ಶೈಕ್ಷಣಿಕ ಕ್ರಾಂತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಶಾಸಕ ವಿಜಯಾನಂದ ಕಾಶಪ್ಪನವರ್…
e-ಸುದ್ದಿ ಇಳಕಲ್
ಇಳಕಲ್ ಅಂಜುಮಾನ್ ಏ ಇಸ್ಲಾ ಸಂಸ್ಥೆಯ ವತಿಯಿಂದ ತಾಲೂಕಿನಾದ್ಯಂತ ಶೈಕ್ಷಣಿಕ ಕ್ರಾಂತಿ ಅಭಿಯಾನ ಅಂಜುಮಾನ್ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಶೈಕ್ಷಣಿಕ ಕ್ರಾಂತಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅದ್ಯಕ್ಷತೆ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ವೆಂಕಟೇಶ ಸಾಕಾ, ಶಾಂತಕುಮಾರ ಸುರಪುರ, ಶರಣಪ್ಪ ಆಮದಿಹಾಳ ,ಕ್ಷೇತ್ರ ಶಿಕ್ಷಣಾಧಿಕಾರಿ ವೇಂಕಟೇಶ ಕೊಂಕಲ್ , ಶಿಕ್ಷಣ ಸಂಯೋಜಕರಾದ ಈಶ್ವರ ಅಂಗಡಿ ಹಾಗೂ ಅಂಜುಮಾನ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮುಖಂಡರರುಗಳು ,ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ