ಹ್ಯಾಪಿ ಡಾಕ್ಟರ್ಸ್ ಡೇ
ಇವತ್ತು ವೈದ್ಯರ ದಿನ ಅಂತೆ..
ವೈದ್ಯರು ರೋಗಿಗಳಿಗೆ ಜೀವದಾನ ಮಾಡಿ, ದೇವರೇ ಅನ್ನಿಸಿಕೊಳ್ತಾರೆ
ಕೆಲವೊಮ್ಮೆ ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ಡಾಕ್ಟರ್, ಸರಿಯಾದ ಉಪಚಾರ ಮಾಡಿ, ರೋಗಿಗಳಿಗೆ ಸಾಕ್ಷಾತ್ ದೇವರ ಹಾಗೇನೇ ಕಾಣಿಸ್ತಾರೆ
ವೈದ್ಯರು daye, ಸಹಾನುಭೂತಿ ಉಳ್ಳವರಾಗಿದ್ರೆ ಬಹಳ ಒಳ್ಳೇದು.. ಅವರ ಮಾತುಗಳೇ ಕೆಲವೊಂದು ಬಾರಿ ರೋಗಿಗೆ ಸಮಾಧಾನ ತಂದು ರೋಗ ಆರಾಮ ಆಗುವಂತೆ ಮಾಡುತ್ತವೆ.
ನಾನು ಪದೇ ಪದೇ ನನ್ನ ಜೀವನದಲ್ಲಿ ಭೇಟಿಯಾದ ಒಬ್ಬ ಡಾಕ್ಟರ್ ನ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅವರ ಹೆಸರು ಬೇಡ, ನನಗಿರುವ ತೊಂದ್ರೆಗೆ MBBS ಓದಿದ ಪ್ರತಿಷ್ಠಿತ ಡಾಕ್ಟರ್ ಕಡಿಮೆ ಮಾಡದ್ದನ್ನು ಕೇವಲ ಸಣ್ಣ ಮಾತ್ರೆಯಿಂದ ಕಡಿಮೆ ಮಾಡಿದರು..
ಅದು ಹೇಗೇ ಅಂದ್ರೆ, ನಂಗೆ ಯಾವುದೋ ಕಾರಣದಿಂದ ದದ್ದುಗಳು ಆಗುತ್ತಿತ್ತು, ಅದು ಎಷ್ಟ್ ಜನ ಡಾಕ್ಟರ್ಗೆ ತೋರಿಸಿ ಮಾತ್ರೆ ತಗೊಂಡ್ರೂ ಕಡಿಮೆ ಆಗಲಿಲ್ಲ.. ನಂಗೂ ಬೇಸರವಾಗಿತ್ತು,,
ಅಕಸ್ಮಾತ್ ಒಮ್ಮೆ ಒಬ್ಬ ಆಯುರ್ವೇದ ಡಾಕ್ಟರ್ ನ ಭೇಟಿ ಮಾಡಿದೆ. ಅವರು ಕೊಟ್ಟ ಒಂದೇ ಒಂದು ಮಾತ್ರೆಯಿಂದ ಪೂರ್ತಿಯಾಗಿ ಗುಣ ಆಯಿತು, ಮತ್ತೆ ರಿಪೀಟ್ ಆಗಿ ಬಂದಿಲ್ಲ..
ಈ ತರಹದ ಉಪಚಾರ ಮಾಡಿದ್ರೆ, ರೋಗಿ ಕೊನೆಯವರೆಗೂ ಅವರನ್ನು ಮರೆಯೋದಿಲ್ಲ,,,
ಹೀಗೇ ಡಾಕ್ಟರ್ ಇದ್ದರೆ ಡಾಕ್ಟರ್ ಮೇಲೆ ನಂಬಿಕೆ ಇಮ್ಮಡಿಯಾಗುತ್ತೆ, ಬೇರೆಯವರಿಗೂ ಅವರ ಹೆಸರು suggest ಮಾಡಲು ಮನಸು ಬರುತ್ತೆ..
ಮುದ್ದೇಬಿಹಾಳದ ಪದಕಿ ಡಾಕ್ಟರ್ ಕೂಡ, ಬಡವರ ಭಾಗ್ಯವಾಗಿದ್ದರು, ನಯಾ ಪೈಸೆಗೂ ಅಸೆ ಪಡದೇ, ಬಡವರ ಬಂಧುವಾಗಿ ಜೀವಿಸಿದ್ದರು ಅಂದ್ರೂ ಉತ್ಪ್ರೇಕ್ಷೆ ಯಾಗಲಾರದು.. ಬರೆದು ಕೊಡುವ ಮಾತ್ರೆಗಳೂ ಕೂಡ ಕಡಿಮೆ ಕ್ರಯಕ್ಕೆ ಸಿಗುವಂಥದ್ದು..
🌷🌷🌷🌷🌷
ನನ್ನ ಅನುಭವಕ್ಕೆ ಬಂದ ಇನ್ನೊಂದು ಘಟನೆ.. ನಾವು ಟ್ರಾನ್ಸಫರ್ ಆಗಿ ಆ ಪಟ್ಟಣಕ್ಕೆ ಹೋಗಿದ್ದೆವು, ಪಟ್ಟಣ ಇದ್ದರೂ, ಹಳ್ಳಿಯಂತೆ ಇತ್ತು ಆ ಊರು,, ಅಲ್ಲಿದ್ದಾಗ ನನಗೆ ಸ್ವಲ್ಪ ಆರಾಮ ಇಲ್ಲದಂತೆ ಆಯಿತು.. ನಾನು ಅಲ್ಲಿ ಒಂದು ಗವರ್ನಮೆಂಟ್ ಆಯುರ್ವೇದ ಆಸ್ಪತ್ರೆ ನೋಡಿದ್ದೇ, ನನಗೆ ಮೊದಲಿಂದಲೂ ಆಯುರ್ವೇದ ಔಷದಿ ಮೇಲೇ ನಂಬಿಕೆ ಹೆಚ್ಚು.
ಅಥಣಿಯಲ್ಲಿ ನಾವಿದ್ದಾಗ, ಆಯುರ್ವೇದ ಆಸ್ಪತ್ರೆ ಯವರು ಕೊಟ್ಟ ಪುಡಿ ಔಷಧಿಯಿಂದ ಹೊಟ್ಟೆನೋವು ಗುಣವಾಗಿತ್ತು.. ಮತ್ತೆ ರಿಪೀಟ್ ಆಗಿಲ್ಲ, ಅದೇ ಆಯುರ್ ಔಷಧಿಯ ವಿಶೇಷತೆ..
ನಾನು ಆ ಹಳ್ಳಿಯಲ್ಲಿರುವ ಆಯುರ್ ಡಾಕ್ಟರ್ನ ಭೇಟಿಯಾದೆ..ಕೇವಲ ನಾಡಿ ಹಿಡಿದು ಅವರು ಹೇಳಿದರು.. ನಿಮಗೆ ಹಿಮೋಗ್ಲೋಬಿನ್ ಕಮ್ಮಿ ಇದೆ ಅದರಿಂದ ಅಶಕ್ತತೆ ಇದೆ.. ಅದಕ್ಕೆ ಔಷಧಿ ತಗೊಳ್ಳಿ ಮತ್ತು ಮುಂದಿನ ಜೀವನದ ಬಗ್ಗೆ ಜಾಸ್ತಿ ಯೋಚನೆ ಮಾಡಬೇಡಿ ಅಂತ.. ನಿಮಗೆ ಶುಗರ್ ಕಾಯಿಲೆ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದರು. ಅದೇ ಮೊದಲು ನಾನು ಅವರನ್ನು ಭೇಟಿ ಮಾಡಿದ್ದು.
ಆದ್ದರಿಂದ ಅವರ ಮಾತು ನಂಬದೇ MBBS ಡಾಕ್ಟರ್ ಹತ್ರ ಹೋದೆ. ಅವರು.. ಬ್ಲಡ್ ಚೆಕ್ ಮಾಡ್ಸಿ ಅಂತ ಹೇಳಿದ್ರು.. ಶುಗರ್ ಇದೆಯೇ ನೋಡಬೇಕು ಎಂದರು.. ಸರಿ blood check, ಮತ್ತು ಇನ್ನೂ ಏನೇನೋ check ಆಗಿ ರಿಪೋರ್ಟ್ ತಗೊಂಡು ಹೋದ್ರೆ, ಆಯುರ್ ಡಾಕ್ಟರ್ ಹೇಳಿದ ಹಾಗೇ ಇವರೂ, ಹಿಮೋಗ್ಲೋಬಿನ್ ಕಮ್ಮಿ ಇದೆ, iron ಮಾತ್ರೆ ತಗೊಳ್ಳಿ, ಟಾನಿಕ್ ತಗೊಳ್ಳಿ, ತರಕಾರಿ, ಹಣ್ಣು ಜಾಸ್ತಿ ಉಪಯೋಗಿಸಲು ಹೇಳಿದ್ರು..
ಇಲ್ಲಿ ನಂಗೆ ಆಶ್ಚರ್ಯ ಆಗಿದ್ದು, ಕೇವಲ ನಾಡಿ ಮಿಡಿತ ದಿಂದ ಇಂಥದ್ದೇ ಪ್ರಾಬ್ಲಮ್ ಅಂತ ಆಯುರ್ ಡಾಕ್ಟರ್ ಹೇಳಿದ್ದು, ಸೇತಸ್ಕೋಪ್ ಕೂಡ ಹಿಡಿಯದೇ, ಹೇಳಿದ್ದು,, ಆ ಬಳಿಕ ಯಾವುದೇ ತೊಂದ್ರೆ ಆದ್ರೂ, ಆಯುರ್ ಡಾಕ್ಟರ್ ಹತ್ರನೇ ಹೋಗೋಕ್ ಶುರು ಮಾಡಿದೆ.. ವಿಥೌಟ್ ಎನಿ ಕಾಸ್ಟ್, ಮಾತ್ರೆ ತಗೊಂಡು ಆರಾಮ ಆಗ್ತಿತ್ತು.. ಸರ್ಕಾರಿ ಆಸ್ಪತ್ರೆ ಇರೋದು ನಮ್ಮ ಅನುಕೂಲಕ್ಕೆ ತಾನೇ? ಯಾಕೆ ಹೋಗಬಾರದು?ನಮ್ಮ ನೆರೆಯ ಅನೇಕರು ಅದೇ ಆಸ್ಪತ್ರೆಗೆ ಬರೋಕೆ ಶುರು ಮಾಡಿದ್ರು. ವಾಸಿನು ಆಗ್ತಿತ್ತು
🌷🌷🌷🌷
ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಸಾಕಷ್ಟು ದುಡ್ಡಿದ್ರೆ ಮಾತ್ರ ಆಸ್ಪತ್ರೆಗೆ ಹೋಗ್ಬೇಕು ಅನ್ನುವಂತಾಗಿದೆ,, ಸಣ್ಣ ನೆಗಡಿ ಕೆಮ್ಮಿಗೂ ವೈರಲ್ ಇನ್ಫೆಕ್ಷನ್, ಮತ್ತೆ blood checkup, ಮತ್ತೆ ನೂರಾರು check up ಹೇಳಿ ರೋಗ ಗುಣವಾಗುವದಕ್ಕೂ ಮೊದಲೇ ರೋಗಿ ಎದೆಯೊಡೆದು ಸಾಯೋ ಹಾಗೇ ಮಾಡ್ತಾರೆ,..
ದುಡ್ಡು ಭರ್ತಿ ಮಾಡಿದ ನಂತರವಷ್ಟೇ ರೋಗಿನ ತಿರುಗಿ ನೋಡೋದು,,,, ಡಾಕ್ಟರ್ಸ್ಗೆ ಒಂದು ಮನವಿ, ದಯವಿಟ್ಟು ಮಾನವೀಯತೆ ಮರೆಯಬೇಡಿ, ನೀವು ಸಾಕಷ್ಟು ದುಡ್ಡು ಸುರಿದು ಕಲಿತಿರುತ್ತೀರಿ, ಅದನ್ನು ಬೇಕಾಬಿಟ್ಟಿ ಲಂಚ ತಿಂದು ದುಡ್ಡು ಮಾಡಿರೋರ ಹತ್ರ, ಹೆಚ್ಚು ಬಿಲ್ ಮಾಡಿ ತಗೊಳ್ಳಿ, ಬಡವರ ಬಗ್ಗೆ ಕರುಣೆ ಇರಲಿ,,,
ಅನಗತ್ಯ check up ಮಾಡೋದು ನಿಲ್ಲಿಸಿ, ನಿಮ್ checkup ನಿಂದಲೇ ರೋಗ ತಿಳಿಯೋ ತಾಕತ್ತು ನಿಮಗಿರುತ್ತೆ,, ದಯವಿಟ್ಟು ಅದನ್ನು ಉಪಯೋಗಿಸಿ..ಬಡವರ, ನೊಂದವರ ಕಣ್ಣೀರು ಒರೆಸಿ,
HAppY DOCTORs’ DAY
✍️ರೇಖಾ, ಮುತಾಲಿಕ್