ಇಳಕಲ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ ಹಿರಿಯ ಪತ್ರಕರ್ತರು…
e-ಸುದ್ದಿ ಇಳಕಲ್
ಇಳಕಲ್ ನಗರದಲ್ಲಿ 24/7 ಕುಡಿಯುವ ನೀರು ಆಗಿಂದಾಗೆ ನೀರಿನ ಸರಬರಾಜಿನಲ್ಲಿ ವ್ಯಥೆಯವಾಗುತ್ತಿದೆ. ಕುಡಿಯುವ ನೀರು ಹಗಲಿನಲ್ಲಿ ಬರುವುದಿಲ್ಲ, ರಾತ್ರಿ 12 ಒಂದು ಗಂಟೆಗೆ ಬರುತ್ತವೆ, ಆಗ ಜನರು ಎದ್ದು ನೀರು ತರಬೇಕಾದ ಸ್ಥಿತಿ ಬಂದಿದೆ.
ಪದೇ ಪದೇ ನೀರಿನಲ್ಲಿ ವ್ಯತಯವಾಗುವುದಕ್ಕೆ ಕಾರಣವಾದರೂ ಏನು, ಸಿಬ್ಬಂದಿಗಳ ಕೊರತೆಯು ಅಥವಾ ಮೇಲಾಧಿಕಾರಿಗಳ ಬೇಜವಾಬ್ದಾರಿಯೋ, ಹಿರಿಯ ಪತ್ರಕರ್ತರಾದ ಸಿಸಿ ಚಂದ್ರಪಟ್ಟಣ ಬಿ ಬಾಬು, ಸುಲೇಮಾನ್ ಚೋಪದಾರ್, ಮಹಾಂತೇಶ್ ಗೋರಜನಾಳ, ಜಾಕಿರ್ ಹುಸೇನ್ ತಾಳಿಕೋಟಿ
ಇಲ್ಕಲ್ ನಗರದಲ್ಲಿ ಆಗುತ್ತಿರುವ ನೀರಿನ ಸಮಸ್ಯೆ ಬಗ್ಗೆ ಪೌರಾಯುಕ್ತರಿಗೆ ಮನವರಿಕೆ ಮಾಡಿದರು.
ಅಲ್ಲದೆ ಈ ರೀತಿ ಕುಡಿಯುವ ನೀರಿನ ವಿಷಯದಲ್ಲಿ ಸಮಸ್ಯೆ ಆಗಬಾರದೆಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಗುರಮ್, ಪೌರಾಯುಕ್ತ ರಾಜು ಬಣಕಾರ್ ವರದಿಗಾರರಾದ ನಬಿ ಹುಣಚಗಿ, ಚನ್ನು ಗೋನಾಳ ಮಠ ಉಪಸ್ಥಿತರಿದ್ದರು,
*ವರದಿಗಾರರು: ಶರಣಗೌಡ ಕಂದಕೂರ* .