ನಾಳೆ ಸಾರಿಗೆಯ’ ಶಕ್ತಿ ಯೋಜನೆಗೆ’ ಚಾಲನೆ ನೀಡಲಿರುವ ಶಾಸಕ ವಿಜಯಾನಂದ ಕಾಶಪ್ಪನವರ್…

e-ಸುದ್ದಿ ವರದಿ;ಇಳಕಲ್

ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹಾಗೂ ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಿಸಿದ್ದ ಮೊದಲನೇಯ ಗ್ಯಾರಂಟಿ ಯೋಜನೆಯಾದ ಮಹಿಳೆಯರ ಉಚಿತ ಪ್ರಯಾಣದ ಸಾರಿಗೆ ಶಕ್ತಿ ಯೋಜನೆಗೆ ನಾಳೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಅದರಂತೆ ರಾಜ್ಯದ್ಯಾಂತ ನಾಳೆ ಚಾಲನೆ ಸಿಗಲಿದೆ.

ಹಾಗೆಯೇ ಇಳಕಲ್ ನಗರದ ಬಸ್ ಘಟಕದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಘಟಕದ ವ್ಯವಸ್ಥಾಪಕರಾದ ಸೊನ್ನದವರು ತಿಳಿಸಿದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!