ಅನಾಥಾಶ್ರಮದ ಹಿರಿಯರು ಹಾಗೂ ಕಿವುಡ ಮೂಕ ಮಕ್ಕಳ ಶಾಲೆಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಗೆಳೆಯರು..
e-ಸುದ್ದಿ ವರದಿ;ಇಳಕಲ್
ಇಳಕಲ್ ನಗರದಲ್ಲಿ ತಮ್ಮದೇ ಆದ ವಿಶಿಷ್ಟ ಕಾರ್ಯಗಳ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಯುವಕರಾದ ರಾಘವೇಂದ್ರ ಧಾರವಾಡ, ಯಮನೂರ್ ಗುಡಿ ಇಂದಿನ ಇವರಿಬ್ಬರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.
ನಗರದ ಅಮ್ಮ ಸೇವಾ ಸಂಸ್ಥೆಯಲ್ಲಿ ಹಿರಿಯರಿಗೆ ಉಪಹಾರ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಅಲ್ಲದೆ ನಗರದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ನುಗಳನ್ನು ನೀಡುವ ಮೂಲಕ, ಆ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರ ಗೆಳೆಯರ ಬಳಗ ಸದಸ್ಯರು ಪಾಲ್ಗೊಂಡು ಇಬ್ಬರಿಗೂ ಹುಟ್ಟು ಹಬ್ಬದ ಶುಭಾಶಯಗಳು ಕೋರಿ ಶುಭ ಹಾರೈಸಿದರು.
*ವರದಿಗಾರರು: ಶರಣಗೌಡ ಕಂದಕೂರ*