು ಮುಚ್ಚಿಹೋಗಿವೆ ಎಂಬ ಅಂದಾಜು ಇದೆ.ಕೆರೆಗಳು ಬತ್ತಿ ಹೋದಲ್ಲಿ ಹಳ್ಳ ತೊರೆ ಎಲ್ಲಿ ಉಳಿದಾವು ಮತ್ತು ಉಳಿದಿವೆ?
ಇವ್ಯಾವು ಇಲ್ಲ ಎಂದಾದಲ್ಲಿ ನದಿಗಳು ಉಳಿಯಬಹುದೇ?ನದಿಗಳಿಲ್ಲದ ಮನುಜನ ಬದುಕು ನಿರೀಕ್ಷಿಸಲು ಸಾಧ್ಯವೇ?ಕಷ್ಟ ಕಷ್ಟ ಈಗ ಲೀಟರ್ ನೀರಿಗೆ ರೂಪಾಯಿ ೨೦.೦೦ ಕೊಟ್ಟು ಕುಡಿಯುತ್ತಿಲ್ಲವೆ?
ನದಿಗಳೇ ಇಲ್ಲವೆಂದರೆ ಕೋಟಿ ಜೀವರಾಶಿಗಳಿಗೆ ಆಗರವಾದ ಸಮುದ್ರಗಳು ಬತ್ತಿಹೋಗುವುದರಲ್ಲಿ ಸಂಶಯವಿಲ್ಲ,ಸಮುದ್ರಗಳು ಇಲ್ಲವೆಂದಾದಲ್ಲಿ ಮಹಾ ಸಾಗರಗಳು ಇರಬಹುದೇ?ಇದ್ದರೂ ಜಲ ಸಂಗ್ರಹ ಎಲ್ಲಿಂದ? ಹೀಗಾದಲ್ಲಿ ಮಾನವನ ಕುಲ ವಿನಾಶ ಖಂಡಿತ.
ನಿಸರ್ಗ ನಮ್ಮ ಉಸಿರು, ಬದುಕು,ಅದು ಉಳಿಯಲು ನಾವು ನೀವು ಗಿಡ ನೆಟ್ಟರೆ ಸಾಲದು ಮರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು.ಜವಾಬ್ದಾರಿ ಅರಿಯದೇ ಹೋದರೆ ಮುಂದೆ ಆಮ್ಲಜನಕವನ್ನೂ ಖರೀದಿ ಮಾಡಿ ವಿಲ ವಿಲ ಒದ್ದಾಡುತ್ತಾ ಗದ್ದ ಊರಿ ಸಾಯಬೇಕಾಗುತ್ತದೆ.
–ಶಂಕರ್ ಜಿ ಬೆಟಗೇರಿ.