ಇಂಗಳಗಿ ಸರ್ಕಾರಿ ಪ್ರೌಢಶಾಲೆಗೆ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಾಯನಗೌಡ ಗೌಡರ ಆಯ್ಕೆ…
e-ಸುದ್ದಿ ವರದಿ:ಇಳಕಲ್
ಇಳಕಲ್ ತಾಲೂಕಿನ ಇಂಗಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನೂತನವಾಗಿ ಶಾಲಾ ಅಭಿವೃದ್ಧಿ ಹಾಗೂ ಮೇಲು ಉಸ್ತುವಾರಿ ಸಮಿತಿಯ ಗೌರವ ಅಧ್ಯಕ್ಷರಾಗಿ
ಶಾಸಕ ವಿಜಯಾನಂದ ಕಾಶಪ್ಪನವರ್, ಅಧ್ಯಕ್ಷರಾಗಿ ರಾಯನಗೌಡ ಗೌಡರ ಆಯ್ಕೆಯಾಗಿದ್ದಾರೆ, ಅಲ್ಲದೆ ಉಪಾಧ್ಯಕ್ಷರು, ಸದಸ್ಯರಾಗಿ ಅನೇಕ ಜನರು ಆಯ್ಕೆಯಾಗಿದ್ದಾರೆ.
ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ ಜನಪ್ರಿಯ ಶಾಸಕರಾದ ವಿಜಯಾನಂದ ಕಾಶಪ್ಪನವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ನೂತನ ಅಧ್ಯಕ್ಷರಾದ ರಾಯನಗೌಡ ಗೌಡರ ಹೇಳಿದರು.
ವರದಿಗಾರರು: ಶರಣಗೌಡ ಕಂದಕೂರ